ಭಾರತದ ಬಳಿಕ ಇದೀಗ ಚೀನಾಗೆ ಭಾರಿ ಆರ್ಥಿಕ ಪೆಟ್ಟು ನೀಡಲು ಮುಂದಾದ ಅಮೇರಿಕಾ

 ಭಾರತದ ಬಳಿಕೆ ಇದೀಗ ಅಮೇರಿಕಾ ಕೂಡ ಚೀನಾಗೆ ಭಾರಿ ಆರ್ಥಿಕ ಪೆಟ್ಟಿ ನೀಡಲು ಚಿಂತನೆ ನಡೆಸುತ್ತಿದೆ.

Last Updated : Jul 7, 2020, 01:28 PM IST
ಭಾರತದ ಬಳಿಕ ಇದೀಗ ಚೀನಾಗೆ ಭಾರಿ ಆರ್ಥಿಕ ಪೆಟ್ಟು ನೀಡಲು ಮುಂದಾದ ಅಮೇರಿಕಾ title=

ವಾಷಿಂಗ್ಟನ್: ಭಾರತದ ಬಳಿಕೆ ಇದೀಗ ಅಮೇರಿಕಾ ಕೂಡ ಚೀನಾಗೆ ಭಾರಿ ಆರ್ಥಿಕ ಪೆಟ್ಟಿ ನೀಡಲು ಚಿಂತನೆ ನಡೆಸುತ್ತಿದೆ. ಹೌದು, ಚೀನಾದ ಖ್ಯಾತ ಮೊಬೈಲ್ ಆಪ್ ಟಿಕ್ ಟಾಕ್ ಸೇರಿದಂತೆ ಚೀನಾದ ಹಲವಾರು ಮುಬೈಲ್ ಆಪ್ ಗಳನ್ನು ನಿಷೇಧಿಸಲು ಅಮೇರಿಕಾ ಗಂಭೀರ ಚಿಂತನೆ ನಡೆಸುತ್ತಿದೆ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಚೀನಾದ ಆ್ಯಪ್ ಗಳ ಮೇಲೆ ನಿಷೇಧವಿಧಿಸುವುದನ್ನು ನಾವು ಖಂಡಿತವಾಗಿ ಪರಿಗಣಿಸುತ್ತಿದ್ದೇವೆ ಎಂದು ಅವರು ಹೇಳಿದ್ದರೆ. ಇನ್ನೊಂದೆಡೆ ಆಸ್ಟ್ರೇಲಿಯಾದಲ್ಲೂ ಚೀನಾ ಮೂಲದ ಆ್ಯಪ್ ಗಳನ್ನು ನಿಷೇಧಿಸುವ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಟಿಕ್ ಟಾಕ್ ನಿಷೇಧದಿಂದಾಗಿ ಚೀನಾದ ಕಂಪನಿ ಸುಮಾರು 6 ಶತಕೋಟಿ ಡಾಲರ್ ಗಳಷ್ಟು ನಷ್ಟ ಅನುಭವಿಸಿದೆ.

ಇದಕ್ಕೂ ಮೊದಲು ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದರ ನಂತರ, ಚೀನಾದ ಕಂಪನಿಗಳು ಭಾರತೀಯ ಬಳಕೆದಾರರ ಡೇಟಾವನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದು ಸರ್ಕಾರಕ್ಕೆ ಮಾಡುವಲ್ಲಿ ನಿರತವಾಗಿವೆ. ಟಿಟ್ಟಾಕ್ ಸಿಇಒ ಕೆವಿನ್ ಮೇಯರ್ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದು, ಚೀನಾ ಸರ್ಕಾರ ಎಂದಿಗೂ ಬಳಕೆದಾರರ ಡೇಟಾವನ್ನು ತಮ್ಮ ಕಂಪನಿಯ ಬಳಿ ಕೋರಿಲ್ಲ ಎಂದು ಹೇಳಿದ್ದಾರೆ.

ವುಹಾನ್ ನಿಂದ ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿರುವ ಆರೋಪದ ಮೇಲೆ ಈಗಾಗಲೇ ಅಮೇರಿಕಾ ನಿರಂತರವಾಗಿ ಚೀನಾ ಮೇಲೆ ವಾಗ್ದಾಳಿ ಮುಂದುವರೆಸಿದೆ. ಈ ನಡುವೆ ಇಂಡೋ-ಚೀನಾ ಗಾಡಿಯಲ್ಲಿ ಸೈನಿಕರ ನಡುವೆ ಸಂಭವಿಸಿರುವ ಹಿಂಸಾತ್ಮಕ ಘರ್ಷಣೆಯಾ ಬಳಿಕ ಭಾರತವನ್ನು ಬೆಂಬಲಿಸಿದ್ದ ಅಮೇರಿಕಾ, ಬಳಿಕ ಚೀನಾ ಮೇಲೆ ತೀವ್ರವಾಗಿ ಟೀಕಿಸಿತ್ತು.

ಭಾರತದಲ್ಲಿ ಚೀನಾ ಆಪ್ ಗಳ ಮೇಲೆ ನಿಷೇಧ ಘೋಷಣೆಯಾದ ಬಳಿಕ ಭಾರತದ ನಿರ್ಣಯವನ್ನು ಪಾಂಪಿಯೋ ಬೆಂಬಲಿಸಿದ್ದರು, ಈ ಕುರಿತು ಹೇಳಿಕೆ ನೀಡಿದ್ದ ಅವರು ಕೆಲ ಮೊಬೈಲ್ ಅಪ್ಪ್ಲಿಕೆಶನ್ ಗಳನ್ನು ನಿಷೇಧಿಸುವ ಭಾರತದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದು ಪಾಂಪಿಯೋ ಹೇಳಿದ್ದರು. ಈ ವೇಳೆ ಚೀನಾದ ಆಪ್ ಗಳು ಚೀನಾದ ಕಮುನಿಸ್ಟ್ ಪಾರ್ಟಿ ಆಫ್ ಚೀನಾದ ಕಣ್ಗಾವಲಿನ ಭಾಗವಾಗಿವೆ ಎಂದು ಪಾಂಪಿಯೋ ವಿಶ್ಲೆಶಿಸಿದ್ದರು. ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಭಾರತ ಕೈಗೊಂಡ ಕ್ರಮ ಭಾರತದ ಅಖಂಡತೆ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದರು. ಪಾಂಪಿಯೋ ಹೇಳಿರುವ ಹೇಳಿಕೆ ಭಾರತ ನೀಡಿದ ಹೇಳಿಕೆಯ ಬೆನ್ನಲ್ಲೇ ಪ್ರಕಟಗೊಂಡಿದ್ದು ಇಲ್ಲಿ ಗಮನಾರ್ಹ.

Trending News