ಭಾರತವು ಸಣ್ಣ ನೆರೆಯ ರಾಷ್ಟ್ರಗಳನ್ನು ಪತ್ನಿಯಂತೆ ಕಾಣುವುದನ್ನು ಮೊದಲು ನಿಲ್ಲಿಸಲಿ ಎಂದ ಚೀನಾದ ದಿನಪತ್ರಿಕೆ

      

Last Updated : Dec 28, 2017, 06:47 PM IST
ಭಾರತವು ಸಣ್ಣ ನೆರೆಯ ರಾಷ್ಟ್ರಗಳನ್ನು ಪತ್ನಿಯಂತೆ ಕಾಣುವುದನ್ನು ಮೊದಲು ನಿಲ್ಲಿಸಲಿ ಎಂದ ಚೀನಾದ ದಿನಪತ್ರಿಕೆ  title=

ನವದೆಹಲಿ: ಚೀನಾ ದೇಶವು ಭೂತಾನದಿಂದ ದಕ್ಷಿಣ ಚೀನಾ ಸಮುದ್ರದವರೆಗೆ ನಿರಂತರವಾಗಿ ಇತರ ದೇಶಗಳ ಮೇಲೆ  ತನ್ನ ಉಗ್ರ ವಿದೇಶಿ ನೀತಿಯಿಂದಾಗಿ ತನ್ನ ಸಾರ್ವಭೌಮತ್ವವನ್ನು ಅದು  ಪ್ರತಿಬಿಂಬಿಸುತ್ತಲೇ ಇದೆ, ಆದರೆ ಇದರ ಕುರಿತು ಚಕಾರವೆತ್ತದ ಚೀನಾ. ಈಗ ಭಾರತದ ಮೇಲೆ ನೆರೆಹೊರೆಯ ರಾಷ್ಟ್ರಗಳ ಕುರಿತ ಸಂಬಂಧದ ವಿಚಾರವಾಗಿ ಕ್ಯಾತೆ ತೆಗೆದಿದೆ. 

ಅದೇನೆಂದರೆ  ಭಾರತ ದೇಶವು ನೆರೆಹೊರೆಯ ದೇಶಗಳನ್ನು ತನ್ನ ಪತ್ನಿಯ ರೀತಿ ನೋಡುತ್ತಿದೆ ಎನ್ನುವುದು ಚೀನಾ ಮಾಡಿರುವ  ಮಾಡಿರುವ ಆರೋಪ. ಚೀನಾದ ಸರ್ಕಾರಿ ಸ್ವಾಮ್ಯದ ದಿನಪತ್ರಿಕೆ ಗ್ಲೋಬಲ್ ಟೈಮ್ಸ್ ಭಾರತದ ವಿದೇಶಾಂಗ ನೀತಿಯ ಬಗ್ಗೆ ಟಿಕಿಸುತ್ತಾ ಭಾರತವು ನೆರೆಯ ಸಣ್ಣ ರಾಷ್ಟ್ರಗಳನ್ನು ಪತ್ನಿಯ ರೀತಿ ನೋಡುವುದನ್ನು ಮೊದಲು ನಿಲ್ಲಿಸಲಿ ಎಂದು ಭಾರತಕ್ಕೆ ಸಲಹೆ ನೀಡಿದೆ. 
 
ಭಾರತದ ನೆರೆಯ ಚಿಕ್ಕ ರಾಷ್ಟ್ರಗಳು ಬಲಿಷ್ಟರಾಷ್ಟ್ರಗಳ ಜೊತೆಗಿನ  ಮಾತುಕತೆಯ ಸಂದರ್ಭದಲ್ಲಿ ಅದು ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಪತ್ರಿಕೆ ವರದಿ ಮಾಡಿದೆ. ಅಲ್ಲದೆ ದಕ್ಷಿಣ ಏಶಿಯಾ ಮತ್ತು ಅದರ ಸುತ್ತಲಿನ ಪ್ರದೇಶಗಳನ್ನು ಅದು ತನ್ನ ನೆಲೆ ಎಂದು ತಿಳಿದುಕೊಂಡಿದೆ. ಆದ್ದರಿಂದ ಅದು ನೆರೆಯ ಸಣ್ಣ ದೇಶಗಳು ಇತರ ದೇಶಗಳ ಜೊತೆ ಸಂಬಂಧ ಬೆಳೆಸುವುದನ್ನು ಇಚ್ಚಿಸುವುದಿಲ್ಲ ಎಂದು ಚೀನಾದ ದಿನಪತ್ರಿಕೆ ಅಭಿಪ್ರಾಯ ಪಟ್ಟಿದೆ.  

Trending News