EPFO Interest Rates: PF ಠೇವಣಿ ಮೇಲೆ ಬಡ್ಡಿದರ ಹೆಚ್ಚಿಸಲಿದೆಯಾ ಸರ್ಕಾರ! ಕೇಂದ್ರ ಸಚಿವರು ನೀಡಿದ ಮಾಹಿತಿ ಇದು

EPFO Interest Rates Hike: ಪಿಎಫ್ ಖಾತೆದಾರರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಪಿಎಫ್ ಮೇಲಿನ ಬಡ್ಡಿ ದರ ಹೆಚ್ಚಿಸುವ ಕುರಿತಾದ ಪ್ರಶ್ನೆಗೆ ಸಚಿವ ರಾಮೇಶ್ವರ ತೇಲಿ ಉತ್ತರ ನೀಡಿದ್ದಾರೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Oct 25, 2022, 09:05 PM IST
  • ಪಿಎಫ್ ಖಾತೆದಾರರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ.
  • ಪಿಎಫ್ ಖಾತೆ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ.
EPFO Interest Rates: PF ಠೇವಣಿ ಮೇಲೆ ಬಡ್ಡಿದರ ಹೆಚ್ಚಿಸಲಿದೆಯಾ ಸರ್ಕಾರ! ಕೇಂದ್ರ ಸಚಿವರು ನೀಡಿದ ಮಾಹಿತಿ ಇದು title=
EPFO Latest Update

EPFO Interest Rates Hike: ಪಿಎಫ್ ಖಾತೆದಾರರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಪಿಎಫ್ ಖಾತೆ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. 2021-2022 ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯ ಕುರಿತು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಹೇಳಿಕೆ ನೀಡಿದ್ದಾರೆ.

ಸರ್ಕಾರ ನೀಡಿದ ಮಾಹಿತಿ
ವಾಸ್ತವವಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ಬಗ್ಗೆ ಸರ್ಕಾರವು ಮರುಪರಿಶೀಲಿಸುತ್ತಿದೆಯೇ ಎಂದು ರಾಮೇಶ್ವರ್ ತೇಲಿಗೆ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, ಬಡ್ಡಿದರ ಮರುಪರಿಶೀಲಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಪಿಎಫ್ ಖಾತೆಯಲ್ಲಿ ಲಭ್ಯವಿರುವ ಠೇವಣಿ ಬಡ್ಡಿ ದರದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ ಎಂದರ್ಥ.

ಇದನ್ನೂ ಓದಿ-Aadhaar Card ಹೊಂದಿದವರಿಗೆ ಸರ್ಕಾರದ ಭಾರಿ ಉಡುಗೊರೆ, ತಕ್ಷಣ ಲಾಭ ಪಡೆಯಿರಿ

ಸಣ್ಣ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿ
ಸಾಮಾನ್ಯ ಭವಿಷ್ಯ ನಿಧಿ ಶೇ.7.10ರಷ್ಟು, ಹಿರಿಯ ನಾಗರಿಕ ಉಳಿತಾಯ ಯೋಜನೆ ಶೇ.7.40ರಷ್ಟು ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಶೇ.7.60ರಷ್ಟು ನಂತಹ ಇತರ ಹೋಲಿಸಬಹುದಾದ ಯೋಜನೆಗಳಿಗಿಂತ ಇಪಿಎಫ್‌ನ ಬಡ್ಡಿ ದರವು ಹೆಚ್ಚಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಹೇಳಿದ್ದಾರೆ.  ರಾಮೇಶ್ವರ ತೇಲಿ ಪ್ರಕಾರ, ಸಣ್ಣ ಉಳಿತಾಯ ಯೋಜನೆಗಳಿಂದ ಪಿಎಫ್‌ಗೆ ಪಡೆಯುವ ಬಡ್ಡಿ ಇನ್ನೂ ಹೆಚ್ಚಾಗಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಬಡ್ಡಿದರ ಹೆಚ್ಚಳವನ್ನು ಪರಿಗಣಿಸುವುದಿಲ್ಲ. ಇಪಿಎಫ್ ಮೇಲಿನ ಬಡ್ಡಿದರವನ್ನು ಶೇಕಡಾ 8.10 ರಷ್ಟು ನೀಡಲು ಅನುಮೋದಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಇದನ್ನೂ ಓದಿ-Diwali 2022ರ ಬಳಿಕ ಎಸ್ಬಿಐ ಗ್ರಾಹಕರಿಗೆ ಬಂಬಾಟ್ ಅವಕಾಶ, ಪ್ರತಿ ತಿಂಗಳಿಗೆ ಬ್ಯಾಂಕ್ ಗ್ರಾಹಕರಿಗೆ ನೀಡಲಿದೆ ಹಣ

ಸಚಿವರು ನೀಡಿದ ಇತರ ಮಾಹಿತಿ ಏನು?
ಪಿಎಫ್ ಮೇಲಿನ ಬಡ್ಡಿದರವು ಇಪಿಎಫ್ ತನ್ನ ಹೂಡಿಕೆಯಿಂದ ಪಡೆದ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅಂತಹ ಆದಾಯವನ್ನು ಇಪಿಎಫ್ ಸ್ಕೀಮ್, 1952 ರ ಪ್ರಕಾರ ಮಾತ್ರ ವಿತರಿಸಲಾಗುತ್ತದೆ ಎಂದು ರಾಮೇಶ್ವರ್ ತೇಲಿ ಹೇಳಿದ್ದಾರೆ. ಸಿಬಿಟಿ ಮತ್ತು ಇಪಿಎಫ್ಓ ವರ್ಷ 2021-22ಕ್ಕೆ  ಶೇ.8.10 ರಷ್ಟು ಬಡ್ಡಿ ದರವನ್ನು ಶಿಫಾರಸು ಮಾಡಿದ್ದವು ಮತ್ತು ಸರ್ಕಾರ ಅದಕ್ಕೆ ಈಗಾಗಲೇ ಅನುಮೋದನೆ ನೀಡಿದೆ ಎಂದು ರಾಮೇಶ್ವರ್ ತೇಲಿ ಹೇಳಿದ್ದಾರೆ. ಅಂದರೆ, ಈ ಬಾರಿ ಪಿಎಫ್ ಮೇಲಿನ ಬಡ್ಡಿಯು 8.10 ದರದಲ್ಲಿ ಮುಂದುವರೆಯಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News