ನವದೆಹಲಿ: ಇತ್ತೀಚಿಗೆ ನಡೆದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನ ಉನ್ನತ ಮಟ್ಟದ ಸಭೆಯಲ್ಲಿ ಚೀನಾ ದೇಶವು ಪಾಕಿಸ್ತಾನದ ಮೂರು ಯೋಜನೆಗಳಿಗಾಗಿ ನೀಡುತ್ತಿದ್ದ ಹಣಕಾಸಿನ ನೆರವನ್ನು ಸ್ಥಗಿತಗೊಳಿಸಲಿದೆ ಎಂದು ತಿಳಿದುಬಂದಿದೆ.
ಈ ಎಲ್ಲ ಯೋಜನೆಗಳು ರಸ್ತೆಗೆ ಸಂಬಂಧಿಸಿದ ಯೋಜನೆಗಳಾಗಿವೆ. ಇದರಲ್ಲಿ ಪ್ರಮುಖವಾಗಿ ಕಾರಂಕೊರಂನ 136 ಕಿ.ಮಿ ದೂರದ ರಸ್ತೆ ಮಾರ್ಗವು ಪಾಕಿಸ್ತಾನದ ರಿಯಾಕೋಟ್ ದಿಂದ ತಾಕೋಟವರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.ಇದು ಪಾಕ್ ಮತ್ತು ಚೀನಾ ನಡುವಿರುವ ದ್ವಿಪಕ್ಷಿಯ ಸಂಬಂಧದಲ್ಲಿ ಕಾರಂಕೊರಂ ಅತ್ಯಂತ ಮಹತ್ತರವಾದ ಯೋಜನೆಯಾಗಿದೆ.ಇದಕ್ಕೆ ಭಾರತ ಈ ಹಿಂದೆ ಈ ಯೋಜನೆಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿತ್ತು.ಆದರೆ ಭಾರತದ ಆಕ್ಷೇಪದ ನಡುವೆಯೂ ಸಹಿತ ಈ ಯೋಜನೆಯನ್ನು ಅದು ಮುಂದುವರೆಸಿದ್ದನ್ನು ನಾವು ನೋಡಬಹುದು.ಆದರೆ ಇಗ ಈ ಯೋಜನೆಯಲ್ಲಿ ಕಂಡು ಬಂದ ಭ್ರಷ್ಟಾಚಾರದಿಂದಾಗಿ ಚೀನಾ ದೇಶವು ಪಾಕಿಸ್ತಾನ ದೇಶಕ್ಕೆ ಹಣಕಾಸು ಸಹಾಯವನ್ನು ನಿಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಈ ಕುರಿತಾಗಿ ವರದಿ ಮಾಡಿರುವ ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಡಾನ್ ಮುಂದೆ ಯೋಜನೆಗೆ ಸಂಬಂಧಿಸಿದ ಹಣಕಾಸಿನ ವಿಚಾರವಾಗಿ ಬೀಜಿಂಗ್ ನಿಂದ ಹೊಸ ನಿರ್ದೇಶನಗಳು ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.