Chinaದಲ್ಲಿ ಲ್ಯಾಂಡ್ ಆದ ಇರಾನ್ ವಿಮಾನ, ಹುಸಿ ಸಾಬೀತಾದ ಬಾಂಬ್ ಬೆದರಿಕೆ

Iran-China Flight: ನಾಲ್ಕು ದೇಶಗಳಲ್ಲಿ ಭಾರಿ ಸಂಚಲನಕ್ಕೆ ಕಾರಣವಾದ ಇರಾನ್‌ನ ಫ್ಲೈಯಿಂಗ್ ಬಾಂಬ್ ಎಂದೇ ಹೇಳಲಾದ ವಿಮಾನವು ಅಂತಿಮವಾಗಿ ಚೀನಾದ ಗುವಾಂಗ್‌ಝೌನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಿಂದ ಈ ವಿಮಾನ ಹಾರಾಟ ನಡೆಸಿತ್ತು. ಅದು ಭಾರತೀಯ ವಾಯುಪ್ರದೇಶದ ಮೂಲಕ ಹಾದುಹೋದಾಗ, ಈ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆಯೊಡ್ಡಲಾಗಿತ್ತು. ಈ ಮಾಹಿತಿ ಸಿಕ್ಕ ತಕ್ಷಣ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಅದರ ಬೆನ್ನತ್ತಿ ಹೋಗಿದ್ದವು. ಆದರೆ, ಮಹಾನ್ ಏರ್ ವಿಮಾನದ ಪೈಲಟ್ ಭಾರತದಲ್ಲಿ ಇಳಿಯಲು ನಿರಾಕರಿಸಿದ್ದರು.  

Written by - Nitin Tabib | Last Updated : Oct 3, 2022, 05:57 PM IST
  • ಇದು ಭಾರತ, ಪಾಕಿಸ್ತಾನ್, ಚೀನಾ ಮತ್ತು ಇರಾನ್‌ಗೆ ಸಮಾಧಾನಕರ ಸುದ್ದಿ ಎಂದರೆ ತಪ್ಪಾಗಲಾರದು.
  • ನಾಲ್ಕೂ ದೇಶಗಳಲ್ಲಿ ಭಾರಿ ಸಂಚಲನ ಮೂಡಿಸಿದ ನಂತರ ಮಹಾನ್ ಏರ್ ಫ್ಲೈಟ್ ನಂಬರ್ ಡಬ್ಲ್ಯು-581
  • ಯಾವುದೇ ತೊಂದರೆಯಿಲ್ಲದೆ ಚೀನಾದ ಗುವಾಂಗ್‌ಝೌ ತಲುಪಿದೆ ಎಂದು ವರದಿಯಾಗಿದೆ.
Chinaದಲ್ಲಿ ಲ್ಯಾಂಡ್ ಆದ ಇರಾನ್ ವಿಮಾನ, ಹುಸಿ ಸಾಬೀತಾದ ಬಾಂಬ್ ಬೆದರಿಕೆ title=
Air Bomb Threat

Air Bomb Threat: Iran-China Flight: ಇದು ಭಾರತ, ಪಾಕಿಸ್ತಾನ್, ಚೀನಾ ಮತ್ತು ಇರಾನ್‌ಗೆ ಸಮಾಧಾನಕರ ಸುದ್ದಿ ಎಂದರೆ ತಪ್ಪಾಗಲಾರದು. ನಾಲ್ಕೂ ದೇಶಗಳಲ್ಲಿ ಭಾರಿ ಸಂಚಲನ ಮೂಡಿಸಿದ ನಂತರ ಮಹಾನ್ ಏರ್ ಫ್ಲೈಟ್ ನಂಬರ್ ಡಬ್ಲ್ಯು-581 ಯಾವುದೇ ತೊಂದರೆಯಿಲ್ಲದೆ ಚೀನಾದ ಗುವಾಂಗ್‌ಝೌ ತಲುಪಿದೆ ಎಂದು ವರದಿಯಾಗಿದೆ.  ಈ ವಿಮಾನವು ಇರಾನ್‌ನ ರಾಜಧಾನಿ ಟೆಹ್ರಾನ್‌ನಿಂದ ಚೀನಾದ ಗುವಾಂಗ್‌ಝೌಗೆ ಪ್ರಯಾಣ ಬೆಳೆಸಿತ್ತು. ಆದರೆ, ಸೋಮವಾರ ಬೆಳಗ್ಗೆ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದಾಗ ಎಲ್ಲಿಂದಲೋ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಬೆದರಿಕೆಯನ್ನು ಸ್ವೀಕರಿಸಿದ ನಂತರ, ಈ ಹಾರಾಟವನ್ನು ನಿಲ್ಲಿಸಲು ಭಾರತೀಯ ವಾಯುಪಡೆಯು ತನ್ನ ಯುದ್ಧ ವಿಮಾನ ಸುಖೋಯ್ Su-30MKI ಅನ್ನು ಕಳುಹಿಸಿತ್ತು.

ಇದನ್ನೂ ಓದಿ-Iran Plane Bomb Threat: ಭಾರತೀಯ ವಾಯುಪ್ರದೇಶದಲ್ಲಿ ಹಾರುತ್ತಿರುವ ವಿಮಾನದಲ್ಲಿ ಬಾಂಬ್! 4 ದೇಶಗಳಲ್ಲಿ ಸಂಚಲನ, ಲಾಹೋರ್ ನಿಂದ ಬಂದ ಸುದ್ದಿ

ಈ ಘಟನೆಗೆ ಸಂಬಂಧಿಸಿದಂತೆ ವಾಯುಪಡೆ ನೀಡಿರುವ ಹೇಳಿಕೆಯಲ್ಲಿ, “ವಿಮಾನಕ್ಕೆ ಮೊದಲು ಜೈಪುರ ಮತ್ತು ನಂತರ ಚಂಡೀಗಢದಲ್ಲಿ ಇಳಿಯುವ ಆಯ್ಕೆಯನ್ನು ನೀಡಲಾಯಿತು. ಆದರೆ, ಎರಡು ವಿಮಾನ ನಿಲ್ದಾಣಗಳಲ್ಲಿ ವಿಮಾನವನ್ನು ಇಳಿಸಲು ಬಯಸುವುದಿಲ್ಲ ಎಂದು ಪೈಲಟ್ ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ, ಬಾಂಬ್ ಎಚ್ಚರಿಕೆಯನ್ನು ನಿರ್ಲಕ್ಷಿಸುವಂತೆ ಟೆಹ್ರಾನ್‌ನಿಂದ ಸಂದೇಶ ಬಂದಿದೆ. ನಂತರ ವಿಮಾನವು ತನ್ನ ಅಂತಿಮ ಗಮ್ಯಸ್ಥಾನದ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿದೆ ಎಂದು ಹೇಳಿದೆ.

ಇದನ್ನೂ ಓದಿ-Nobel Prize 2022: ಸ್ವಾಂಟೆ ಪಾಬೊ ಅವರಿಗೆ ವೈದ್ಯಕೀಯ ಶಾಸ್ತ್ರದ ನೊಬೆಲ್ ಪ್ರಶಸ್ತಿ

ನಿಗದಿತ ಕಾರ್ಯವಿಧಾನದ ಕ್ರಮ ಕೈಗೊಂಡ ವಾಯುಪಡೆ
"ಎಲ್ಲಾ ಕ್ರಮಗಳನ್ನು ಭಾರತೀಯ ವಾಯುಪಡೆಯು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (ಬಿಸಿಎಎಸ್) ಜೊತೆಗೆ ನಿಗದಿತ ಕಾರ್ಯವಿಧಾನದ ಪ್ರಕಾರ ಜಂಟಿಯಾಗಿ ತೆಗೆದುಕೊಂಡಿದೆ" ಎಂದು ಹೇಳಿಕೆ ತಿಳಿಸಿದೆ. ಭಾರತೀಯ ವಾಯುಪ್ರದೇಶದಲ್ಲಿ ಹಾರಾಟದ ಸಮಯದಲ್ಲಿ, ಇರಾನ್ ವಿಮಾನವು ವಾಯುಪಡೆಯ ನಿಕಟ ರಾಡಾರ್ ಕಣ್ಗಾವಲು ಅಡಿಯಲ್ಲಿತ್ತು ಎಂದು ಹೇಳಲಾಗಿದೆ. ಇರಾನ್ ವಿಮಾನವು ಭಾರತೀಯ ವಾಯುಪ್ರದೇಶದಲ್ಲಿದ್ದಾಗ ದೆಹಲಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ವಾಯುಪಡೆಯೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎಂದು ಹೇಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News