ತಮಿಳು ರಾಜಕೀಯದಲ್ಲಿ ಸೂಪರ್ ಸ್ಟಾರ್ ವಿಜಯ್ ಸಂಚಲನ.. ಶೀಘ್ರದಲ್ಲೇ ಹೊಸ ಪಕ್ಷ?

Vijay Thalapathy: ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆ ದೇಶದ ರಾಜಕೀಯದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಭಾರೀ ಬದಲಾವಣೆಗಳು ಆಗುತ್ತಿವೆ. ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯಲಿದೆ ಎಂದು ವರದಿಯಾಗಿದೆ.  

Written by - Chetana Devarmani | Last Updated : Jan 27, 2024, 04:04 PM IST
  • ಲೋಕಸಭೆ ಚುನಾವಣೆ 2024
  • ತಮಿಳುನಾಡು ರಾಜಕೀಯದಲ್ಲಿ ಸಂಚಲನ
  • ರಾಜಕೀಯದಲ್ಲಿ ಸೂಪರ್ ಸ್ಟಾರ್ ವಿಜಯ್
ತಮಿಳು ರಾಜಕೀಯದಲ್ಲಿ ಸೂಪರ್ ಸ್ಟಾರ್ ವಿಜಯ್ ಸಂಚಲನ.. ಶೀಘ್ರದಲ್ಲೇ ಹೊಸ ಪಕ್ಷ? title=

Vijay Thalapathy Politics Entry: ದೇಶದಲ್ಲಿ ತಮಿಳುನಾಡು ರಾಜಕೀಯ ವಿಭಿನ್ನವಾಗಿದೆ. ಆ ರಾಜ್ಯದ ರಾಜಕೀಯವನ್ನು ಬಹುತೇಕ ಚಿತ್ರರಂಗದವರೇ ಆಳುವುದು ವಿಶೇಷ. ತಮಿಳು ಸಾಮ್ರಾಜ್ಯವು ಈಗಾಗಲೇ ದಶಕಗಳಿಂದ ಸಿನಿಪ್ರಿಯರ ಆಳ್ವಿಕೆಯಲ್ಲಿದೆ. ತಮಿಳು ರಾಜಕೀಯವನ್ನು ಚಿತ್ರರಂಗದಿಂದ ಬೇರ್ಪಡಿಸಲು ಅಸಾಧ್ಯ ಎಂಬಂತಾಗಿದೆ. 

ತಮಿಳು ನಟ ವಿಜಯ್‌ ದಳಪತಿ ರಾಜಕೀಯಕ್ಕೆ ಬರಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಮ್ಮ ಅಭಿಮಾನಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತಿರುವುದು ತಮಿಳು ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಜಯ್ ರಾಜಕೀಯಕ್ಕೆ ಬರಲಿದ್ದು, ಶೀಘ್ರದಲ್ಲೇ ಹೊಸ ಪಕ್ಷ ಆರಂಭಿಸಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ವಿನ್ನರ್ ಇವರೇ.. ಕೋಟಿ ಕೊಟ್ರು ಹೋಗಲ್ಲ ಎಂದು 50 ಲಕ್ಷ ಗೆದ್ದೇ ಬಿಟ್ರಾ! ಫಿನಾಲೆಗೆ ಒಂದು ದಿನ ಮುನ್ನವೇ ಹೆಸರು ಲೀಕ್ ಆಯ್ತಾ!! 

ವಿಜಯ್ ತಮಿಳು ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ಒಬ್ಬರು. ತಮ್ಮ ಸಿನಿಮಾಗಳ ಮೂಲಕ ಕೋಟಿಗಟ್ಟಲೆ ವೀಕ್ಷಕರನ್ನು ರಂಜಿಸುತ್ತಿರುವ ವಿಜಯ್ ಬಹಳಷ್ಟು ಜನಪ್ರಿಯರಾಗಿದ್ದಾರೆ. ವಿಜಯ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೇವಾ ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವ ಅಭಿಮಾನಿಗಳೆಲ್ಲ ಸೇರಿ ‘ವಿಜಯ್ ಮಕ್ಕಳ್ ಇಯಕ್ಕಂ’ ಎಂಬ ಸಂಘಟನೆ ಆರಂಭಿಸಿದರು. ಈ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವಿಜಯ್ ಆಗಾಗ್ಗೆ ಈ ಸಂಘದವರನ್ನು ಭೇಟಿಯಾಗುತ್ತಾರೆ. 

ಇತ್ತೀಚೆಗೆ, ಜನವರಿ 25 ರಂದು ವಿಜಯ್ ಅವರು ಚೆನ್ನೈನ ಪನಾಯೂರ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರಮುಖ ಸಭೆ ನಡೆಸಿದರು. ವಿಜಯ್ ಅವರು 'ವಿಜಯ್ ಮಕ್ಕಳ್ ಇಯಕ್ಕಂ' ಸಂಘಟಕರೊಂದಿಗೆ ಚರ್ಚಿಸಿದರು. ವಿವಿಧ ಜಿಲ್ಲೆಗಳಿಂದ ಆ ಸಂಘದ 150 ಪ್ರತಿನಿಧಿಗಳು ಭಾಗವಹಿಸಿದ್ದರು. ವಿಜಯ್ ಅವರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆಂದು ತೋರುತ್ತದೆ. ಈ ಸಭೆಯಲ್ಲಿ ರಾಜಕೀಯ ಪ್ರವೇಶಿಸುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ ಎಂದು ವರದಿಯಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಹೊಸ ಪಕ್ಷ ಘೋಷಣೆಯಾಗಲಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಏತನ್ಮಧ್ಯೆ, ಈಗಾಗಲೇ ಪಕ್ಷದ ಹೆಸರು ನೋಂದಾಯಿಸಲಾಗಿದೆ ಎನ್ನಲಾಗಿದ್ದು, ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯ್ ಸಿದ್ಧತೆ ನಡೆಸಿದ್ದು, ಅದಕ್ಕಾಗಿ ಹೊಸ ಪಕ್ಷವನ್ನು ಹುಟ್ಟು ಹಾಕುತ್ತಿದ್ದಾರೆ. ಆದರೆ ವಿಜಯ್ ಹಿಂದೆ ಬಿಜೆಪಿ ಇದ್ದಂತೆ ಕಾಣುತ್ತಿದೆ. ತಮಿಳುನಾಡಿನ ಜನರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಈ ಹಿನ್ನಲೆಯಲ್ಲಿ ವಿಜಯ್ ಮೂಲಕ ತಮಿಳು ರಾಜಕೀಯದಲ್ಲಿ ತಿರುಗೇಟು ನೀಡಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ಸಿಗಲಿದೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ತಮಿಳು ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಡಿವೋರ್ಸ್‌!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News