World Population Day 2024: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು, ಅಗ್ರ ಸ್ಥಾನದಲ್ಲಿ ಭಾರತ

World Population Day 2024: ಜನಸಂಖ್ಯಾ ಹೆಚ್ಚಳ ಕೇವಲ ಚೀನಾ, ಭಾರತವಷ್ಟೇ ಅಲ್ಲ ವಿಶ್ವಕ್ಕೆ ದೊಡ್ಡ ಪಿಡುಗು. ಲೆಕ್ಕಾಚಾರದ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 8.5 ಶತಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jul 11, 2024, 11:07 AM IST
  • ಜನಸಂಖ್ಯಾ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತದಲ್ಲಿ ಜನಸಂಖ್ಯೆ 1.44 ಕೋಟಿ ತಲುಪಿದ್ದು ಪ್ರಥಮ ಸ್ಥಾನದಲ್ಲಿದೆ.
  • ಇಡೀ ವಿಶ್ವದಲ್ಲಿ ಜನಸಂಖ್ಯಾ ಪ್ರಮಾಣ 8 ಬಿಲಿಯನ್ ತಲುಪಿದೆ.
  • ವಿಶ್ವದಾದ್ಯಂತ ಹೆಚ್ಚುತ್ತಿರುವ ಜನಸಂಖ್ಯಾ ವಿಧಾನದ ಪ್ರಕಾರ, 2030ರ ವೇಳೆಗೆ ವಿಶ್ವದ ಜನಸಂಖ್ಯೆಯು 8.5 ಶತಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
World Population Day 2024: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು, ಅಗ್ರ ಸ್ಥಾನದಲ್ಲಿ ಭಾರತ  title=

World Population Day 2024: ಜನಸಂಖ್ಯಾ ಹೆಚ್ಚಳ ಎಂಬುದು ಕೇವಲ ಭಾರತದ ಸಮಸ್ಯೆ ಮಾತ್ರವಲ್ಲ, ಇಡೀ ವಿಶ್ವದ ಸಮಸ್ಯೆ. ಹಾಗಾಗಿಯೇ,  ಜುಲೈ 11ರಂದು "ವಿಶ್ವ ಜನಸಂಖ್ಯಾ ದಿನವನ್ನು" (World Population Day) ಆಚರಿಸಲು ಪ್ರಾಂಭಿಸಲಾಯಿತು. ಹೆಚ್ಚುತ್ತಿರುವ ಜನಸಂಖ್ಯೆಯ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಗಮನ ಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 

ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನಲೆ: 
ಜುಲೈ 11, 1987 ರಂದು, ಜಾಗತಿಕ ಜನಸಂಖ್ಯೆಯು ಅಂದಾಜು ಐದು ಶತಕೋಟಿ ಜನರನ್ನು ತಲುಪಿತು. ಈ ಮೈಲಿಗಲ್ಲು ಪ್ರಪಂಚದಾದ್ಯಂತ ಗಮನ ಸೆಳೆಯಿತು, ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ತೀವ್ರವಾದ ಚರ್ಚೆಗೆ ಗ್ರಾಸವಾಯಿತು. 1989 ರಲ್ಲಿ, ಐದು ಶತಕೋಟಿ ದಿನದ ಆವೇಗವನ್ನು ಅನುಸರಿಸಿ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಆಡಳಿತ ಮಂಡಳಿಯು ವಿಶ್ವ ಜನಸಂಖ್ಯಾ ದಿನವನ್ನು (World Population Day) ಸ್ಥಾಪಿಸಿತು.

ವಿಶ್ವ ಜನಸಂಖ್ಯಾ ದಿನವು ಜಾಗತಿಕ ಜನಸಂಖ್ಯೆಯ ಬೆಳವಣಿಗೆಯನ್ನು ಸುತ್ತುವರೆದಿರುವ ಪ್ರಮುಖ ಸಮಸ್ಯೆಗಳು ಮತ್ತು ಅಭಿವೃದ್ಧಿ ಮತ್ತು ಸುಸ್ಥಿರತೆಯ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. 

ಇದನ್ನೂ ಓದಿ- ಇನ್ನೂ ಹೆಚ್ ಐವಿ ಸೋಂಕಿಗೆ ಭಯಪಡುವ ಅಗತ್ಯವಿಲ್ಲ, ಪರಿಹಾರ ಇಲ್ಲಿದೆ ನೋಡಿ!!

ವಿಶ್ವ ಜನಸಂಖ್ಯಾ ದಿನ 2024ರ ಥೀಮ್: 
ವಿಶ್ವ ಸಂಸ್ಥೆಯು 2024 ರ ವಿಶ್ವ ಜನಸಂಖ್ಯಾ ದಿನವನ್ನು "ಯಾರನ್ನೂ ಹಿಂದೆ ಬಿಡಬೇಡಿ, ಪ್ರತಿಯೊಬ್ಬರನ್ನು ಎಣಿಸಿ" ಎಂಬ ಥೀಮ್ ನಡಿ ಆಚರಿಸುತ್ತಿದೆ. ಅಂತರ್ಗತ ಮತ್ತು ಸಂಪೂರ್ಣ ಡೇಟಾ ಸಂಗ್ರಹಣೆ ಪ್ರಕ್ರಿಯೆ. ಹಿನ್ನೆಲೆ, ರಾಷ್ಟ್ರೀಯತೆ, ಭೌಗೋಳಿಕತೆ ಅಥವಾ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಪ್ರತಿಯೊಬ್ಬರೂ ಸಂಖ್ಯೆಯಲ್ಲಿ ತಕ್ಕಮಟ್ಟಿಗೆ ಪ್ರತಿನಿಧಿಸುತ್ತಾರೆ ಎಂದು ಈ ಥೀಮ್ ಖಾತ್ರಿಗೊಳಿಸುತ್ತದೆ. 

ವರ್ಲ್ಡೋಮೀಟರ್ ಪ್ರಕಾರ , ಪ್ರಸ್ತುತ ಜಾಗತಿಕ ಜನಸಂಖ್ಯೆಯು 8,120,886,060ಕ್ಕಿಂತಲೂ ಹೆಚ್ಚಿದೆ. ಗಮನಾರ್ಹವಾಗಿ, ಇಡೀ ವಿಶ್ವದಲ್ಲಿ ಜನಸಂಖ್ಯೆಯು 1 ಬಿಲಿಯನ್ ತಲುಪಲು ಶತಮಾನಗಳನ್ನು ತೆಗೆದುಕೊಂಡಿತು. ಆದರೆ, ಕಳೆದೊಂದು ಶತಮಾನದಲ್ಲಿ ಜನಸಂಖ್ಯಾ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ. 

ಇದನ್ನೂ ಓದಿ- ರಷ್ಯಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗೆ ಪ್ರಧಾನಿ ಮೋದಿ ಭಾಜನ!!

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಗ್ರ ಹತ್ತು ದೇಶಗಳೆಂದರೆ:- 
ಭಾರತ- 1 , 442 , 114 , 258
ಚೀನಾ - 1,425,164,017
ಅಮೇರಿಕಾ- 341 , 869 , 076
ಇಂಡೋನೇಷ್ಯಾ- 279 , 866 , 215
ಪಾಕಿಸ್ತಾನ- 245 , 352 , 888
ನೈಜೀರಿಯಾ- 229 , 314 , 518
ಬ್ರೆಜಿಲ್- 217 , 673 , 828
ಬಾಂಗ್ಲಾದೇಶ- 174 , 753 , 862
ರಷ್ಯಾ- 143 , 942 , 494
ಮೆಕ್ಸಿಕೋ- 129 , 416 , 544

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News