ಮದುವೆ ಸೀಸನ್‌ನಲ್ಲಿ ಏರುತ್ತಲೇ ಇದೆ ಚಿನ್ನ ಮತ್ತು ಬೆಳ್ಳಿ ದರ !

Gold Price Today : ಇಂದು ಚಿನ್ನದ ಬೆಲೆ 56,700 ರೂಪಾಯಿ ಗಡಿ ದಾಟಿದೆ. ಬೆಳ್ಳಿ  68,700 ರೂಪಾಯಿ ವಹಿವಾಟು ನಡೆಸುತ್ತಿದೆ. 

Written by - Ranjitha R K | Last Updated : Jan 23, 2023, 12:52 PM IST
  • ಚಿನ್ನದ ಬೆಲೆಯಲ್ಲಿ ಏರಿಕೆ
  • ಬೆಳ್ಳಿ ಕೂಡಾ ದುಬಾರಿ
  • ಇಂದಿನ ದರ ಎಷ್ಟು ತಿಳಿಯಿರಿ
ಮದುವೆ ಸೀಸನ್‌ನಲ್ಲಿ ಏರುತ್ತಲೇ ಇದೆ ಚಿನ್ನ ಮತ್ತು ಬೆಳ್ಳಿ ದರ !   title=

Gold Price Today : ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇಂದು ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ದುಬಾರಿಯಾಗಿವೆ. ಇಂದು ಚಿನ್ನದ ಬೆಲೆ 56,700 ರೂಪಾಯಿ ಗಡಿ ದಾಟಿದೆ. ಬೆಳ್ಳಿ  68,700 ರೂಪಾಯಿ ವಹಿವಾಟು ನಡೆಸುತ್ತಿದೆ. ಸದ್ಯದಲ್ಲೇ ಚಿನ್ನದ ಬೆಲೆ 10 ಗ್ರಾಂಗೆ 62,000 ರೂಪಾಯಿ ತಲುಪಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

MCX ನಲ್ಲಿ ಚಿನ್ನ-ಬೆಳ್ಳಿ ದುಬಾರಿ :
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯು ವಾರದ ಮೊದಲ ವಹಿವಾಟಿನ ದಿನವಾದ ಇಂದು, 0.15 ಶೇಕಡಾ ಏರಿಕೆಯೊಂದಿಗೆ 10 ಗ್ರಾಂಗೆ 56,745 ರೂ. ತಲುಪಿದೆ. ಬೆಳ್ಳಿಯೂ ಸಹ ಪ್ರತಿ ಕೆ.ಜಿ.ಗೆ ಶೇ.0.36ರಷ್ಟು ಏರಿಕೆಯೊಂದಿಗೆ 68793 ರೂ.ಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. 

ಇದನ್ನೂ ಓದಿ : ಈ ಖಾತೆ ಹೊಂದಿದವರ ಬ್ಯಾಂಕ್ ಖಾತೆಗೆ 10 ಸಾವಿರ ವರ್ಗಾವಣೆಯಾಗುತ್ತಿದೆ! ತಕ್ಷಣ ಅಪ್ಲೈ ಮಾಡಿ

ಜಾಗತಿಕ ಮಾರುಕಟ್ಟೆಯಲ್ಲಿಯೂ ದುಬಾರಿಯಾದ ಚಿನ್ನ ಬೆಳ್ಳಿ ದರ : 
ಚಿನ್ನದ ಬೆಲೆಯು ಶೇಕಡಾ 0.3 ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್ ಗೆ 1,932.12 ಡಾಲರ್ ತಲುಪಿದೆ. ಫೆಡ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ, ಹಳದಿ ಲೋಹದ ಬೆಲೆಗಳು ಹೆಚ್ಚಾಗಿದೆ. ಇನ್ನು ಬೆಳ್ಳಿ ಕೂಡಾ 0.4 ಶೇಕಡಾ ಏರಿಕೆಯೊಂದಿಗೆ ಒಂದು ಔನ್ಸ್  ಗೆ 24.04 ಡಾಲರ್ ಆಗಿದೆ.  

ನಿಮ್ಮ ನಗರದ ದರಗಳನ್ನು ಪರಿಶೀಲಿಸಿ :
ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸುತ್ತೀರೋ ಅದೇ ಸಂಖ್ಯೆಗೆ  ಚಿನ್ನದ  ದರ ಎಷ್ಟಿದೆ ಎನ್ನುವುದು ಮೆಸೇಜ್ ಮೂಲಕವೇ ಬರುತ್ತದೆ. 

ಇದನ್ನೂ ಓದಿBank hikes interest Rate: ಉಳಿತಾಯ ಖಾತೆಯ ಬಡ್ಡಿದರ ಹೆಚ್ಚಳ: ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದವರಿಗೆ ಹಿಂದೆಂದೂ ಕಂಡಿರದ ಬಂಪರ್ ಲಾಭ!

ಚಿನ್ನ ಖರೀದಿಸುವ ಮುನ್ನ ಈ ವಿಷಯ ಗಮನದಲ್ಲಿರಲಿ : 
ನೀವು ಕೂಡಾ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ಇದ್ದ ಚಿನ್ನವನ್ನೇ ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ಚಿನ್ನದ ಶುದ್ಧತೆ ಎಷ್ಟು ಎಂಬುದನ್ನು ತಿಳಿಯಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News