Gold Price Today: ಚಿನ್ನ ಖರೀದಿದಾರರಿಗೆ ಬಂಪರ್ ಅವಕಾಶ; ನಿಮ್ಮ ನಗರದ ದರ ಪರಿಶೀಲಿಸಿರಿ

ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ಬೆಲೆಯು ಇಳಿಕೆ ಹಾದಿಯತ್ತ ಸಾಗುತ್ತಿದ್ದು, ಹಬ್ಬದ ಋತುವಿನಲ್ಲಿ ಬಂಗಾರ ಖರೀದಿ ಭರಾಟೆ ಜೋರಾಗಿದೆ.

Written by - Puttaraj K Alur | Last Updated : Sep 19, 2021, 08:58 AM IST
  • ಹಬ್ಬದ ಋತುವಿನಲ್ಲಿ ಚಿನ್ನ ಖರೀದಿಗೆ ಸಿಗುತ್ತಿದೆ ಸುರ್ವಣಾವಕಾಶ
  • ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ(24K Gold) 47,350 ರೂ. ಇದೆ
  • ಹಳದಿ ಲೋಹದ ಬೆಲೆ ಇಳಿಕೆ ಕಾಣುತ್ತಿದ್ದು, ಖರೀದಿ ಭರಾಟೆ ಜೋರಾಗಿದೆ
Gold Price Today: ಚಿನ್ನ ಖರೀದಿದಾರರಿಗೆ ಬಂಪರ್ ಅವಕಾಶ; ನಿಮ್ಮ ನಗರದ ದರ ಪರಿಶೀಲಿಸಿರಿ  title=
ಹಬ್ಬದ ಋತುವಿನಲ್ಲಿ ಬಂಗಾರ ಖರೀದಿ ಭರಾಟೆ ಜೋರಾಗಿದೆ(Photo Courtesy: @India.com)

ನವದೆಹಲಿ: Gold Price Today: ಹಬ್ಬದ ಸೀಸನ್‌ಗೆ ಮುಂಚಿತವಾಗಿ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಭಾನುವಾರದಂದು(ಸೆ.19) ಚಿನ್ನದ ಬೆಲೆಯಲ್ಲಿ ಸ್ಥಿರವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 45,000 ರೂ. ಸಮೀಪದಲ್ಲಿದೆ. ಇದು ಖರೀದಾರರಿಗೆ ಹೆಚ್ಚಿನ ಖುಷಿ ನೀಡುತ್ತಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಭಾನುವಾರ 45,390 ರೂ. ಇದೆ ಎಂದು ತಿಳಿದುಬಂದಿದೆ. ನಿನ್ನೆ (ಸೆ.18) ಬೆಲೆಬಾಳುವ ಹಳದಿ ಲೋಹದ ಬೆಲೆಯಲ್ಲಿ ಪ್ರತಿ 100 ಗ್ರಾಂಗೆ 3,900 ರೂ.ನಷ್ಟು ಕುಸಿತ ಕಂಡಿತ್ತು.

ಇದನ್ನೂ ಓದಿ: Arecanut Price: ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರ

ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ಬೆಲೆ(Gold Price)ಯು ಇಳಿಕೆ ಹಾದಿಯತ್ತ ಸಾಗುತ್ತಿದೆ. ಹೀಗಾಗಿ ಹಬ್ಬದ ಋತುವಿನಲ್ಲಿ ಬಂಗಾರ ಖರೀದಿ ಭರಾಟೆ ಜೋರಾಗಿದೆ. ಶನಿವಾರದ ಕುಸಿತದ ಪರಿಣಾಮ 100 ಗ್ರಾಂ 22 ಕ್ಯಾರೆಟ್ ಚಿನ್ನದ ದರ 4,62,800 ರೂ.ಗೆ ತಲುಪಿತ್ತು. ಮತ್ತೊಂದೆಡೆ ಬೆಳ್ಳಿ ದರದಲ್ಲಿಯೂ ಕೂಡ ಕುಸಿತ ಕಂಡಿದೆ. ಹಿಂದಿನ ವಹಿವಾಟಿನಲ್ಲಿ 61,600 ರೂ. ಇದ್ದ ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ 1,600 ರೂ. ಕುಸಿತ ಕಂಡಿದ್ದು, 60,00 ರೂ.ಗೆ ತಲುಪಿದೆ.    

ನಗರ

22K Gold (Per 10gm) 24K Gold (Per 10gm)

ಬೆಂಗಳೂರು

43,400 ರೂ. 47,350 ರೂ.

ದೆಹಲಿ

45,550 ರೂ. 49,690 ರೂ.

ಮುಂಬೈ

45,390 ರೂ. 46,390 ರೂ.

ಚೆನ್ನೈ

Rs 43,710 ರೂ.  47,690 ರೂ.

ಕೋಲ್ಕತ್ತಾ

45,650 ರೂ.  48,350 ರೂ.

ಹೈದರಾಬಾದ್

43,400 ರೂ. 47,350 ರೂ.

ಅಹಮದಾಬಾದ್

44,680 ರೂ. 48,200 ರೂ.

ಲಕ್ನೋ

45,550 ರೂ. 49,690 ರೂ.

ಕೇರಳ

43,400 ರೂ. 47,350 ರೂ.

ಇದನ್ನೂ ಓದಿ: GOOD NEWS! IT ಕಂಪನಿಗಳಲ್ಲಿ ಬಂಪರ್ ಉದ್ಯೋಗಾವಕಾಶ - ಒಳ್ಳೆಯ ವೇತನ ಮತ್ತು ಬೋನಸ್!

ಕಳೆದ ವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿದಿದ್ದವು. ಹಳದಿ ಲೋಹದ ಬೆಲೆಗಳು 4 ವಾರಗಳ ಕನಿಷ್ಠ ಮಟ್ಟ ತಲುಪಿದ್ದರೆ, ಬೆಳ್ಳಿ ಬೆಲೆ ಸುಮಾರು 5 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿವೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ.

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News