ಲವ್‌ ಮ್ಯಾರೇಜ್‌, ಕಳ್ಳತನವೇ ಕಾಯಕ.. ಖಾಕಿ ಬಲೆಗೆ ಬಿದ್ದ ಕಿಲಾಡಿ ಜೋಡಿ!

Couple involved in theft : ಲವ್‌ ಮ್ಯಾರೇಜ್‌ ಮಾಡಿಕೊಂಡ ಮೇಲೆ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್‌ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ 65 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, ಎರಡು ಬೈಕ್ ಹಾಗೂ ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. 

Written by - VISHWANATH HARIHARA | Edited by - Chetana Devarmani | Last Updated : Dec 4, 2022, 02:31 PM IST
  • ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ದಂಪತಿ
  • ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್‌
  • ಖಾಕಿ ಬಲೆಗೆ ಬಿದ್ದ ಕಿಲಾಡಿ ಜೋಡಿ
ಲವ್‌ ಮ್ಯಾರೇಜ್‌, ಕಳ್ಳತನವೇ ಕಾಯಕ.. ಖಾಕಿ ಬಲೆಗೆ ಬಿದ್ದ ಕಿಲಾಡಿ ಜೋಡಿ!
ಕಿಲಾಡಿ ಜೋಡಿ 

ಬೆಂಗಳೂರು: ಲವ್‌ ಮ್ಯಾರೇಜ್‌ ಮಾಡಿಕೊಂಡ ಮೇಲೆ ದುಡಿದು ತಿನ್ನುವುದನ್ನು ಬಿಟ್ಟು ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ  ಖತರ್ನಾಕ್‌ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್‌ ಮಾಡಿ ದೋಚುತ್ತಿದ್ದ ದಂಪತಿ ನಾಗರಾಜ್ ಹಾಗೂ ರಮ್ಯ ಈಗ ಪೊಲೀಸರು ಅತಿಥಿಗಳಾಗಿದ್ದಾರೆ. ಸದ್ಯ ಬಂಧಿತರಿಂದ 65 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, ಎರಡು ಬೈಕ್ ಹಾಗೂ ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. 

ಇದನ್ನೂ ಓದಿ : ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಸುದೀಪ್‌ ದಂಪತಿ

ಮೈಸೂರು ಮೂಲದ ರಮ್ಯ ಹಾಗೂ ಉತ್ತರಹಳ್ಳಿ ನಾಗರಾಜ್ ಇಬ್ಬರು ಕೆಲ ವರ್ಷಗಳ ಹಿಂದೆ ಇನ್ ಸ್ಟ್ರಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಮೇಲೆ ಜೀವನ ನಡೆಸುವುದಕ್ಕಾಗಿ  ರಮ್ಯ ಹಾಗೂ ನಾಗರಾಜ್ ಕಳ್ಳತನ ಹಾದಿ ಹಿಡಿದಿದ್ದರು.ಹಾಡುಹಾಗಲೇ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. 

ಮನೆಯೊಳಗೆ ನಾಗರಾಜ್ ಹೋದರೆ ಹೊರಗಡೆ ರಮ್ಯ ಗಸ್ತು ಕಾಯುತ್ತಿದ್ದಳು. ಯಾರಾದರೂ ಬಂದರೆ ಸಿಗ್ನಲ್ ಕೊಟ್ಟು ಇಬ್ಬರು ಎಸ್ಕೇಪ್ ಆಗುತ್ತಿದ್ದರು. ಇದೇ ರೀತಿ ಈ ಕಿಲಾಡಿ ದಂಪತಿ ಮಾದನಾಯಕಹಳ್ಳಿ, ಆರ್.ಆರ್.ನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : “ಬಡವರಿಗೆ ಆಹಾರ, ಆರೋಗ್ಯ, ಆಶ್ರಯ ಭದ್ರತೆ ನೀಡಿದ್ದು ಕಾಂಗ್ರೆಸ್ ಪಕ್ಷ”

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News