ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ .! ಖರೀದಿ ಯೋಚನೆಯೂ ಕಷ್ಟ

Gold Silver Price Today : ಇಂದು ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ದರದಲ್ಲಿಯೂ ಏರಿಕೆ ಕಂಡು ಬಂದಿದೆ. 

Written by - Ranjitha R K | Last Updated : Jan 13, 2023, 05:08 PM IST
  • ಚಿನ್ನದ ಬೆಲೆಯಲ್ಲಿ ಏರಿಕೆ
  • ಬೆಳ್ಳಿ ದರದಲ್ಲಿ ಇಳಿಕೆ
  • ಇಂದಿನ ದರ ಎಷ್ಟು ತಿಳಿಯಿರಿ
ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ .! ಖರೀದಿ ಯೋಚನೆಯೂ ಕಷ್ಟ  title=

ಬೆಂಗಳೂರು : Gold Silver Price Today : ನಾಲ್ಕು ದಿನಗಳ ನಂತರ ಚಿನ್ನದ ದರ ಮತ್ತೆ ಏರಿಕೆಯಾಗಿದೆ.  ಇನ್ನು ಐದು ರೂಪಾಯಿ ಏರಿದರೆ ನಾಲ್ಕು ದಿನಗಳ ಹಿಂದಿನ ಅಂದರೆ ಜನವರಿ 9ರ ದಾಖಲೆ ಮುರಿಯಲಿದೆ.  ಜನವರಿ 9 ರಂದು ಚಿನ್ನದ ಬೆಲೆಯು ಆಗಸ್ಟ್ 2020 ರ ದಾಖಲೆಯನ್ನು ಮುರಿದಿತ್ತು.  2020 ರಲ್ಲಿ ಚಿನ್ನವು ಗರಿಷ್ಠ ಅಂದರೆ 56,200 ರೂ. ತಲುಪಿತ್ತು. ಆದರೆ ಈ ಬಾರಿ ಅದನ್ನೂ ದಾಟಿ 10 ಗ್ರಾಂಗೆ 56259 ರೂ.ಗಳಷ್ಟಾಗಿ ದಾಖಲೆ ಬರೆದಿತ್ತು. ಜನವರಿ 9ರ ನಂತರ ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು ಬಂದಿತ್ತು.   ಆದರೆ ಇಂದು ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ದರದಲ್ಲಿಯೂ  ಏರಿಕೆ ಕಂಡು ಬಂದಿದೆ. 

ಎಂಸಿಎಕ್ಸ್ ನಲ್ಲಿ ಏರಿಕೆಯಾಯಿತು ಚಿನ್ನ ಮತ್ತು ಬೆಳ್ಳಿ ಬೆಲೆ : 
ನಿನ್ನೆ ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿ 70,000 ರೂ.ವರೆಗೆ ತಲುಪಿತ್ತು. ಆದರೆ ಇದೀಗ ಬೆಳ್ಳಿ ಬೆಲೆಯ ದಾಖಲೆ ಕೂಡಾ ಮುರಿದು ಬೀಳುವ ಲಕ್ಷಣಗಳು ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಶುಕ್ರವಾರ ಮಧ್ಯಾಹ್ನ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ 305 ರೂಪಾಯಿ ಏರಿಕೆಯಾಗಿ 10 ಗ್ರಾಂಗೆ 56180 ತಲುಪಿದೆ. ಬೆಳ್ಳಿ ಬೆಲೆ 118 ರೂಪಾಯಿ  ಇಳಿಕೆಯೊಂದಿಗೆ 68761 ರೂಪಾಯಿ ಲಿ ವಹಿವಾಟು ನಡೆಸುತ್ತಿದೆ. 

ಇದನ್ನೂ ಓದಿ : PM Maandhan Yojana : ಕೇಂದ್ರದಿಂದ ಪ್ರತಿ ತಿಂಗಳು ಸಿಗಲಿದೆ 3000 ಪಿಂಚಣಿ : ಈಗಲೇ ನೋಂದಣಿ ಮಾಡಿಕೊಳ್ಳಿ!

ಶುಕ್ರವಾರ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾದರೆ ಬೆಳ್ಳಿಯಲ್ಲಿ ಇಳಿಕೆಯಾಗಿದೆ. ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​( https://ibjarates.com ) ಬಿಡುಗಡೆ ಮಾಡಿರುವ ಬೆಲೆಯ ಪ್ರಕಾರ, 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 157 ರೂ.ಗಳ ಏರಿಕೆಯಾಗಿ 56254 ರೂ. ಆಗಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 125 ರೂಪಾಯಿ ಇಳಿಕೆಯಾಗಿ 67,848 ರೂಪಾಯಿಗಳಿಗೆ ತಲುಪಿದೆ. 

ಶುಕ್ರವಾರದ ವಹಿವಾಟಿನಲ್ಲಿ 23 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 56029 ರೂ., 22 ಕ್ಯಾರೆಟ್ 10 ಗ್ರಾಂಗೆ 51529 ರೂ., 18 ಕ್ಯಾರೆಟ್ 10 ಗ್ರಾಂಗೆ 42191 ರೂ.  ಆಗಿದೆ. 

ಇದನ್ನೂ ಓದಿ :  Good News: ದೇಶಾದ್ಯಂತ ಟಿಕೆಟ್ ಇಲ್ಲದೆ ಎಲ್ಲಿಗೆ ಬೇಕಾದರು ಉಚಿತವಾಗಿ ಪ್ರಯಾಣಿಸಿ ಎಂದ ಗೋ ಫಸ್ಟ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News