ರೇಪ್ ಮಾಡುತ್ತೇನೆ ಎಂದು ಬೆದರಿಸಿ ಮಸಾಜ್ ಥೆರಪಿಸ್ಟ್ ಸುಲಿಗೆ ಮಾಡಿದ್ದ ನಕಲಿ ಪೊಲೀಸ್ ಬಂಧನ

ನಾನು ಪೊಲೀಸ್ ಅಧಿಕಾರಿ, ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ರೇಪ್ ಮಾಡುತ್ತೇನೆ ಎಂದು ಬೆದರಿಸಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಹೆದರಿದ ಮಹಿಳಾ ಥೆರಪಿಸ್ಟ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೇಳಿದ್ದಾರೆ. 

Written by - VISHWANATH HARIHARA | Last Updated : Jul 22, 2024, 11:59 AM IST
  • ಪೊಲೀಸ್ ಎಂದು ನಂಬಿಸಿ ಮಹಿಳಾ ಮಸಾಜ್ ಥೆರಪಿಸ್ಟ್ ಬಳಿ ಸುಲಿಗೆ
  • ಸುಲಿಗೆಯನ್ನೆ ವೃತ್ತಿ ಮಾಡಿಕೊಂಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು
  • ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ರೇಪ್ ಮಾಡುತ್ತೇನೆ ಎಂದು ಬೆದರಿಸಿ ಮಸಾಜ್ ಥೆರಪಿಸ್ಟ್ ಸುಲಿಗೆ ಮಾಡಿದ್ದ ನಕಲಿ ಪೊಲೀಸ್ ಬಂಧನ title=

ಬೆಂಗಳೂರು:  ತಾನೊಬ್ಬ ಪೊಲೀಸ್ ಅಂತಾ ಬೆದರಿಸಿ ಮಹಿಳಾ ಮಸಾಜ್ ಥೆರಪಿಸ್ಟ್ ಬಳಿ ಸುಲಿಗೆ ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.  ಮಹೇಂದ್ರ ಕುಮಾರ್(33) ಬಂಧಿತ ಆರೋಪಿ. 

ಮಸಾಜ್​ಗಾಗಿ ಜುಲೈ 3 ರಂದು ಆರೋಪಿ ಮಹೇಂದ್ರ ಕುಮಾರ್ ತನ್ನ‌ ಹೆಸರು ಸುರೇಶ್ ಎಂದು ಆನ್ಲೈನ್ ಮೂಲಕ 25 ವರ್ಷದ ಥೆರಪಿಸ್ಟ್ ಬುಕ್ ಮಾಡಿದ್ದ. ಥೆರಪಿಸ್ಟ್​ ಯುವತಿಯನ್ನು ರಾಮಮೂರ್ತಿ ನಗರದ (Ramamurthy Nagar) ಅಪಾರ್ಟ್ಮೆಂಟ್‌ ಬಳಿ ಕರೆಸಿಕೊಂಡಿದ್ದ. ರಾತ್ರಿ‌ 10.30ರ ಸುಮಾರಿಗೆ ಥೆರಪಿಸ್ಟ್ ಸ್ಥಳಕ್ಕೆ ಬಂದ ತಕ್ಷಣ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಬ್ಲ್ಯಾಕ್ ಮೇಲ್ (Black Mail) ಮಾಡಲು ಶುರು ಮಾಡಿದ್ದ. 

ಇದನ್ನೂ ಓದಿ- Lovers Death: ನೈಸ್ ರಸ್ತೆ ಬಳಿಯ ಕೆರೆಯಲ್ಲಿ ನಾಪತ್ತೆಯಾಗಿದ್ದ ಪ್ರೇಮಿಗಳ ಶವ ಪತ್ತೆ!

ನಾನು ಪೊಲೀಸ್ ಅಧಿಕಾರಿ, ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ರೇಪ್ ಮಾಡುತ್ತೇನೆ ಎಂದು ಬೆದರಿಸಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಹೆದರಿದ ಮಹಿಳಾ ಥೆರಪಿಸ್ಟ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೇಳಿದ್ದಾರೆ. ಬಳಿಕ ಯುವತಿಯ ಸ್ನೇಹಿತನಿಂದ ಮಹೇಂದ್ರನಿಗೆ 1 ಲಕ್ಷದ 50 ಸಾವಿರ ಹಣ ವರ್ಗಾವಣೆ ಮಾಡಲಾಗಿದೆ‌. ನಂತರ ಯುವತಿಯನ್ನು ಇಡೀ ರಾತ್ರಿ‌ ಹೆಬ್ಬಾಳ ಸೇರಿ ಹಲವೆಡೆ ಸುತ್ತಾಡಿಸಿದ್ದ ಆರೋಪಿ, ಬೆಳಗಿನ ಜಾವ ಏರ್ಪೋರ್ಟ್ ಬಳಿ ಇಳಿಸಿ ನಿನ್ನ ಸ್ವಂತ ಊರಿಗೆ ಹೋಗಬೇಕು ಇಲ್ಲ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ.

ಇದನ್ನೂ ಓದಿ- ಟಾರ್ಗೆಟ್ 'ಹೆಡ್'.. ಕೊಚ್ಚಿ ಕೊಂದ ಹಂತಕ ಪಡೆ..! ರಂಗೋಲಿ ಹಾಕುವ ಸ್ಥಳದಲ್ಲೇ ರಕ್ತದ ಓಕುಳಿ

ಸದ್ಯ ಈಗ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು (Ramamurthy Nagar Police) ಬಂಧಿಸಿದ್ದಾರೆ. ಆರೋಪಿ ಮಹೇಂದ್ರ ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ. ಮೋಜು ಮಸ್ತಿಗಾಗಿ ಹಣ ಸುಲಿಗೆಗೆ ಇಳಿದಿದ್ದ. ತನಿಖೆ ವೇಳೆ ಆರೋಪಿ ಈ ಹಿಂದೆಯೂ ಮಾರತ್ಹಳ್ಳಿ, ಪುಲಿಕೇಶಿ ನಗರ ಠಾಣೆ ವ್ಯಾಪ್ತಿಯಲ್ಲಿ ಇದೆ ರೀತಿ ಮಾಡಿರೋದು ಗೊತ್ತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News