19ನೇ ಮಹಡಿಯಿಂದ ಜಿಗಿದು ಮಹಿಳೆ ಸೂಸೈಡ್‌: ದೇಹ ಛಿದ್ರ ಛಿದ್ರ..!

ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಅಪಾರ್ಟ್‌ಮೆಂಟ್‌ನ 19 ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್‌ ಸಿಟಿಯ ತಲಘಟ್ಟಪುರದಲ್ಲಿ ನಡೆದಿದೆ. ಪೂರ್ವ ಹೈಲ್ಯಾಂಡ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು, ಚರಿಷ್ಮಾ (40) ಮೃತ ಮಹಿಳೆಯಾಗಿದ್ದಾರೆ. 

Written by - Krishna N K | Last Updated : Dec 25, 2022, 03:35 PM IST
  • ಅಪಾರ್ಟ್‌ಮೆಂಟ್‌ನ 19ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ
  • ಖಿನ್ನತೆಯಿಂದ ಬಳಲುತ್ತಿದ್ದ ಚರಿಷ್ಮಾ (40) ಮೃತ ಮಹಿಳೆ
  • ಮೂಲತ: ಚರಿಷ್ಮಾ ಚನ್ನೈ ಮೂಲದವರಾಗಿದ್ದು, ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.
19ನೇ ಮಹಡಿಯಿಂದ ಜಿಗಿದು ಮಹಿಳೆ ಸೂಸೈಡ್‌: ದೇಹ ಛಿದ್ರ ಛಿದ್ರ..! title=

ಬೆಂಗಳೂರು : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಅಪಾರ್ಟ್‌ಮೆಂಟ್‌ನ 19 ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್‌ ಸಿಟಿಯ ತಲಘಟ್ಟಪುರದಲ್ಲಿ ನಡೆದಿದೆ. ಪೂರ್ವ ಹೈಲ್ಯಾಂಡ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು, ಚರಿಷ್ಮಾ (40) ಮೃತ ಮಹಿಳೆಯಾಗಿದ್ದಾರೆ. 

ಮೃತ ಚರಿಷ್ಮಾಗೆ ಕರಣ್ ಎಂಬುವವರ ಜೊತೆ ವಿವಾಹವಾಗಿತ್ತು. 15 ವರ್ಷಗಳಿಂದ ದಂಪತಿ ಕೆನಾಡದಲ್ಲಿ ವಾಸವಾಗಿದ್ದರು. ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚರಿಷ್ಮಾ ಖಿನ್ನತೆಗೆ ಒಳಾಗಗಿದ್ದರಿಂದ ಕೆಲ ವರ್ಷಗಳಿಂದ ಕುಟುಂಬಸ್ಥರು ಚಿಕಿತ್ಸೆ ಕೊಡಿಸಿದರು ಪ್ರಯೋಜನವಾಗಿರಲಿಲ್ಲ. ಹೀಗಾಗಿ ಚರಿಷ್ಮಾಗೆ ಚಿಕಿತ್ಸೆ ಕೊಡಿಸಬೇಕು ಅಂತಲೇ ಗಂಡ ಕರಣ್ 2 ತಿಂಗಳ ಬೆಂಗಳೂರಿಗೆ ಕರೆತಂದಿದ್ದರು. ಮೂಲತ: ಚನ್ನೈ ಮೂಲದವರಾದ ಚರಿಷ್ಮಾ ಕುಟುಂಬಸ್ಥರು ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.

ಇದನ್ನೂ ಓದಿ: ʼರೆಡ್ಡಿ ಅಡ್ಜಸ್ಟ್‌ಮೆಂಟ್‌ ಮಾಡಿಕೊಳ್ಳುವ ವ್ಯಕ್ತಿ ಅಲ್ಲʼ : ಬಿಜೆಪಿ ವಿರುದ್ಧ ತೊಡೆತಟ್ಟಿದ ಗಣಿ ಧಣಿ

ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಚರಿಷ್ಮಾಗೆ ತಂದೆ-ತಾಯಿ,ಅಣ್ಣನ ಜೊತೆಗೆ ಗಂಡನೂ ಸಹ ಅರೈಕೆ ಮಾಡುತ್ತಿದ್ದರು. ಆದರೆ ಚರಿಷ್ಮಾ ಆರೋಗ್ಯದಲ್ಲಿ ಸುಧಾರಣೆಯಾಗಿರಲಿಲ್ಲ. ಹೀಗಾಗಿ ಸಾಕಷ್ಟು ನೊಂದಿದ್ದ ಚರಿಷ್ಮಾ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಸದ್ಯ ಇವತ್ತು ಕುಟುಂಬಸ್ಥರು ಮನೆಯಲ್ಲಿರುವಾಗಲೇ ಚರಿಷ್ಮಾ ನಾಪತ್ತೆಯಾಗಿದ್ದರು. ಇಡೀ ಕುಟುಂಬ ಸದಸ್ಯರು ಸೇರಿ ಹುಡುಕಿದಾಗ ಚರಿಷ್ಮಾ 19 ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಚರಿಷ್ಮಾ ಸಹೋದರ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News