Viral Photo: ಮುಂಬೈ ಲೋಕಲ್ ಆಗಿ ಮಾರ್ಪಟ್ಟ US ಮಿಲಿಟರಿ ವಿಮಾನ, 134 ಸೈನಿಕರು ಪ್ರಯಾಣಿಸುವ ವಿಮಾನದಲ್ಲಿ 640 ಆಫ್ಘನ್ ನಾಗರಿಕರು

Viral Photo: ತಾಲಿಬಾನಿಗಳ ದೌರ್ಜ್ಯನ್ಯದಿಂದ ಪಾರಾಗಲು ಆಫ್ಘಾನಿಸ್ತಾನದಲ್ಲಿ ನೂಕುನುಗ್ಗಲು ಸಂಭವಿಸುತ್ತಿದೆ. ಪ್ರಸ್ತುತ ಈ ಕುರಿತಾದ ಒಂದು ಫೋಟೋ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು US Air Force ವಿಮಾನದ ಚಿತ್ರವಾಗಿದೆ. ಈ ವಿಮಾನದಲ್ಲಿ ಜನರು ಅಪಾಯಕಾರಿ ರೀತಿಯಲ್ಲಿ ವಿಮಾನದಲ್ಲಿ ಕುಳಿತು ದೇಶ ತೊರೆಯುತ್ತಿರುವುದನ್ನು ನೀವು ನೋಡಬಹುದು.

Written by - Nitin Tabib | Last Updated : Aug 17, 2021, 12:39 PM IST
  • ತಾಲಿಬಾನ್ ನಿಂದ ಪಾರಾಗಲು ದೇಶ ತೊರೆಯುತ್ತಿರುವ ಜನರು
  • ಪ್ಲೇನ್ ಒಳಭಾಗದ ಛಾಯಾಚಿತ್ರಗಳು ವೈರಲ್.
  • 800 ನಾಗರಿಕರನ್ನು ಏಕಕಾಲಕ್ಕೆ ಹೊತ್ತು ಹಾರಾಟ ನಡೆಸಿದ ವಿಮಾನ.
Viral Photo: ಮುಂಬೈ ಲೋಕಲ್ ಆಗಿ ಮಾರ್ಪಟ್ಟ US ಮಿಲಿಟರಿ ವಿಮಾನ, 134 ಸೈನಿಕರು ಪ್ರಯಾಣಿಸುವ ವಿಮಾನದಲ್ಲಿ 640 ಆಫ್ಘನ್ ನಾಗರಿಕರು title=
C-17 Globemaster Viral Photo (Photo Courtesy - Defense One Tweet)

ನವದೆಹಲಿ: C-17 Globemaster Viral Photo - ಅಫ್ಘಾನಿಸ್ತಾನವನ್ನು ತಾಲಿಬಾನ್  (Taliban)ಆಕ್ರಮಿಸಿಕೊಂಡಿದೆ. ಅಲ್ಲಿನ ಆಡಳಿತವು ತಾಲಿಬಾನ್ ನಾಯಕತ್ವಕ್ಕೆ ಅಧಿಕಾರವನ್ನು ವರ್ಗಾಯಿಸಲು ಪ್ರಕ್ರಿಯೆಯಲ್ಲಿ ನಿರತವಾಗಿದೆ. ಇದರೊಂದಿಗೆ, ಅಫ್ಘಾನಿಸ್ತಾನದ ಜನರ ಮಧ್ಯೆ ಭಾರಿ ಭೀತಿ ಮನೆಮಾಡಿದೆ. 

ತಾಲಿಬಾನಿಗಳಿಂದ ಪಾರಾಗಲು ಜನರು ದೇಶ ದೊರೆಯುತ್ತಿದ್ದಾರೆ
ಅಫ್ಘಾನಿಸ್ತಾನದ (Afghanistan) ಜನರು 90ರ ದಶಕದ ತಾಲಿಬಾನ್ ಆಳ್ವಿಕೆಯಲ್ಲಿ ನಡೆದ ಹಿಂಸಾಚಾರವನ್ನು ಇನ್ನೂ ಮರೆತಿಲ್ಲ. ಹೀಗಾಗಿ ತಾಲಿಬಾನಿಗಳ ಕೈಯಲ್ಲಿ ಅಧಿಕೃತ ಅಧಿಕಾರ ಹಸ್ತಾಂತರಕ್ಕೂ ಮುನ್ನವೇ ಅಲ್ಲಿನ ನಾಗರಿಕರು ದೇಶವನ್ನು ತೊರೆಯಲು ಬಯಸುತ್ತಿದ್ದಾರೆ. ಈ ಹಿನ್ನೆಲೆ ರಾಜಧಾನಿ ಕಾಬೂಲ್ (Kabul Airport) ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಜನಸ್ತೋಮವೆ ನೆರೆದಿದೆ. ಆಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ವಿಡಿಯೋವೊಂದು ನಿನ್ನೆ ವೈರಲ್ ಗೊಂಡಿದ್ದು, ವಿಮಾನದಿಂದ ನಾಗರಿಕರು ಕೆಳಗೆ ಬೀಳುತ್ತಿರುವುದು ಕಂಡುಬಂದಿತ್ತು. ಅದಾದ ಬಳಿಕ ಇದೀಗ ಅದೇ ವಿಮಾನದ ಒಳಾಂಗಣದ ಚಿತ್ರವೊಂದು ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ-Afghanistan Crisis: ಅಮೆರಿಕಾದ NSA ಜೊತೆಗೆ ಚರ್ಚೆ ನಡೆಸಿದ ಭಾರತದ NAS ಅಜೀತ್ ಡೊಭಾಲ್ ಹೇಳಿದ್ದೇನು?

ಇದನ್ನೂ ಓದಿ-ಅಫ್ಘಾನಿಸ್ತಾನದ ಸ್ಥಿತಿಯ ಮೇಲೆ ಭಾರತ ನಿಗಾವಹಿಸಿದೆ, ತುರ್ತು ದೂರವಾಣಿ ಸಂಖ್ಯೆ ಜಾರಿಗೊಳಿಸಿದ ಭಾರತ

ವಿಮಾನದ ಒಳಾಂಗಣದ ಫೋಟೋ ವೈರಲ್
ನಿನ್ನೆ ಅಫ್ಘಾನಿಸ್ತಾನದಿಂದ ಉಡಾವಣೆಗೊಂಡ ವಿಮಾನದಿಂದ ಪ್ರಯಾಣಿಕರು ಕೆಳಗೆ ಬೀಳುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ಆದರೆ ಇಂದು ಆ ವಿಮಾನದ ಒಳಭಾಗದ ಫೋಟೋ ವೈರಲ್ ಆಗಿದ್ದು. ಇದು ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯ ಭೀಕರತೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಬಣ್ಣಿಸುತ್ತಿದೆ. Defense One ವೆಬ್ ಸೈಟ್ ಜಾರಿಗೊಳಿಸಿರುವ ಈ ವೈರಲ್ ಫೋಟೋ ಅಮೆರಿಕಾದ ವಾಯು ಸೇನೆಯ ಸಿ-17 ಗ್ಲೋಬ್ ಮಾಸ್ಟರ್ (C-17 Globemaster) ಒಳಭಾಗದಿಂದ ಹೊರಹೊಮ್ಮಿದೆ. ಹಾಗೆ ನೋಡಿದರೆ ಈ ವಿಮಾನದಲ್ಲಿ ಕೇವಲ 134 ಜನರಿಗಾಗಿ ಮಾತ್ರ ಸ್ಥಳಾವಕಾಶ ಇರುತ್ತದೆ. ಆದರೆ, ಕಾಬೂಲ್ ಏರ್ಪೋರ್ಟ್ ನಲ್ಲಿ ಈ ವಿಮಾನದ ಗೇಟ್ ತೆರೆಯುತ್ತಿದ್ದಂತೆ, ವಿಮಾನದಲ್ಲಿ ಸುಮಾರು 800ಕ್ಕೂ ಅಧಿಕ ಜನರು ನುಗ್ಗಿ ಕುಳಿತಿದ್ದಾರೆ. ಒಳಹೊಕ್ಕ ಜನರು ಯಾವುದೇ ಪರಿಸ್ಥಿತಿಯಲ್ಲಿ ವಿಮಾನದಿಂದ ಹೊರಬರಲು ಸಿದ್ಧರಿರಲಿಲ್ಲ. ಅಫ್ಘಾನಿಸ್ತಾನದಲ್ಲಿ ಉಳಿದರೆ, ತಾಲಿಬಾನಿಗಳು ತಮ್ಮನ್ನು ಹತ್ಯೆಗೈಯಲಿದ್ದಾರೆ ಎಂಬುದು ಅವರ ಭಯವಾಗಿತ್ತು.

ಇದನ್ನೂ ಓದಿ-ತಾಲಿಬಾನ್ ಗೆ ಚೀನಾ, ಇರಾನ್ ಜೊತೆಗೆ ಬಹಿರಂಗ ಬೆಂಬಲ ಸೂಚಿಸಿದ 'ತಾಲಿಬಾನ್ ಖಾನ್',

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

800 ಜನರನ್ನು ಹೊತ್ತು ಏಕಕಾಲಕ್ಕೆ ಉಡಾವಣೆಗೊಂಡ ವಿಮಾನ
ಇಂತಹ ಸಂದಿಗ್ಧ ಪರಿಸ್ಥತಿಯಲ್ಲಿ ವಿಮಾನದ ಸಿಬ್ಬಂದಿಗಳು ದುಸ್ಸಾಹಸದ ನಿರ್ಣಯ ಕೈಗೊಂಡಿದ್ದಾರೆ. ಅವರು ಸುಮಾರು 800 ಪ್ರಯಾಣಿಕಾರಿಂದ ತುಂಬಿದ ವಿಮಾನದ ಹಾರಾಟ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಇದಾದ ಬಳಿಕ ಜನರು ವಿಮಾನದ ನೆಲಭಾಗದಲ್ಲಿಯೇ ಕುಳಿತುಕೊಂಡಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಈ ವಿಮಾನದ 800 ಯಾತ್ರಿಗಳಲ್ಲಿ 640 ಆಫ್ಘಾನ್ ನಾಗರಿಕರಾಗಿದ್ದರು ಎಂದು ಹೇಳಿದ್ದಾರೆ. ಬಳಿಕ ಅವರನ್ನು ಸುರಕ್ಷಿತವಾಗಿ ಅಮೆರಿಕಾಗೆ ಕರೆದೊಯ್ಯಲಾಗಿದೆ. ಆದರೆ ಈ ಕುರಿತು ಅಮೆರಿಕಾದ (America) ವಾಯುಸೇನೆ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಇಷ್ಟೊಂದು ಜನರನ್ನು ರಕ್ಷಿಸುವ ಇದೊಂದು ದಾಖಲೆ ಎಂದೇ ಹೇಳಲಾಗುತ್ತಿದೆ. 

Trending News