Covid-19 Pandemic: ವಿಶ್ವದ ದೇಶಗಳಿಗೆ Corona Vaccine ತಲುಪಿಸುತ್ತಿರುವ ಭಾರತ, ಶ್ಲಾಘನೆ ವ್ಯಕ್ತಪಡಿಸಿದ UN

Covid-19 Pandemic: ಈ ಕುರಿತು ಹೇಳಿಕೆ ನೀಡಿರುವ UN ಪ್ರಧಾನ ಕಾರ್ಯದರ್ಶಿ, " ಭಾರತದ ಉತ್ಪಾದನಾ ಸಾಮರ್ಥ್ಯ ಇಂದು ವಿಶ್ವದ ಸರ್ವಶ್ರೇಷ್ಠ ಆಸ್ತಿಗಳಲ್ಲಿ ಒಂದಾಗಿದೆ ಹಾಗೂ ಅದರ ಸಂಪೂರ್ಣ ಬಳಕೆಯಾಗಬೇಕು ಎಂಬುದು ವಿಶ್ವಕ್ಕೂ ತಿಳಿದಿದೆ ಎಂಬುದು ನನ್ನ ಅಭಿಪ್ರಾಯ" ಎಂದಿದ್ದಾರೆ.

Written by - Nitin Tabib | Last Updated : Jan 29, 2021, 06:43 PM IST
  • ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ವಿಶ್ವದ ಸರ್ವಶ್ರೇಷ್ಠ ಆಸ್ತಿ ಎಂದ UN ಮುಖ್ಯಸ್ಥ.
  • ಭಾರತ ಒಂದು ಜಾಗತಿಕ ಔಷಧಾಲಯ ಹಾಗೂ ನಿಜವಾದ ಸ್ನೇಹಿತ ಎಂದು ಬಣ್ಣಿಸಿದ ಅಮೇರಿಕಾ ವಿದೇಶಾಂಗ ಇಲಾಖೆ.
  • ಭಾರತ ತನ್ನ ಔಷಧಿ ಕ್ಷೇತ್ರವನ್ನು ಜಾಗತಿಕ ಸಮುದಾಯದ ನೆರೆವಿಗೆ ಉಪಯೋಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಗುಟೆರಸ್.
Covid-19 Pandemic: ವಿಶ್ವದ ದೇಶಗಳಿಗೆ Corona Vaccine ತಲುಪಿಸುತ್ತಿರುವ ಭಾರತ, ಶ್ಲಾಘನೆ ವ್ಯಕ್ತಪಡಿಸಿದ UN title=
Covid-19 Pandemic (File Photo)

ನವದೆಹಲಿ:  Covid-19 Pandemic - ಕರೋನಾ ವೈರಸ್ ಸೋಂಕನ್ನು ಎದುರಿಸಲು ವಿಶ್ವದ ಅನೇಕ ದೇಶಗಳಿಗೆ ಲಸಿಕೆಗಳನ್ನು ನೀಡುವ ಭಾರತದ ಕ್ರಮವನ್ನು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ (Antonio Guterres) ಶ್ಲಾಘಿಸಿದ್ದಾರೆ. ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು (Vaccine production capacity of India) ಇಂದು ವಿಶ್ವದ ಪ್ರಮುಖ ಆಸ್ತಿಯಾಗಿದೆ. ಜಾಗತಿಕ ಲಸಿಕಾಕರಣವನ್ನು ಯಶಸ್ವಿಗೊಳಿಸಲು ಭಾರತದ ಬಳಿ ಅಗತ್ಯವಿರುವ ಎಲ್ಲಾ ರೀತಿಯ ಸಂಪನ್ಮೂಲಗಳಿವೆ ಎಂದು ಅವರು ಹೇಳಿದ್ದಾರೆ. "ಭಾರತದ ಮೇಲೆ ಎಷ್ಟೊಂದು ಭರವಸೆ ಇಡುತ್ತೇವೆ ಎಂದು ನಾವು ಹೇಳಲು ಬಯಸುತ್ತೇವೆ ಎಂದ ಗುಟೆರಸ್ (UN Chief Antonio Guterres), ಭಾರತ ಸರ್ವೋನ್ನತ ಔಷಧಿಯ ಉದ್ಯಮದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲು ಬಯಸುತ್ತೇನೆ" ಎಂದಿದ್ದಾರೆ. ಜೆನರಿಕ್ ಔಷಧಿ ತಯಾರಿಕಾ ಕ್ಷೇತ್ರದಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದ್ದು, ಇದು ಜಾಗತಿಕವಾಗಿ ಔಷಧಿ ತಲುಪಿಸುವ ನಿಟ್ಟಿನಲ್ಲಿ ತುಂಬಾ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Corona Vaccine Updates: ಕೊರೊನಾ ವ್ಯಾಕ್ಸಿನ್ ಕುರಿತು ವದಂತಿ ಹಬ್ಬಿಸಿದರೆ ಹುಷಾರ್! ಕೇಂದ್ರದ ವಾರ್ನಿಂಗ್

ಜಾಗತಿಕ ಮಹಾಮಾರಿ (Corona Pandemic) ವಿರುದ್ಧದ ಹೋರಾಟದಲ್ಲಿ ವಿಶ್ವದ ಎಲ್ಲಾ ದೇಶಗಳಿಗೆ ಭಾರತ ಪೂರೈಸುತ್ತಿರುವ ಕೊವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು,  " ಭಾರತದ ಉತ್ಪಾದನಾ ಸಾಮರ್ಥ್ಯ ಇಂದು ವಿಶ್ವದ ಸರ್ವಶ್ರೇಷ್ಠ ಆಸ್ತಿಗಳಲ್ಲಿ ಒಂದಾಗಿದೆ ಹಾಗೂ ಅದರ ಸಂಪೂರ್ಣ ಬಳಕೆಯಾಗಬೇಕು ಎಂಬುದು ವಿಶ್ವಕ್ಕೂ ತಿಳಿದಿದೆ ಎಂಬುದು ನನ್ನ ಅಭಿಪ್ರಾಯ" ಎಂದಿದ್ದಾರೆ. ಇನ್ನೊಂದೆಡೆ ವಿಶ್ವದ ಇತರೆ ದೇಶಗಳಿಗೂ ಕೂಡ ಭಾರತ ಕೊಡುಗೆಯಾಗಿ ನೀಡುತ್ತಿರುವ ಕೊರೊನಾ ಲಸಿಕೆಯ ಕುರಿತು ಅಮೇರಿಕಾ ಶ್ಲಾಘನೆ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೇರಿಕಾ, ಭಾರತವನ್ನು 'ನಿಜವಾದ ಸ್ನೇಹಿತ' ಎಂದು ಬಣ್ಣಿಸಿದ್ದು, ಜಾಗತಿಕ ಸಮುದಾಯಕ್ಕೆ ಸಹಾಯ ಮಾಡಲು ಭಾರತ ತನ್ನ ಔಷಧ ಕ್ಷೇತ್ರವನ್ನು ಬಳಸುತ್ತಿದೆ ಎಂದಿದೆ.

ಇದನ್ನು ಓದಿ-ಎರಡನೇ ಹಂತದಲ್ಲಿ Corona Vaccine ಪಡೆಯಲಿರುವ ಪ್ರಧಾನಿ ಮೋದಿ

ಕಳೆದ ಕೆಲ ದಿನಗಳಿಂದ ಭಾರತ ತನ್ನ ದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಕೊವಿಡ್-19 ಲಸಿಕೆಗಳನ್ನು ಭೂತಾನ್, ಮಾಲ್ಡೀವ್ಸ್, ನೇಪಾಲ್, ಬಾಂಗ್ಲಾದೇಶ್, ಮ್ಯಾನ್ಮಾರ್, ಮಾರಿಷಸ್ ಹಾಗೂ ಸೇಷಲ್ಸ್ ದೇಶಗಳಿಗೆ ಗೆ ರವಾನಿಸಿದೆ. ಸೌದಿ ಅರಬ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಹಾಗೂ ಮೊರಾಕ್ಕೋ ದೇಶಗಳಿಗೆ ವಾಣಿಜ್ಯಾತ್ಮಕ ರೂಪದಲ್ಲಿ ಭಾರತ ಈ ಲಸಿಕೆಗಳನ್ನು ಪೂರೈಸುತ್ತಿದೆ. ಈ ಕುರಿತು ತ್ವೆತ್ ಮಾಡಿರುವ ಅಮೆರಿಕಾದ ವಿದೇಶಾಂಗ ಇಲಾಖೆಯ ದಕ್ಷಿಣ ಹಾಗೂ ಮಧ್ಯ ಏಷ್ಯಾ ಬ್ಯೂರೋ, "ನಾವು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಭಾರತ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸುತ್ತೇವೆ. ಭಾರತ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಲಕ್ಷಾಂತರ ಕೊವಿಡ್ 19 ಲಸಿಕೆಗಳ ಪ್ರಮಾಣಗಳನ್ನು ವಿತರಿಸಿದೆ. ಯಾವುದೇ ಶುಲ್ಕವಿಲ್ಲದೆ ಭಾರತ ಮಾಲ್ಡೀವ್ಸ್, ಭೂತಾನ್, ಬಾಂಗ್ಲಾದೇಶ ಹಾಗೂ ನೇಪಾಳ ಹಾಗೂ ಇತರೆ ದೇಶಗಳಿಗೆ ಸಹಾಯ ಮಾಡುತ್ತಿದೆ" ಎಂದು ಟ್ವೀಟ್ ಮಾಡಿದೆ. "ಭಾರತ ಒಂದು 'ನಿಜವಾದ ಸ್ನೇಹಿತ' ರಾಷ್ಟ್ರವಾಗಿದ್ದು, ಅದು ತನ್ನ ಔಷಧಿ ಕ್ಷೇತ್ರವನ್ನು ಜಾಗತಿಕ ಸಮುದಾಯದ ನೆರವಿಗೆ ಉಪಯೋಗಿಸುತ್ತಿದೆ" ಎಂದು ಬ್ಯೂರೋ ಹೇಳಿದೆ. ' ಭಾರತವನ್ನು 'ವಿಶ್ವದ ಫಾರ್ಮಸಿ' ಎಂದು ಕರೆಯಲಾಗುತ್ತದೆ ಮತ್ತು ವಿಶ್ವಾದ್ಯಂತ ತಯಾರಾಗುವ ಲಸಿಕೆಗಳ ಶೇ.60ರಷ್ಟು ಲಸಿಕೆಗಳು ಭಾರತದಲ್ಲಿ ತಯಾರಾಗುತ್ತವೆ ಎಂದು ಅದು ಹೇಳಿದೆ. 

ಇದನ್ನು ಓದಿ- Coronavirus : ಸಸ್ಯಾಹಾರಿಗಳು, ಧೂಮಪಾನಿಗಳಿಗೆ ಕೊರೊನಾ ಕಾಟ ಕಡಿಮೆ - ಸಮೀಕ್ಷೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News