ಫ್ಲೋರಿಡಾ: ವಿಮಾನ ನಿಲ್ದಾಣವನ್ನು ತಲುಪಿದ ನಂತರ, ವಿಮಾನವು ಹಲವಾರು ಗಂಟೆಗಳಷ್ಟು ವಿಳಂಬವಾಗಿದೆ ಎಂಬುದು ನಿಮ್ಮ ತಿಳುವಳಿಕೆಗೆ ಬಂದರೆ ನೀವು ಏನು ಮಾಡುತ್ತೀರಿ? ಬಹುಶಃ ವಿಮಾನಕ್ಕಾಗಿ ಕಾಯುತ್ತಾ ಕಿರುನಿದ್ದೆಗೆ ಜಾರಬಹುದು. ಫ್ಲೋರಿಡಾದ ಒರ್ಲ್ಯಾಂಡೊ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಅದೇ ರೀತಿ ಮಾಡಿದ್ದಾರೆ. ವಿಮಾನಕ್ಕಾಗಿ ಕಾಯುತ್ತಾ, ತನ್ನ ಬ್ಯಾಗ್ಗಳ ಮೇಲೆ ಕೈಯಿಟ್ಟು ವ್ಯಕ್ತಿ ನಿದ್ರೆಗೆ ಜಾರಿದ್ದಾರೆ, ಅದರ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವ್ಯಕ್ತಿ ಸುಮಾರು 40 ವರ್ಷಗಳ ಕಾಲದಿಂದ ಹಾಗೆಯೇ ಮಲಗಿದ್ದಾನೆ ಎನ್ನಲಾಗುತ್ತಿದೆ, ಆದರೆ ಇದು ಹೇಗೆ ಸಾಧ್ಯ, ಒಬ್ಬ ವ್ಯಕ್ತಿಯು 40 ವರ್ಷಗಳವರೆಗೆ ನಿರಂತರವಾಗಿ ಹೇಗೆ ಮಲಗಲು ಸಾಧ್ಯ? ಇದು ಬೇರೆಯದ್ದೇನೋ ಇದೆ ಎಂದು ನಿಮ್ಮ ಯೋಚನೆಯಾಗಿರಬಹುದು, ಏಕೆಂದರೆ ಒಬ್ಬ ವ್ಯಕ್ತಿಯು 40 ವರ್ಷಗಳವರೆಗೆ ಒಂದೇ ಸ್ಥಳದಲ್ಲಿ ಒಂದೇ ಭಂಗಿಯಲ್ಲಿ ಮಲಗಲು ಸಾಧ್ಯವಿಲ್ಲ, ಒಂದು ವಿಗ್ರಹವನ್ನು ಮಾತ್ರ ಒಂದೇ ಸ್ಥಳದಲ್ಲಿ ಈ ಕೆಲಸ ಮಾಡಬಹುದು. ನೀವೂ ಕೂಡ ಇದೇ ರೀತಿ ಯೋಚಿಸುತ್ತಿದ್ದರೆ, ನೀವು ಸರಿಯಾಗಿಯೇ ಯೋಚಿಸುತ್ತಿರುವಿರಿ. ವಿಮಾನಕ್ಕಾಗಿ ಕಾಯುತ್ತಿರುವಾಗ ವಿಮಾನನಿಲ್ದಾಣದಲ್ಲಿ ಮಲಗಿರುವ ವ್ಯಕ್ತಿ ವಾಸ್ತವದಲ್ಲಿ ಒಂದು ಹೈಪರ್-ರಿಯಲಿಸ್ಟಿಕ್ ಪ್ರತಿಮೆಯಾಗಿದೆ.
ಈ ಪ್ರತಿಮೆಯ ವೀಡಿಯೊವನ್ನು heyitsnava ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ, ಇದು ಇಂಟರ್ನೆಟ್ ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೀಡಿಯೊವನ್ನು ಪೋಸ್ಟ್ ಮಾಡಿದ ಕೇವಲ ಒಂದು ವಾರದಲ್ಲಿ, ಇದನ್ನು 6.7 ಮಿಲಿಯನ್ ಇನ್ಸ್ಟಾಗ್ರಾಮ್ ಬಳಕೆದಾರರು ವೀಕ್ಷಿಸಿದ್ದಾರೆ. ವೀಡಿಯೊಗೆ ಲೈಕ್ಗಳು ಮತ್ತು ಕಾಮೆಂಟ್ಗಳ ಸುರಿಮಳೆಯಾಗುತ್ತಿದೆ. 322K ಬಳಕೆದಾರರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ ಮತ್ತು ವೀಡಿಯೊವನ್ನು 244K ಬಾರಿ ಹಂಚಿಕೊಳ್ಳಲಾಗಿದೆ. ವಿಶೇಷವೆಂದರೆ ಇನ್ನೂ ಅನೇಕ ಬಳಕೆದಾರರು ವೀಡಿಯೊದಲ್ಲಿ ನೋಡಿದ ವ್ಯಕ್ತಿಯನ್ನು ನಿಜವೆಂದು ಪರಿಗಣಿಸುತ್ತಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಒಬ್ಬ ಬಳಕೆದಾರರು ಈ ವ್ಯಕ್ತಿಯು ಜೀವಂತವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ, ಮತ್ತೊರ್ವ ಬಳಕೆದಾರರು ಆತನ ಮುಖದ ಮೇಲೆ ನೀರು ಸಿಂಪಡಿಸಿ ಆತನನ್ನು ಎಬ್ಬಿಸಿ ಎಂದು ಸಲಹೆ ನೀಡಿದ್ದಾರೆ,
ಇದನ್ನೂ ಓದಿ-Shocking Video: ಹೊಸ ವರ್ಷದ ಪಾರ್ಟಿಯಲ್ಲಿ ಫುಲ್ ಟಲ್ಲಿಯಾಗಿ ದಾಂಧಲೆ ಮಾಡಿದ ಯುವತಿ... ಇಲ್ಲಿದೆ ವಿಡಿಯೋ!
ವಾಸ್ತವದಲ್ಲಿ ಈ ಸಂಪೂರ್ಣ ಗೊಂದಲ ಏಕೆ ನಿರ್ಮಾಣಗೊಂಡಿದೆ ಎಂದರೆ, ಒರ್ಲ್ಯಾಂಡೊ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರಿಸಲಾಗಿರುವ ಈ ಪ್ರತಿಮೆಯು ಸಂಪೂರ್ಣವಾಗಿ ನೈಜವಾಗಿದೆ ಎಂಬಂತೆ ಕಾಣುತ್ತಿದೆ. ದಿ ಟ್ರಾವೆಲರ್ ಹೆಸರಿನ ಈ ಪ್ರತಿಮೆಯನ್ನು ವಿಮಾನ ನಿಲ್ದಾಣದಲ್ಲಿ ಗಾಜಿನ ಮನೆ ನಿರ್ಮಿಸಿ ಮಧ್ಯದಲ್ಲಿ ಇರಿಸಲಾಗಿದೆ. ಒರ್ಲ್ಯಾಂಡೊ ರಾಷ್ಟ್ರೀಯ ವಿಮಾನ ನಿಲ್ದಾಣವು ಈ ಪ್ರತಿಮೆಯನ್ನು ಕಲಾವಿದ ಡುವಾನ್ ಹ್ಯಾನ್ಸನ್ ಅವರಿಂದ 1986 ರಲ್ಲಿ ಖರೀದಿಸಿದೇ. ವಿಮಾನ ನಿಲ್ದಾಣದ ಪೂರ್ವ ಮತ್ತು ಪಶ್ಚಿಮ ಭದ್ರತಾ ಸ್ಥಾವರಗಳ ನಡುವೆ ಟರ್ಮಿನಲ್ A ಬಳಿ ನೀವು ಈ ಪ್ರತಿಮೆಯನ್ನು ನೋಡಬಹುದು. ಡುವಾನ್ ಹ್ಯಾನ್ಸನ್ 1996 ರಲ್ಲಿ ನಿಧನರಾಗಿದ್ದಾರೆ, ಆದರೆ ಇಂದಿಗೂ ಅವರು ತಮ್ಮ ಹೈಪರ್-ರಿಯಲಿಸ್ಟಿಕ್ ಶಿಲ್ಪಗಳಿಗೆ ಹೆಸರುವಾಸಿಯಾಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ