Niharika conidela-Chaitanya: ಚಿರಂಜೀವಿ ಅವರ ತಮ್ಮನ ಮಗಳು ನಿಹಾರಿಕಾ ಕೊನಿಡೇಲಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯು ಹರಿದಾಡುತ್ತಿದೆ. ಈ ಜೋಡಿಗಳು 2020 ಡಿಸೆಂಬರ್ ರಲ್ಲಿಅದ್ದೂರಿ ಮದುವೆಯಾಗಿದ್ದರು. ಕೆಲವು ದಿನಗಳಿಂದ ಇವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ಇದಕ್ಕೆ ಸಾಕ್ಷಿಯಾಗಿ ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ನಿಹಾರಿಕಾ ಮತ್ತು ಚೈತನ್ಯ ತಮ್ಮ ಪ್ರತ್ಯೇಕತೆಯ ವದಂತಿಗಳ ನಡುವೆ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ.ಜೊನ್ನಲಗಡ್ಡ ಅವರು ತಮ್ಮ ಮದುವೆಯ ಚಿತ್ರಗಳನ್ನು ತಮ್ಮ ಪ್ರೊಫೈಲ್ನಿಂದ ಡೀಲಿಟ್ ಮಾಡಿದ್ದಾರೆ.
ಇದನ್ನೂ ಓದಿ: Kashmir Files: ಐಕಾನಿಕ್ ಗೋಲ್ಡ್ ಅವಾರ್ಡ್ಸ್ ಮುಡಿಗೇರಿಸಿಕೊಂಡ 'ದಿ ಕಾಶ್ಮೀರ್ ಫೈಲ್ಸ್'
ನಿಹಾರಿಕಾ ಮತ್ತು ಜೊನ್ನಲಗಡ್ಡಾ ಅವರ ಅದ್ಧೂರಿ ವಿವಾಹದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಇತರ ಕೊನಿಡೆಲಾ ಕುಟುಂಬ ಸದಸ್ಯರು ಸೇರಿದಂತೆ ತೆಲುಗು ದೊಡ್ಡ ತಾರೆಯರು ಭಾಗವಹಿಸಿದ್ದರು.
ಇದನ್ನೂ ಓದಿ: weekend with Ramesh season 5: ಮಾ.25 ರಿಂದ ಆರಂಭಗೊಳ್ಳಲಿದೆ 'ವೀಕೆಂಡ್ ವಿತ್ ರಮೇಶ್ʼ ಸೀಸನ್ 5'
ಸಂಗೀತ ಸಮಾರಂಭದಲ್ಲಿ ಚಿರಂಜೀವಿ ಅವರ ಡ್ಯಾನ್ಸ್ ಮಾಡಿದ ಕ್ಷಣ ಅದ್ಬುತವು ಪ್ರಮುಖ ಹೈಲೈಟ್ ಆಗಿತ್ತು. ಅತಿಥಿಗಳು ಮದುವೆಯಲ್ಲಿ ಪಾಲ್ಗೊಳ್ಳಲು ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು. ನಿಹಾರಿಕಾ-ಚೈತನ್ಯ ಅವರ ವಿವಾಹವು 2020 ರ ಅತಿದೊಡ್ಡ ಸೆಲೆಬ್ರಿಟಿ ವಿವಾಹಗಳಲ್ಲಿ ಒಂದಾಗಿತ್ತು. ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿರುವ ವರದಿಗಳಿಗೆ ದಂಪತಿಗಳು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.