ನಿಮ್ಮ ವಾಟ್ಸಪ್ ಹ್ಯಾಕ್ ಆಗಿರಬಹುದು, ಒಮ್ಮೆ ಅಪ್ಡೇಟ್ ಮಾಡಿಕೊಳ್ಳಿ ...!

 ಸೋಶಿಯಲ್ ಮೀಡಿಯಾದಲ್ಲಿಯೇ ಅತಿ ಸುರಕ್ಷಿತ ಎಂದು ಕರೆಯಲಾಗುವ ವಾಟ್ಸಪ್ ಇಗ ಹ್ಯಾಕ್ ಆಗಿರುವ ಸಾಧ್ಯತೆ ಎಂದು ತಿಳಿದುಬಂದಿದೆ. 'ಅಡ್ವಾನ್ಸ್ ಸೈಬರ್ ಆಕ್ಟರ್' ಎಂದು ಕರೆಯಲಾಗುವ ಸ್ಪೈವೆರ್ ಈಗ ವಾಟ್ಸಪ್ ಗೆ ತಗುಲಿದೆ ಎನ್ನಲಾಗಿದೆ.

Last Updated : May 14, 2019, 04:32 PM IST
ನಿಮ್ಮ ವಾಟ್ಸಪ್ ಹ್ಯಾಕ್ ಆಗಿರಬಹುದು, ಒಮ್ಮೆ ಅಪ್ಡೇಟ್ ಮಾಡಿಕೊಳ್ಳಿ ...! title=

ನವದೆಹಲಿ:  ಸೋಶಿಯಲ್ ಮೀಡಿಯಾದಲ್ಲಿಯೇ ಅತಿ ಸುರಕ್ಷಿತ ಎಂದು ಕರೆಯಲಾಗುವ ವಾಟ್ಸಪ್ ಇಗ ಹ್ಯಾಕ್ ಆಗಿರುವ ಸಾಧ್ಯತೆ ಎಂದು ತಿಳಿದುಬಂದಿದೆ. 'ಅಡ್ವಾನ್ಸ್ ಸೈಬರ್ ಆಕ್ಟರ್' ಎಂದು ಕರೆಯಲಾಗುವ ಸ್ಪೈವೆರ್ ಈಗ ವಾಟ್ಸಪ್ ಗೆ ತಗುಲಿದೆ ಎನ್ನಲಾಗಿದೆ.

ಈ ಕುರಿತಾಗಿ ವರದಿ ಮಾಡಿರುವ ಫೈನಾನ್ಷಿಯಲ್ ಟೈಮ್ಸ್ ಈಗ ಸ್ಪೈವೆರ್ ನ್ನು ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್ ಎಂದು ಗುರುತಿಸಿದೆ. ಸ್ಪೈವೆರ್ ಕುರಿತಾಗಿ ಪ್ರತಿಕ್ರಿಯಿಸಿರುವ ವಾಟ್ಸಪ್ ವಕ್ತಾರರು ಮೇ 10 ರಂದು ಸರ್ವರ್-ಸೈಡ್ ಫಿಕ್ಸ್ ಮಾಡಿ ಸೋಮವಾರದಂದು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ಗಳನ್ನು ಜೋಡಿಸಿದೆ ಎಂದು ತಿಳಿಸಿದ್ದಾರೆ. ಈಗ ಬಳಕೆದಾರರು ತಮ್ಮ ಅಪ್ಲಿಕೇಶನ್ಗಳನ್ನು ನವೀಕರಿಸಲು ವಾಟ್ಸಪ್ ತಿಳಿಸಿದೆ.

ಈಗ ಹ್ಯಾಕ್ ಮಾಡಿರುವ ಸ್ಪೈವೆರ್ ಗಳು ತಪ್ಪಿದ ಕರೆಗಳ ಮೂಲಕ ಫೋನನ್ನು ಬೇಧಿಸಲು ಸಾಧ್ಯ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹಲವರು ಖಾತೆಗಳು ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಇಂಟರ್ನೆಟ್ ವಾಚ್ಡಾಗ್ ಸಿಟಿಜನ್ ಲ್ಯಾಬ್ನ ಸಂಶೋಧಕರಾದ ಜಾನ್ ಸ್ಕಾಟ್-ರೈಲ್ಟನ್ ಈ ಹ್ಯಾಕ್ ನ್ನು 'ಅತ್ಯಂತ ಭಯಾನಕ ದುರ್ಬಲತೆ ಎಂದು ಕರೆದಿದ್ದಾರೆ.

ವಾಟ್ಸಪ್ ನ ವಕ್ತಾರ ಹೇಳುವಂತೆ ಈ ದಾಳಿಯು ಖಾಸಗಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಮಾರು 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಪ್, ಸಿಟಜೆನ್ ಲ್ಯಾಬ್ ಮತ್ತು ಮಾನವ ಹಕ್ಕುಗಳ ಗುಂಪುಗಳನ್ನು ತಕ್ಷಣವೇ ಸಂಪರ್ಕಿಸಿ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಕೇಳಿಕೊಳ್ಳಲಾಗಿದೆ. ತಮ್ಮ ತನಿಖೆಯಲ್ಲಿ ನೆರವಾಗಲು ಯುಎಸ್ ಕಾನೂನು ಜಾರಿ ಅಧಿಕಾರಿಗಳಿಗೆ ವಾಟ್ಸಪ್ ಮಾಹಿತಿಯನ್ನು ಒದಗಿಸಿದೆ ಎಂದು ಹೇಳಿದರು. 

"ನಮ್ಮ ತಂಡವು ಧ್ವನಿ ಕರೆಗಳಿಗೆ ಹೆಚ್ಚುವರಿ ಸುರಕ್ಷತಾ ವರ್ಧನೆಗಳನ್ನು ಮಾಡುತ್ತಿದೆ.ಇಂತಹ ದುರುಪಯೋಗಪಡಿಸುವ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ" ಎಂದು ವಾಟ್ಸಾಪ್ ಹೇಳಿಕೆಯಲ್ಲಿ ತಿಳಿಸಿದೆ.

 
 
 

Trending News