ಲಂಡನ್: ಬ್ರಿಟನ್‌ನಲ್ಲಿ ಒಮಿಕ್ರಾನ್ ಕೋವಿಡ್ ರೂಪಾಂತರದ (Omicron COVID variant) ಇನ್ನೂ 86 ಪ್ರಕರಣಗಳು ವರದಿಯಾಗಿದ್ದು, ಒಟ್ಟು 246 ಕ್ಕೆ ತಲುಪಿದೆ ಎಂದು ಬ್ರಿಟಿಷ್ ಆರೋಗ್ಯ ಅಧಿಕಾರಿಗಳು ಭಾನುವಾರ (ಡಿಸೆಂಬರ್ 5, 2021) ದೃಢಪಡಿಸಿದ್ದಾರೆ.
ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಪ್ರಕಾರ ಇದು ಶನಿವಾರದ ಒಟ್ಟು 160 ರೊಂದಿಗೆ ಹೋಲಿಸಿದರೆ, ಶೇಕಡಾ 50 ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಭಾನುವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಬ್ರಿಟನ್ 43,992 ಹೊಸ COVID-19 ಸೋಂಕನ್ನು ದಾಖಲಿಸಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆಯನ್ನು 10,464,389 ಕ್ಕೆ ತಂದಿದೆ.
ದೇಶವು ಇನ್ನೂ 54 ಕರೋನವೈರಸ್-ಸಂಬಂಧಿತ ಸಾವುಗಳನ್ನು (Coronavirus-related deaths in Britain) ವರದಿ ಮಾಡಿದೆ. ಬ್ರಿಟನ್‌ನಲ್ಲಿ ಕರೋನವೈರಸ್-ಸಂಬಂಧಿತ ಸಾವಿನ ಒಟ್ಟು ಸಂಖ್ಯೆ ಈಗ 145,605 ಆಗಿದೆ. ಈ ಅಂಕಿಅಂಶಗಳು ತಮ್ಮ ಮೊದಲ ಧನಾತ್ಮಕ ಪರೀಕ್ಷೆಯ 28 ದಿನಗಳಲ್ಲಿ ಸಾವನ್ನಪ್ಪಿದ ಜನರ ಸಾವುಗಳನ್ನು ಮಾತ್ರ ಒಳಗೊಂಡಿವೆ.
ಇದನ್ನೂ ಓದಿ- Coronavirus Third Wave: ಜನವರಿ 2022ರಲ್ಲಿ ಕೊರೊನಾ 3ನೇ ಅಲೆ! IIT ಪ್ರೊ.ಮಣೀಂದ್ರ ಅಗರ್ವಾಲ್ ಭವಿಷ್ಯ
12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ಬ್ರಿಟನ್‌ಗೆ ಬರುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಮಂಗಳವಾರ 0400 GMT ಯಿಂದ ನಿರ್ಗಮನಕ್ಕೂ ಮುನ್ನ ಪೂರ್ವ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದ್ದಾರೆ. ನಿರ್ಗಮನಕ್ಕೆ 48 ಗಂಟೆಗಳ ಮೊದಲು ಅವುಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಜೊತೆಗೆ, ಸೋಮವಾರ, ಡಿಸೆಂಬರ್ 6 ರಂದು 0400 GMT ನಿಂದ ನೈಜೀರಿಯಾ ಕೆಂಪು ಪ್ರಯಾಣದ ಪಟ್ಟಿಯಲ್ಲಿರುತ್ತದೆ. ಕಳೆದ ತಿಂಗಳ ಕೊನೆಯಲ್ಲಿ ಓಮಿಕ್ರಾನ್ ರೂಪಾಂತರವನ್ನು (Omicron COVID variant) ಮೊದಲು ಪತ್ತೆ ಮಾಡಿದ ನಂತರ ಇದು ಹಲವಾರು ದಕ್ಷಿಣ ಆಫ್ರಿಕಾದ ರಾಷ್ಟ್ರಗಳಲ್ಲಿ ಪಸರಿಸಿತು.
ಇದನ್ನೂ ಓದಿ- ರಾಜಸ್ಥಾನದಲ್ಲಿ 9 ಓಮಿಕ್ರಾನ್ ರೂಪಾಂತರ ಪ್ರಕರಣಗಳು ದಾಖಲು
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 88 ಪ್ರತಿಶತದಷ್ಟು ಜನರು ತಮ್ಮ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು ಸುಮಾರು 81 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. 35 ಪ್ರತಿಶತಕ್ಕಿಂತ ಹೆಚ್ಚು ಜನರು ಬೂಸ್ಟರ್ ಜಬ್ಸ್ ಅಥವಾ ಕರೋನವೈರಸ್ ಲಸಿಕೆಯ ಮೂರನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ