Viral Video: ಚರಂಡಿ ಗೇಟ್ ಕಂಡು ಈತ ಮಾಡಿದ್ದೇನು ನೋಡಿ: ಈ ಭೂಮಿಯಲ್ಲಿ ಯಾವುದು ಸೇಫ್ ಅಲ್ಲ ಹುಷಾರು!

ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮೀಮ್ಸ್ ಪೇಜ್ 'videonation.teb' ಮೂಲಕ ಹಂಚಿಕೊಳ್ಳಲಾಗಿದೆ. ಈಗಾಗಲೆ 24.5k ವೀಕ್ಷಣೆಗಳು ಮತ್ತು 2.1k ಲೈಕ್‌ ಬಂದಿದೆ. "ಕುಚ್ ಭಿ ಸೇಫ್ ನಹೀ ಹೈ ಯಹಾ," ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

Written by - Bhavishya Shetty | Last Updated : Oct 11, 2022, 05:02 PM IST
    • ರಸ್ತೆಯ ಚರಂಡಿಗೆ ಅಡ್ಡವಾಗಿಟ್ಟಿರುವ ಗೇಟ್ ಕದ್ದ ಕಳ್ಳ
    • ಇದರ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ
    • ಈಗಾಗಲೆ 24.5k ವೀಕ್ಷಣೆಗಳು ಮತ್ತು 2.1k ಲೈಕ್‌ ಬಂದಿದೆ
Viral Video: ಚರಂಡಿ ಗೇಟ್ ಕಂಡು ಈತ ಮಾಡಿದ್ದೇನು ನೋಡಿ: ಈ ಭೂಮಿಯಲ್ಲಿ ಯಾವುದು ಸೇಫ್ ಅಲ್ಲ ಹುಷಾರು!  title=
Funny Theft Video

Today Viral Video: ಕಳ್ಳರು ಸರಗಳನ್ನು ಅಥವಾ ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳುವುದನ್ನು ಅಥವಾ ಪಿಕ್‌ಪಾಕೆಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ರಸ್ತೆಯ ಚರಂಡಿಗೆ ಅಡ್ಡವಾಗಿಟ್ಟಿರುವ ಗೇಟ್ ಕದಿಯುವುದನ್ನು ಎಂದಾದರು ಕಂಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ. ಇದರ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮೀಮ್ಸ್ ಪೇಜ್ 'videonation.teb' ಮೂಲಕ ಹಂಚಿಕೊಳ್ಳಲಾಗಿದೆ. ಈಗಾಗಲೆ 24.5k ವೀಕ್ಷಣೆಗಳು ಮತ್ತು 2.1k ಲೈಕ್‌ ಬಂದಿದೆ. "ಕುಚ್ ಭಿ ಸೇಫ್ ನಹೀ ಹೈ ಯಹಾ," ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

 

 

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಮಧ್ಯರಾತ್ರಿ ರಸ್ತೆಬದಿಯಲ್ಲಿ ತನ್ನ ಸ್ಕೂಟರ್ ನಿಲ್ಲಿಸುತ್ತಿರುವುದನ್ನು ಕಾಣಬಹುದು. ಆತ ರಸ್ತೆಯಲ್ಲಿ ಯಾರೂ ಇಲ್ಲವೇ ಎಂದು ಪರಿಶೀಲಿಸುತ್ತಾನೆ. ನಂತರ ಹೋಗಿ ಡ್ರೈನ್ ಗೇಟ್ ನ್ನು ಮೆಲ್ಲಗೆ ತೆಗೆದುಕೊಳ್ಳುತ್ತಾನೆ. ನಂತರ ತನ್ನ ಸ್ಕೂಟರ್‌ ಸೀಟ್ ಮೇಲೆ ಇಟ್ಟು, ಅದರ ಮೇಲೆ ಈತ ಕುಳಿತುಕೊಂಡು ಎತ್ತಲೂ ದೃಷ್ಟಿ ನೆಟ್ಟಿಸದೆ ಹೋಗುತ್ತಾನೆ.

ಇದನ್ನೂ ಓದಿ: Viral Video: ಒಂದೆಡೆ ಮದುವೆ ನಡೆಯುತ್ತಿದೆ…ಇನ್ನೊಂದೆಡೆ ನಿದ್ದೆ ತಡೆಯಲಾಗದೆ ವಧು ಮಾಡಿದ್ದೇನು ನೋಡಿ…

ವಿಡಿಯೋ ಕಂಡ ಯಾರಿಗಾದರೂ ಎನಿಸುವುದು, ಈ ಭೂಮಿಯಲ್ಲಿ ಯಾವುದು ಸೇಫ್ ಅಲ್ಲ ಎಂದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News