Making of roadside noodles viral video: ಪ್ರತಿದಿನ ಸಾವಿರಾರು ವೀಡೀಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಉಲ್ಲಾಸ, ದುಃಖ, ಸಂತೋಷ ಅಥವಾ ಯಾವುದೇ ರೀತಿಯ ಭಾವವನ್ನು ವ್ಯಕ್ತಪಡಿಸುವ ವೀಡಿಯೊ ಅದಾಗಿರುತ್ತದೆ. ಆದರೆ, ಇತ್ತೀಚೆಗೆ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ.
ನೀವು ಆಹಾರ ಪ್ರಿಯರಾಗಿದ್ದರೆ, ಅದರಲ್ಲೂ ಸ್ಟ್ರೀಟ್ ಫುಡ್ ಇಷ್ಟಪಟ್ಟು ತಿನ್ನುವವರು ನೀವಾಗಿದ್ರೆ, ಈ ವಿಡಿಯೋ ನಿಮಗೆ ಅಚ್ಚರಿ ನೀಡೋದು ಖಂಡಿತ. ಸಾಮಾನ್ಯವಾಗಿ ಕಡಿಮೆ ಬೆಲೆಗೆ ರುಚಿಕರವಾದ ಸ್ಟ್ರೀಟ್ ಫುಡ್ʼಗಳನ್ನು ತಿನ್ನಲು ಅನೇಕ ಜನರು ಬರುತ್ತಾರೆ. ಆದರೆ ಅದಕ್ಕೂ ಮುನ್ನ ಅದನ್ನು ತಯಾರಿಸುವಾಗ ಅನುಸರಿಸುವ ಸ್ವಚ್ಛತೆ ಬಗ್ಗೆ ಎಂದಿಗೂ ಆಲೋಚನೆಯನ್ನೂ ಮಾಡಲ್ಲ.
ಆದರೆ ಈ ವಿಡಿಯೋ ನೋಡಿದ್ರೆ ಫಾಸ್ಟ್ ಫುಡ್ ತಿನ್ನುವ ಮೊದಲು ನೂರು ಬಾರಿ ಆಲೋಚನೆ ಮಾಡೋದು ಗ್ಯಾರಂಟಿ.
ಪಿಎಫ್ʼಸಿ ಕ್ಲಬ್ ಸಂಸ್ಥಾಪಕ ಚಿರಾಗ್ ಬರ್ಜತ್ಯಾ ಎಂಬವರು ಈ ವೀಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ನೂಡಲ್ಸ್ ತಯಾರಿ ಮಾಡಲು ಹಿಟ್ಟನ್ನು ತಯಾರಿಸುತ್ತಿರುವುದು, ನಂತರ ಅದನ್ನು ಮಿಕ್ಸ್ ಮಾಡುವುದು, ನೂಡಲ್ಸ್ ತಯಾರಿಸಿ ಅದನ್ನು ನೆಲದಲ್ಲೀಯೇ ಹದ ಮಾಡುತ್ತಿರುವುದು ಕಾಣಿಸುತ್ತಿದೆ. ಅಷ್ಟೇ ಅಲ್ಲದೆ, ನೂಡಲ್ಸ್ ತಯಾರಿಸುವ ಸಂದರ್ಭದಲ್ಲಿ ಕಾರ್ಮಿಕರು ಕೈಗವಸು ಧರಿಸಿಲ್ಲ ಎಂಬುದು ಕೂಡ ಇಲ್ಲಿ ಕಾಣಬಹುದು.
ಇದನ್ನೂ ಓದಿ: ಕೂಡಲೇ ರಾಜೀನಾಮೆ ಕೊಟ್ಟರೆ ಒಳಿತು; ಮುಖ್ಯಮಂತ್ರಿ ರಾಜೀನಾಮೆಗೆ ಕ್ಷಣಗಣನೆ: ಬಿ.ವೈ ವಿಜಯೇಂದ್ರ
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಕಾಮೆಂಟ್ ಸುರಿಮಳೆಯಾಗುತ್ತಿದೆ. ಇನ್ನು ನೂಡಲ್ಸ್ ತಯಾರಿಸುವ ಆ ವಿಡಿಯೋವನ್ನು ಇಲ್ಲಿ ನೋಡಿ
When was the last time you had road side chinese hakka noodles with schezwan sauce? pic.twitter.com/wGYFfXO3L7
— Chirag Barjatya (@chiragbarjatyaa) January 18, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ