Earthquake: ಫಿಲಿಪೈನ್ಸ್‌ನ ರಾಜಧಾನಿ ಮನಿಲಾದಲ್ಲಿ 6.2 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ

Earthquake Latest Update News: ದೇಶದ ರಾಜಧಾನಿ ದೆಹಲಿಯ ನಾಗ್ಲೋಯ್‌ನಲ್ಲಿ 2.3 ತೀವ್ರತೆಯ ಭೂಕಂಪ ಸಂಭವಿಸಿದೆ

Written by - Yashaswini V | Last Updated : Dec 25, 2020, 08:00 AM IST
  • ದೆಹಲಿಯ ನಾಗ್ಲೋಯ್ ಪ್ರದೇಶದಲ್ಲಿ ಭೂಕಂಪದ ಸೌಮ್ಯ ನಡುಕ
  • ರಿಕ್ಟರ್ ಪ್ರಮಾಣದಲ್ಲಿ 2.3 ತೀವ್ರತೆಯ ಭೂಕಂಪ
  • ಕಳೆದ 9 ತಿಂಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ 16ಕ್ಕೂ ಹೆಚ್ಚು ಬಾರಿ ಭೂಕಂಪ
Earthquake: ಫಿಲಿಪೈನ್ಸ್‌ನ ರಾಜಧಾನಿ ಮನಿಲಾದಲ್ಲಿ 6.2 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ title=
File Image

ನವದೆಹಲಿ: ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ಬೆಳಿಗ್ಗೆ 5:13ರ ಸುಮಾರಿಗೆ  6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಮನಿಲಾದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ಇದೇ ವೇಳೆ ಭಾರತದ ರಾಜಧಾನಿ ದೆಹಲಿಯು ಸ್ಥಳೀಯ ಸಮಯ ಮುಂಜಾನೆ 5:02 ಗಂಟೆಗೆ ರಿಕ್ಟರ್ ಪ್ರಮಾಣದಲ್ಲಿ 2.3 ತೀವ್ರತೆಯ ಭೂಕಂಪವನ್ನು ಅನುಭವಿಸಿದೆ. ದೆಹಲಿಯ ನಾಗ್ಲೋಯ್ ಪ್ರದೇಶದಲ್ಲಿ ಈ ಸೌಮ್ಯ ನಡುಕ ಅನುಭವವಾಗಿದೆ.

ಇದಕ್ಕೂ ಮೊದಲು ಡಿಸೆಂಬರ್ 16 ರ ಗುರುವಾರ ಎಂದರೆ 8 ದಿನಗಳ ಹಿಂದೆ ದೆಹಲಿ ಮತ್ತು ಎನ್‌ಸಿಆರ್(Delhi-NCR)‌ನಲ್ಲಿ ಭೂಕಂಪ ಸಂಭವಿಸಿದೆ . ಹವಾಮಾನ ಇಲಾಖೆಯ ಪ್ರಕಾರ ಭೂಕಂಪದ ತೀವ್ರತೆಯು 4.2 ಆಗಿತ್ತು. ರಾಜಸ್ಥಾನದ ಅಲ್ವಾರ್ನಲ್ಲಿ ಈ ಭೂಕಂಪದ ಕೇಂದ್ರವಿತ್ತು. ಅದೇ ದಿನ ರಾತ್ರಿ 10 ರ ಸುಮಾರಿಗೆ ಮಣಿಪುರದಲ್ಲಿ ಭೂಕಂಪ ಸಂಭವಿಸಿದೆ. ಮಾಮ್ನೂಪರ್‌ನ ಚಾಂದಪುರ ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪನ ಸಂಭವಿಸಿದೆ. 

ಇದನ್ನೂ ಓದಿ: ಆಂಡ್ರಾಯ್ಡ್ ಆಧಾರಿತ ಭೂಕಂಪ ಪತ್ತೆ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿದ ಗೂಗಲ್

ಲಾಕ್‌ಡೌನ್ ಆದಾಗಿನಿಂದ ದೆಹಲಿ-ಎನ್‌ಸಿಆರ್‌ನಲ್ಲಿ 16ಕ್ಕೂ ಹೆಚ್ಚು ಬಾರಿ ಭೂಕಂಪ:
ಈ ತಿಂಗಳ ಮೊದಲ ವಾರದಲ್ಲಿ ಡಿಸೆಂಬರ್ 2 ರಂದು ಕೂಡ ರಾಷ್ಟ್ರ ರಾಜಧಾನಿ ದೆಹಲಿ ಭೂಕಂಪವನ್ನು ಅನುಭವಿಸಿತು. ಇದು ರಿಕ್ಟರ್ ಪ್ರಮಾಣದಲ್ಲಿ 2.7 ತೀವ್ರತೆಯನ್ನು ಹೊಂದಿದೆ. ಈ ಸೌಮ್ಯ ಭೂಕಂಪದ ಕೇಂದ್ರ ಬಿಂದು ಗಾಜಿಯಾಬಾದ್ ಜಿಲ್ಲೆಯಲ್ಲಿತ್ತು. ಲಾಕ್‌ಡೌನ್ (Lockdown) ಆದಾಗಿನಿಂದ ದೆಹಲಿ-ಎನ್‌ಸಿಆರ್‌ನಲ್ಲಿ 16 ಕ್ಕೂ ಹೆಚ್ಚು ಬಾರಿ ಭೂಕಂಪದ ನಡುಕ ಕಂಡುಬಂದಿದೆ. ಹೆಚ್ಚಿನ ಭೂಕಂಪಗಳ ಕೇಂದ್ರಬಿಂದು ದೇಶದ ರಾಜಧಾನಿಯ ಸುತ್ತಲೂ ಇದೆ.

ಇದನ್ನೂ ಓದಿ: 40 ವರ್ಷಗಳ ನಂತರ ಹರಿದ್ವಾರದಲ್ಲಿ ಭೂಕಂಪ..!

6 ಅಥವಾ ಹೆಚ್ಚಿನ ಪ್ರಮಾಣದ ಭೂಕಂಪವು ಅಪಾಯಕಾರಿ:
ಭೂಕಂಪದ (Earthquake) ತೀವ್ರತೆಯನ್ನು ರಿಕ್ಟರ್ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ರಿಕ್ಟರ್ ಮಾಪಕದಲ್ಲಿ 2.0 ಅಥವಾ 3.0 ರ ಭೂಕಂಪವನ್ನು ಸೌಮ್ಯವೆಂದು ಪರಿಗಣಿಸಿದರೆ, 6 ರ ತೀವ್ರತೆ ಹೊಂದಿರುವ ಭೂಕಂಪವನ್ನು ಪ್ರಬಲ ಭೂಕಂಪ ಎಂದು ಪರಿಗಣಿಸಲಾಗುತ್ತದೆ.

ಭೂಕಂಪ ಏಕೆ ಉಂಟಾಗುತ್ತದೆ?
ಭೂವಿಜ್ಞಾನದ ಪ್ರಕಾರ, ಭೂಕಂಪದ ನಿಜವಾದ ಕಾರಣವೆಂದರೆ ಟೆಕ್ಟೋನಿಕ್ ಪ್ಲೇಟ್‌ಗಳಲ್ಲಿನ ತ್ವರಿತ ಚಲನೆ, ಭೂಕಂಪ ಸ್ಫೋಟಗಳು, ಗಣಿ ಪರೀಕ್ಷೆ ಮತ್ತು ಪರಮಾಣು ಪರೀಕ್ಷೆ ಮತ್ತು ಉಲ್ಕಾಶಿಲೆ ಪರಿಣಾಮಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News