UAEಯಲ್ಲೂ ಇದೀಗ ಫೋನ್‌ಪೇ ಯುಪಿಐ ಸೇವೆ ಆರಂಭ

UAEಯ ಟರ್ಮಿನಲ್‌ಗಳಲ್ಲಿ ಫೋನ್‌ಪೇ ಅಪ್ಲಿಕೇಶನ್ ಬಳಕೆದಾರರು ಇದೀಗ UPI ಅನ್ನು ಬಳಸಿಕೊಂಡು ಪಾವತಿ ಮಾಡಬಹುದಾಗಿದ್ದು,  ಫೋನ್‌ಪೇ ಯುಪಿಐ ಸೇವೆ UAEಯಲ್ಲೂ ಆರಂಭಿಸಿದೆ.    

Written by - Zee Kannada News Desk | Last Updated : Apr 1, 2024, 09:17 PM IST
  • ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
  • ಭಾರತೀಯ ಪ್ರಯಾಣಿಕರು ವಹಿವಾಟುಗಳಿಗಾಗಿ UPI ಅನ್ನು ಬಳಸಲು ಅನುಮತಿಸಿದೆ.
  • ಫೋನ್‌ಪೇ ಯುಪಿಐ ಸೇವೆ UAEಯಲ್ಲೂ ಆರಂಭಿಸಿದೆ.
UAEಯಲ್ಲೂ ಇದೀಗ ಫೋನ್‌ಪೇ ಯುಪಿಐ ಸೇವೆ ಆರಂಭ title=

ಫೋನ್‌ಪೇ ಅಪ್ಲಿಕೇಶನ್ ಬಳಕೆದಾರರು ಇದೀಗ UPI ಅನ್ನು ಬಳಸಿಕೊಂಡು UAEಯ ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಬಹುದು ಎಂದು ತಿಳಿಸಿದ್ದು, ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಇದನ್ನು ಜಾರಿ ತಂದಿದೆ. 

PhonePe ಅಪ್ಲಿಕೇಶನ್ ಬಳಕೆದಾರರು ಇದೀಗ UPI ಅನ್ನು ಬಳಸಿಕೊಂಡು Mashreq ನ NEOPAY ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ ಮತ್ತು  ಚಿಲ್ಲರೆ ಅಂಗಡಿಗಳು, ಊಟದ ಮಳಿಗೆಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಬಳಸಿಕೊಳ್ಳಬಹುದಾಗಿದೆ. QR ಕೋಡ್ ಅನ್ನು ಸ್ಕ್ಯಾನ್ ಕೂಡ ಮಾಡಬಹುದಾಗಿದೆ. ಖಾತೆಯ ಡೆಬಿಟ್ INR ನಲ್ಲಿ ಮತ್ತು ಕರೆನ್ಸಿ ವಿನಿಮಯ ದರವನ್ನು ತೋರಿಸುತ್ತದೆ.

ಇದನ್ನು ಓದಿ :Teaser Out : "ಲವ್ ಸೆಕ್ಸ್ ಔರ್ ಧೋಖಾ 2:" ಟೀಸರ್ ಔಟ್ : ಎ.19ಕ್ಕೆ ಥಿಯೇಟರ್ ಗಳಲ್ಲಿ

ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ನೊಂದಿಗೆ ಮಶ್ರೆಕ್ ಅವರ ಪಾಲುದಾರಿಕೆಯ ಮೂಲಕ ಇದನ್ನು ಜಾರಿತರಲಾಗಿದೆ. Mashreq ಯುಪಿಐ ಅಪ್ಲಿಕೇಶನ್‌ಗಳನ್ನು ಪಾವತಿ ಸಾಧನವಾಗಿ ಸ್ವೀಕರಿಸಲು NEOPAY ಟರ್ಮಿನಲ್‌ಗಳನ್ನು ಸಕ್ರಿಯಗೊಳಿಸಿದ್ದು, ಭಾರತೀಯ ಪ್ರಯಾಣಿಕರು ವಹಿವಾಟುಗಳಿಗಾಗಿ UPI ಅನ್ನು ಬಳಸಲು ಅನುಮತಿಸಿದೆ. 

ಯುಎಇ ಅತ್ಯಂತ ಜನಪ್ರಿಯ ತಾಣವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಾರೆ ಮತ್ತು ಈ ಪಾಲುದಾರಿಕೆಯೊಂದಿಗೆ, ಗ್ರಾಹಕರು ಪಾವತಿ ವಿಧಾನವಾದ UPI ಮೂಲಕ ಅನುಕೂಲಕರವಾಗಿ ವಹಿವಾಟು ಮಾಡಬಹುದು.

ಇದನ್ನು ಓದಿ :IPL 2024 : 14ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಜಸ್ಥಾನ್, ಟಾಸ್ ಗೆದ್ದು RR ಬೌಲಿಂಗ್ ಆಯ್ಕೆ

ತಡೆರಹಿತ ವಹಿವಾಟು ಮತ್ತು ಉಭಯ ದೇಶಗಳ ನಡುವೆ ಈಗಾಗಲೇ ಬಲವಾದ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ ಎಂದು ರಿತೇಶ್ ಪೈ ಇಂಟರ್ನ್ಯಾಷನಲ್ ಪೇಮೆಂಟ್ಸ್ ನ ಸಿಇಓ ತಿಳಿಸಿದರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News