7th Pay Commission Update: ಸರ್ಕಾರಿ ನೌಕರರಿಗೆ ಗಿಫ್ಟ್ ! ಶೇ.3ರಷ್ಟು ಡಿಎ ಹೆಚ್ಚಳ, ಬಾಕಿ ಹಣದ ಬಗ್ಗೆಯೂ ನಿರ್ಧಾರ

ವಾಸ್ತವವಾಗಿ, ಕೇಂದ್ರ ಸರ್ಕಾರವು ಈಗಾಗಲೇ ತನ್ನ ಉದ್ಯೋಗಿಗಳ ಡಿಎಯನ್ನು 31% ಕ್ಕೆ ಏರಿಸಿದೆ. ಈ ಅನುಕ್ರಮದಲ್ಲಿ ಒಡಿಶಾ ರಾಜ್ಯ ಸರ್ಕಾರವೂ ನೌಕರರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಿದೆ. 

Written by - Ranjitha R K | Last Updated : Mar 12, 2022, 02:41 PM IST
  • ಡಿಎ ಮತ್ತು ಡಿಆರ್‌ನಲ್ಲಿ 3% ಹೆಚ್ಚಳ
  • ಒಡಿಶಾ ಸರ್ಕಾರದ ಮಹತ್ವದ ಘೋಷಣೆ
  • ಕೇಂದ್ರ ಸರಕಾರವೂ ಶೇ.3ರಷ್ಟು ಡಿಎ ಹೆಚ್ಚಿಸಬಹುದು
7th Pay Commission Update: ಸರ್ಕಾರಿ ನೌಕರರಿಗೆ ಗಿಫ್ಟ್ !  ಶೇ.3ರಷ್ಟು ಡಿಎ ಹೆಚ್ಚಳ, ಬಾಕಿ ಹಣದ ಬಗ್ಗೆಯೂ ನಿರ್ಧಾರ  title=
ಡಿಎ ಮತ್ತು ಡಿಆರ್‌ನಲ್ಲಿ 3% ಹೆಚ್ಚಳ (file photo)

7th Pay Commission Update:  ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯಿದೆ. ಸರ್ಕಾರ ಮತ್ತೊಮ್ಮೆ ನೌಕರರ ಡಿಎ (DA)ಮತ್ತು ಡಿಆರ್ (DR)ಅನ್ನು ಶೇ.3ರಷ್ಟು ಹೆಚ್ಚಿಸಿದೆ. ಈ ಹೆಚ್ಚಳವು 1 ಜುಲೈ 2021 ರಿಂದ ಜಾರಿಗೆ ಬಂದಿದೆ. 

ಡಿಎ ಮತ್ತು ಡಿಆರ್‌ನಲ್ಲಿ 3% ಹೆಚ್ಚಳ :
ವಾಸ್ತವವಾಗಿ, ಕೇಂದ್ರ ಸರ್ಕಾರವು (Central Government) ಈಗಾಗಲೇ ತನ್ನ ಉದ್ಯೋಗಿಗಳ ಡಿಎಯನ್ನು (DA) 31% ಕ್ಕೆ ಏರಿಸಿದೆ. ಈ ಅನುಕ್ರಮದಲ್ಲಿ ಒಡಿಶಾ ರಾಜ್ಯ ಸರ್ಕಾರವೂ ನೌಕರರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಿದೆ. ಒಡಿಶಾ ರಾಜ್ಯ ನೌಕರರು ಕೂಡ ಕೇಂದ್ರ ನೌಕರರಂತೆ 31% ಡಿಎ ಮತ್ತು ಡಿಆರ್‌ನ (DR)ಲಾಭವನ್ನು ಪಡೆಯಳಿದ್ದಾರೆ. 

ಇದನ್ನೂ ಓದಿ : PF ಖಾತೆದಾರರಿಗೆ ಬಿಗ್ ಶಾಕ್! ಶೇ.8.10 ರಷ್ಟು ಬಡ್ಡಿದರ ಕಡಿಮೆ ಮಾಡಿದ EPFO 

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnayak)ಅವರು ರಾಜ್ಯದ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು 3% ಹೆಚ್ಚಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಸುಮಾರು 7.5 ಲಕ್ಷ ನೌಕರರು ಮತ್ತು ಪಿಂಚಣಿದಾರರು (Pensioners) ಇದರ ಪ್ರಯೋಜನ ಪಡೆಯಲಿದ್ದಾರೆ. 

7ನೇ ವೇತನ ಆಯೋಗದಡಿ (7th Pay Commission) ನೌಕರರಿಗೆ ಶೇ 30ರಷ್ಟು ಬಾಕಿಯನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವುದು ಗಮನಾರ್ಹ. ಈ ನಿರ್ಧಾರದಿಂದ ರಾಜ್ಯದ ಆರು ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಅದೇನೆಂದರೆ, ಹೊಸ ವರ್ಷದ ಆರಂಭದಿಂದಲೇ ನೌಕರರಿಗೆ ಭರ್ಜರಿ ಸುದ್ದಿ ಸಿಕ್ಕಿದಂತಾಗಿದೆ. 

ಇದನ್ನೂ ಓದಿ : FD Rules : FD ಗೆ ಸಂಬಂಧಿಸಿದ ನಿಯಮಗಲ್ಲಿ ಭಾರಿ ಬದಲಾವಣೆ ಮಾಡಿದ RBI

ಈ ಹೆಚ್ಚಳದ ನಂತರ, ಈಗ ನೌಕರರ ತುಟ್ಟಿಭತ್ಯೆ (Dearness Allowance) ಮೂಲ ವೇತನದ 31% ಆಗಿದೆ. ಈ ಹೆಚ್ಚಳವು ಜುಲೈ 1, 2021 ರಿಂದ ಅನ್ವಯವಾಗುತ್ತದೆ. ಇಷ್ಟು ಮಾತ್ರವಲ್ಲದೆ ಈಗ ರಾಜ್ಯದ ಸಾರ್ಕ್ ನೌಕರರು ಕೂಡ ಕೇಂದ್ರ ಸರ್ಕಾರದ ನೌಕರರಿಗೆ (Central government employees)ಸರಿಸಮಾನವಾಗಿ ಡಿಎ ಪಡೆಯುತ್ತಿದ್ದಾರೆ. 

ಕೇಂದ್ರ ಸರ್ಕಾರವೂ ಹೆಚ್ಚಿಸಬಹುದು :
ಮತ್ತೊಂದೆಡೆ, ಕೇಂದ್ರ ಸರ್ಕಾರವು ಕೇಂದ್ರ ನೌಕರರ ಡಿಎಯನ್ನು ಮತ್ತೊಮ್ಮೆ ಹೆಚ್ಚಿಸಬಹುದು ಎನ್ನಲಾಗಿದೆ. AICPI ಸೂಚ್ಯಂಕದ ಡೇಟಾವನ್ನು ನೋಡಿದರೆ, ಡಿಸೆಂಬರ್ 2021 ರವರೆಗೆ, ತುಟ್ಟಿ ಭತ್ಯೆಯು ಶೇಕಡಾ 34 ಕ್ಕೆ ಏರಿದೆ. ಅಂದರೆ ಇದರ ಪ್ರಕಾರ ಶೇ.3ರಷ್ಟು ಹೆಚ್ಚಳವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News