Share Market Update: ಇಂದೂ ಕೂಡ ಭಾರತೀಯ ಷೇರುಪೇಟೆ ಕುಸಿತದ ವ್ಯಾಪ್ತಿಯಲ್ಲಿಯೇ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದು ಬೆಳಗ್ಗೆ ಮಾರುಕಟ್ಟೆಗಳು ಹಸಿರು ನಿಶಾನೆಯಲ್ಲಿ ತೆರೆದುಕೊಂಡಿದೆ, ಆದರೆ ಮಾರುಕಟ್ಟೆಯ ಮುಕ್ತಾಯದ ಸಮಯದಲ್ಲಿ, ಸೆನ್ಸೆಕ್ಸ್ ಮತ್ತು ನಿಫ್ಟಿ ತನ್ನ ಎಲ್ಲಾ ಲಾಭಗಳನ್ನು ಕಳೆದುಕೊಂಡು ಕೆಂಪು ನಿಶಾನೆಯಲ್ಲಿ ವಹಿವಾಟು ನಡೆಸುತ್ತ ಮುಚ್ಚಿಕೊಂಡಿವೆ. ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ 38 ಮುಚ್ಚಿದ್ದು, ನಿಫ್ಟಿ 9 ಅಂಕಗಳಷ್ಟು ಕುಸಿತ ಕಂಡಿದೆ.
ಇಂದು ಷೇರು ಮಾರುಕಟ್ಟೆ ಯಾವ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ
ಇಂದು, ಬಿಎಸ್‌ಇಯ 30-ಷೇರುಗಳ ಸೂಚ್ಯಂಕ ಸೆನ್ಸೆಕ್ಸ್ 37.70 ಅಂಕಗಳ ಕುಸಿತದೊಂದಿಗೆ 57,107.52 ಕ್ಕೆ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ. ಇದಲ್ಲದೇ, ಎನ್‌ಎಸ್‌ಇಯ 50 ಷೇರುಗಳ ಸೂಚ್ಯಂಕ ನಿಫ್ಟಿ 8.90 ಅಂಕಗಳ ಕುಸಿತದೊಂದಿಗೆ 17,007ಕ್ಕೆ ವಹಿವಾಟು ನಿಲ್ಲಿಸಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರುಗಳು
ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 18 ಷೇರುಗಳು ವೇಗ ಪಡೆದುಕೊಂಡು ಮುಕ್ತಾಯ ಕಂಡರೆ ಉಳಿದ 12 ಷೇರುಗಳಲ್ಲಿ ಕುಸಿತದ ಕೆಂಪು ನಿಶಾನೆಯಲ್ಲಿ ವಹಿವಾಟು ಕೊನೆಗೊಳಿಸಿವೆ. ಮತ್ತೊಂದೆಡೆ, ನಿಫ್ಟಿಯಲ್ಲಿ 50 ಷೇರುಗಳ ಪೈಕಿ 28 ಷೇರುಗಳು ಹಸಿರು ನಿಶಾನೆಯ್ತೊಂದಿಗೆ ವಹಿವಾಟು ಅಂತ್ಯಗೊಳಿಸಿದರೆ, 22 ಷೇರುಗಳ ಕುಸಿತದೊಂದಿಗೆ ವಹಿವಾಟು ಮುಗಿಸಿವೆ.
ವಲಯವಾರು ಸೂಚ್ಯಂಕದ ಸ್ಥಿತಿ ಹೇಗಿದೆ?
ಇಂದು ಎಫ್‌ಎಂಸಿಜಿ, ಐಟಿ, ಮಾಧ್ಯಮ, ಫಾರ್ಮಾ, ಹೆಲ್ತ್‌ಕೇರ್ ಮತ್ತು ತೈಲ ಮತ್ತು ಅನಿಲ ವಲಯಗಳು ಏರಿಕೆಯೊಂದಿಗೆ ವಹಿವಾಟು ಮುಗಿಸಿವೆ. ಅರ್ಥಾತ್ ಅವುಗಳ ಷೇರುಗಳು ಏರಿಕೆ ಕಂಡಿವೆ. ತೈಲ ಮತ್ತು ಅನಿಲ ವಲಯವು ಶೇ.1.13ರಷ್ಟು ಜಿಗಿತದೊಂದಿಗೆ ಮುಚ್ಚಿದೆ. ಫಾರ್ಮಾ ವಲಯದಲ್ಲಿ ಶೇ. 1 ರಷ್ಟು ಮತ್ತು ಐಟಿ ವಲಯದಲ್ಲಿ ಶೇ. 0.97 ರಷ್ಟು ಜಿಗಿತ ಗಮನಿಸಲಾಗಿದೆ. ಇದೇ ವೇಳೆ, ಹೆಲ್ತ್‌ಕೇರ್ ಸೂಚ್ಯಂಕದಲ್ಲಿ ಶೇ.0.85 ರಷ್ಟು ಏರಿಕೆ ಕಂಡುಬಂದಿದೆ.
ಇದನ್ನೂ ಓದಿ-Liquidity Crisis In Banks: ಬ್ಯಾಂಕ್ ಗಳಲ್ಲಿ ನಗದು ಕೊರತೆ, ಹೂಡಿಕೆದಾರರ ಓಲೈಕೆಗೆ ಮುಂದಾಗಲಿವೆಯಾ ಬ್ಯಾಂಕುಗಳು
ಸೆನ್ಸೆಕ್ಸ್ ನಲ್ಲಿ ಏರಿಕೆ ಕಂಡ ಷೇರುಗಳು
PowerGrid, IndusInd Bank, Dr Reddy's Labs, HCL Tech, Nesle Industries ಮತ್ತು Asian Paints ಜೊತೆಗೆ Infosys, Wipro, TCS, Reliance, Bharati Airtel, ITC, HUL, UltraTech Cement, NTPC, Bajaj Finance, Bajaj Finserv ಮತ್ತು M&M ನ ಷೇರುಗಳು ವೇಗ ಪಡೆದುಕೊಂಡು ವಹಿವಾಟು ಅಂತ್ಯಗೊಳಿಸಿವೆ.
ಇದನ್ನೂ ಓದಿ-Share Market Closing: ಹೂಡಿಕೆದಾರರ ಭಾರಿ ಮಾರಾಟ ಪ್ರಕ್ರಿಯೆಯ ಹಿನ್ನೆಲೆ ಗೋತಾ ಹೊಡೆದ ಷೇರುಪೇಟೆ
ಸೆನ್ಸೆಕ್ಸ್ ನಲ್ಲಿ ಇಂದು ಕುಸಿತ ಅನುಭವಿಸಿದ ಷೇರುಗಳು
ಸನ್ ಫಾರ್ಮಾ, ಆಕ್ಸಿಸ್ ಬ್ಯಾಂಕ್, ಎಲ್ & ಟಿ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಎಸ್‌ಬಿಐ, ಟೈಟಾನ್ ಮತ್ತು ಟಾಟಾ ಸ್ಟೀಲ್ ಷೇರುಗಳು ಇಂದು ಕುಸಿದು ಕೆಂಪು ನಿಶಾನೆಯಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.