Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ಮದುವೆಗೆ ಸಿದ್ಧನಾಗಿದ್ದ ವರನಿಗೆ ಏನಾಯ್ತು ನೋಡಿ!

Viral Wedding Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh'ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.

Written by - Puttaraj K Alur | Last Updated : Jul 13, 2023, 01:26 PM IST
  • ಬೋಳು ತಲೆಯ ವಿಷಯ ಮುಚ್ಚಿಟ್ಟು 2ನೇ ಮದುವೆಗೆ ಪ್ರಯತ್ನ
  • ವಿಗ್ ಧರಿಸಿದ್ದ ವ್ಯಕ್ತಿಗೆ ಮನಬಂದಂತೆ ಥಳಿಸಿದ ಹುಡುಗಿ ಸಂಬಂಧಿಕರು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ವಿಡಿಯೋ
Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ಮದುವೆಗೆ ಸಿದ್ಧನಾಗಿದ್ದ ವರನಿಗೆ ಏನಾಯ್ತು ನೋಡಿ! title=
ಸಖತ್ ವೈರಲ್ ಆಗುತ್ತಿದೆ ವಿಡಿಯೋ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಮದುವೆಯಾಗುವ ಯುವಕನಿಗೆ ಸರ್ಕಾರಿ ನೌಕರಿ, ಆಸ್ತಿ-ಪಾಸ್ತಿ, ನೋಡಲು ಸುಂದರವಾಗಿರಬೇಕು ಜೊತೆಗೆ ತಲೆತುಂಬಾ ಕೂದಲು ಇರಬೇಕು ಹೀಗೆ ಹಲವಾರು ಡಿಮ್ಯಾಂಡ್‍ಗಳಿರುತ್ತವೆ. ‘ಸಾವಿರ ಸುಳ್ಳು ಹೇಳಿ ಮದುವೆ ಮಾಡು’ ಮಾಡಿ ಅನ್ನೋ ಗಾದೆ ಮಾತೇ ಇದೆ. ಅದರಂತೆ ಇಲ್ಲೊಬ್ಬ ತನ್ನ ಬೋಳು ತಲೆಯ ವಿಷಯವನ್ನು ಮುಚ್ಚಿಟ್ಟು ಮದುವೆಯಾಗಲು ಹೋಗಿ ಪಿಕಲಾಟ ಅನುಭವಿಸಿದ್ದಾನೆ.

ಹೌದು, ಬಿಹಾರದ ಗಯಾ ಜಿಲ್ಲೆಯಲ್ಲಿ ಮದುವೆ ಸಮಾರಂಭದಲ್ಲಿ ವರನಿಗೆ ಬೋಳು ತಲೆ ಇದೆ ಎಂಬುದು ಬಯಲಾದ ನಂತರ ಆತನನ್ನು ಮನಬಂದಂತೆ ಥಳಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವರನಿಗೆ ವಧುವಿನ ಮನೆಯವರು ಥಳಿಸುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೃಶ್ಯವನ್ನೂ ನೀವು ನೋಡಬಹುದು. ಕುಳಿತುಕೊಂಡು ಸಮಜಾಯಿಸಿ ನೀಡುತ್ತಿದ್ದ ವರನಿಗೆ ವಧುವಿನ ಕಡೆಯವರು ಮನಬಂದಂತೆ ಥಳಿಸಿದ್ದಾರೆ.

ಇದನ್ನೂ ಓದಿ: Supreme Court ಗೆ ಇಬ್ಬರು ನೂತನ ನ್ಯಾಯಾಧೀಶರ ನೇಮಕ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh'ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ. ಈ ಬೋಳು ತಲೆಯ ವರ ಗಯಾದ ಇಕ್ಬಾಲ್‌ಪುರ ಪ್ರದೇಶದ ನಿವಾಸಿಯಾಗಿದ್ದು, ಬಜೌರಾ ಗ್ರಾಮದಲ್ಲಿ 2ನೇ ಮದುವೆಗೆ ಸಿದ್ಧನಾಗಿದ್ದ. ಮದುವೆ ಸಮಾರಂಭದಲ್ಲಿ ಆತ ವಿಗ್ ಬಳಸಿ ತನ್ನ ಬೋಳು ತಲೆಯನ್ನು ಮರೆಮಾಚಿದ್ದ. ಆದರೆ ಆತನಿಗೆ ಬೋಳು ತಲೆಯಿದೆ ಎಂದು ವಧುವಿನ ಸಂಬಂಧಿಕರಿಗೆ ಗೊತ್ತಾಗಿದೆ. ಆತನ ಬೋಳುತಲೆಯ ಬಗ್ಗೆ ಅನುಮಾನಗೊಂಡ ಅವರು ಅವನ ಕೂದಲನ್ನು ಎಳೆಯಲು ಪ್ರಾರಂಭಿಸಿದರು. ಈ ವೇಳೆ ತನ್ನ ತಪ್ಪಿಗೆ ಕ್ಷಮೆಯಾಚಿಸುತ್ತಿದ್ದರೂ ಆತನಿಗೆ ಥಳಿಸಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ವರನಿಗೆ ಬಂದಿರುವ ಪಜೀತಿ ಕಂಡು ನಕ್ಕಿದ್ದಾರೆ.

ಇದನ್ನೂ ಓದಿ: Odisha Train Mishap: ಬಾಲಾಸೊರ್ ರೈಲು ದುರಂತ ಪ್ರಕರಣ, ರೇಲ್ವೆ ವಿಭಾಗದ 7 ಜನ ಸಿಬ್ಬಂದಿ ಅಮಾನತು

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

 

Trending News