Sheena Bora Murder Case: ಮುಂಬೈನ ಭಾಯಿಖಲಾ ಜೈಲಿನಿಂದ ಬಿಡುಗಡೆಯಾದ ಶೀನಾ ಬೋರಾ ಹತ್ಯಾಕಾಂಡದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ

Sheena Bora Murder Case: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಬಿಡುಗಡೆಯಾಗಿದ್ದಾಳೆ. ಮಗಳು ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಭಾಯಿಖಲಾ ಜೈಲಿನಲ್ಲಿದ್ದ ಇಂದ್ರಾಣಿ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾಳೆ.

Written by - Nitin Tabib | Last Updated : May 20, 2022, 09:08 PM IST
  • ಶೀನಾ ಬೋರಾ ಹತ್ಯೆ ಪ್ರಕರಣ
  • ಮುಂಬೈನ ಭಾಯಿಖಲಾ ಜೈಲಿನಿಂದ ಬಿಡುಗಡೆಯಾದ ಇಂದ್ರಾಣಿ ಮುಖರ್ಜಿ
  • ದೇಶಾದ್ಯಂತ ಭಾರಿ ಸಂಚಲ ಮೂಡಿಸಿದ್ದ ಹತ್ಯೆ ಪ್ರಕರಣ
Sheena Bora Murder Case: ಮುಂಬೈನ ಭಾಯಿಖಲಾ ಜೈಲಿನಿಂದ ಬಿಡುಗಡೆಯಾದ ಶೀನಾ ಬೋರಾ ಹತ್ಯಾಕಾಂಡದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ title=
ndrani Mukerjea Released From Jail

Sheena Bora Murder Case: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಬಿಡುಗಡೆಯಾಗಿದ್ದಾಳೆ. ಮಗಳು ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಭಾಯಿಖಲಾ ಜೈಲಿನಲ್ಲಿದ್ದ ಇಂದ್ರಾಣಿ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾಳೆ. ಇಂದ್ರಾಣಿ ಮುಖರ್ಜಿ ಕಳೆದ ಆರೂವರೆ ವರ್ಷಗಳಿಂದ ಜೈಲಿನಲ್ಲಿದ್ದಳು ಎಂಬುದು ಇಲ್ಲಿ ಉಲ್ಲೇಖನೀಯ. ಜೈಲಿನಿಂದ ಹೊರಬಂದ ನಂತರ, ತಾನು ಚೆನ್ನಾಗಿರುವುದಾಗಿ ಇಂದ್ರಾಣಿ ಹೇಳಿಕೊಂಡಿದ್ದಾಳೆ. ಶೀನಾ ಬೋರಾ ಹತ್ಯೆಯ ಹಿಂದೆ ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಹೆಸರು ಮುನ್ನೆಲೆಗೆ ಬಂದಿತ್ತು. ಈ ಪ್ರಕರಣದಲ್ಲಿ ನಾವು ಸಂಬಂಧಗಳಲ್ಲಿನ ಲವ್-ಇಶ್ಕ್-ಧೋಕಾದ ಫಲಿತಾಂಶವನ್ನು ನಾವು ಗಮಣಿಸಿದ್ದೇವೆ. ಅಕ್ರಮ ಸಂಬಂಧದ ನೆಪದಲ್ಲಿ ಸುಳ್ಳು, ವಂಚನೆಯನ್ನು ಮರೆಮಾಚಲು ತಾಯಿಯೇ ಮಗಳನ್ನು ಹತ್ಯೆಗೈದಿದ್ದಳು. 

ಶೀನಾ ಬೋರಾ ಇಂದ್ರಾಣಿ ಮುಖರ್ಜಿಯ ಮೊದಲ ಪತಿಯ ಮಗಳಾಗಿದ್ದಳು ಮತ್ತು ಅವಳು ಇಂದ್ರಾಣಿಯೊಂದಿಗೆ ಆಕೆಯ ಸಹೋದರಿಯಾಗಿ ವಾಸಿಸುತ್ತಿದ್ದಳು. ಇದರ ಸತ್ಯಾಸತ್ಯತೆ ಶೀನಾ ಅಥವಾ ಇಂದ್ರಾಣಿಗೆ ಮಾತ್ರ ಗೊತ್ತಿತ್ತು. ಏತನ್ಮಧ್ಯೆ ಇಂದ್ರಾಣಿ ಮೂರನೇ ಬಾರಿಗೆ ಪೀಟರ್ ಮುಖರ್ಜಿ ಅವರನ್ನು ವಿವಾಹವಾಗಿದ್ದಳು. ಪೀಟರ್‌ಗೆ ಒಬ್ಬ ಮಗನಿದ್ದನು, ಅವನೊಂದಿಗೆ ಶೀನಾ ಬೋರಾ ಸಂಬಂಧ ಹೊಂದಿದ್ದಳು. ಇಂದ್ರಾಣಿ ಪೀಟರ್ ಜೊತೆ ಮದುವೆಯಾದ ನಂತರ ಪೀಟರ್ ಮಗ ಶೀನಾಳ ಮಲಸಹೋದರನಾಗಿದ್ದನಂತೆ. ಈ ಸತ್ಯವನ್ನು ಮರೆಮಾಚಲು ಇಂದ್ರಾಣಿ ತನ್ನ ಮಗಳನ್ನೇ ಹತ್ಯೆಗೈದಿದ್ದಳು. 

ಇದನ್ನೂ ಓದಿ-Kerala Monsoon: ಕೇರಳಕ್ಕೆ ಮಾನ್ಸೂನ್ ಪ್ರವೇಶ? ರಾಜ್ಯದ 9 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್ ಘೋಷಿಸಿದ ಐಎಂಡಿ

ಇಂದ್ರಾಣಿ ಮುಖರ್ಜಿ ಯಾರು?
ಇಂದ್ರಾಣಿ ಮುಖರ್ಜಿ ದೇಶದ ಚಿರಪರಿಚಿತ ಮಾಧ್ಯಮ  ಮಾಧ್ಯಮ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಪೀಟರ್ ಮುಖರ್ಜಿಯವರ ಎರಡನೇ ಪತ್ನಿಯಾಗಿದ್ದಳು. ಪೀಟರ್ ಮುಖರ್ಜಿ ಭಾರತದಲ್ಲಿ ಸ್ಟಾರ್ ಇಂಡಿಯಾ ಚಾನೆಲ್ ಅನ್ನು ಮುಂಚೂಣಿಗೆ ತರುವಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಿದವರಾಗಿದ್ದಾರೆ. ಇದು ಇಂದ್ರಾಣಿಗೆ ಆಕೆಯ ಮೂರನೆಯ ಮದುವೆಯಾಗಿತ್ತು. ಇಂದ್ರಾಣಿ ಅಸ್ಸಾಂನ ಗುವಾಹಟಿಯಲ್ಲಿ 1972 ರಲ್ಲಿ ಜನಿಸಿದ್ದಾಳೆ. 1996 ರಲ್ಲಿ INX ಸರ್ವಿಸೆಸ್  ಎಂಬ ಕೋಲ್ಕತ್ತಾ ಮೂಲದ ಖಾಸಗಿ ಕಂಪನಿಯಲ್ಲಿ HR ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದಾಳೆ.  2001 ರಲ್ಲಿ, ಆಕೆ ಕೋಲ್ಕತ್ತಾದಿಂದ ಮುಂಬೈಗೆ  ಸ್ಥಳಾಂತರಗೊಂಡಿದ್ದಳು.  ನಂತರ ಆಕೆ ಸ್ಟಾರ್ ಇಂಡಿಯಾಕ್ಕೆ ನೇಮಕಗೊಳ್ಳಲು ಪ್ರಾಯತ್ನಿಸುತ್ತಾಳೆ. ಇಲ್ಲಿಯೇ ಆಕೆ ಪೀಟರ್ ಮುಖರ್ಜಿ ಅವರನ್ನು ಭೇಟಿಯಾಗುತಾಳೆ ಮತ್ತು 2002ರಲ್ಲಿ ಇಬ್ಬರೂ ಮದುವೆಯಾಗುತ್ತಾರೆ.

ಇದನ್ನೂ ಓದಿ-Alert! ನಿಮ್ಮ ಬ್ಯಾಂಕ್ ಖಾತೆಯಲ್ಲಿ 342 ರೂ. ಗಳನ್ನು ಕಾಯದೆ ಹೋದಲ್ಲಿ 4 ಲಕ್ಷ ರೂ. ಗಳ ಹಾನಿ

ಶೀನಾ ಬೋರಾ ಹತ್ಯೆ ಪ್ರಕರಣದ ಸಂಪೂರ್ಣ ಮಾಹಿತಿ
23 ಮೇ 2012 ರಂದು, ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅರಣ್ಯದಲ್ಲಿ ಸಂಪೂರ್ಣವಾಗಿ ವಿರೂಪಗೊಂಡ ಮೃತ ದೇಹವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇದಾದ ನಂತರ ಈ ಪ್ರಕರಣದ ಅಲ್ಲಿಯೇ ನಿಂತುಹೋಗಿತ್ತು.  ಆಗಸ್ಟ್ 21, 2015 ರಂದು ಇದ್ದಕ್ಕಿದ್ದಂತೆ ಇಂದ್ರಾಣಿ ಮುಖರ್ಜಿ ಅವರ ಮಾಜಿ ವಾಹನ ಚಾಲಕ ಶ್ಯಾಮ್ವರ್ ರೈ ಅವರನ್ನು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಪೊಲೀಸರು ಬಂಧಿಸುತ್ತಾರೆ. ತೀವ್ರ ವಿಚಾರಣೆಯ ನಂತರ ಶೀನಾ ಬೋರಾ ಹತ್ಯೆಯಲ್ಲಿ ಇಂದ್ರಾಣಿ ಮುಖರ್ಜಿ ಭಾಗಿಯಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬರುತ್ತದೆ. ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಅವರನ್ನು 25 ಆಗಸ್ಟ್ 2015 ರಂದು ಬಂಧಿಸಲಾಯಿತು.  ಆ ಸಂದರ್ಭದಲ್ಲಿ ವಿರೂಪಗೊಂಡ ದೇಹವೇ ಶೀನಾಳ ದೇಹ ಎಂದು ಸಿಬಿಐ ತನ್ನ ವಾದ ಮಂಡಿಸಿತ್ತು ಮತ್ತು ನಂತರ ಇಂದ್ರಾಣಿ ಮುಖರ್ಜಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣವೇ  ಬಯಲಿಗೆ ಬಂದಿತ್ತು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News