ಮೊದಲ ಸಿನಿಮಾ ಸೇರಿ 19 ಫ್ಲಾಪ್‌ ಕೊಟ್ಟಿದ್ರೂ ದೇಶದ ಶ್ರೀಮಂತ ನಾಯಕಿ ಈಕೆ

India's Richest Actress 2023: ಅನೇಕ ನಟಿಯರು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಬದ್ಧತೆಯಿಂದ ದೊಡ್ಡ ಹೆಸರು ಮತ್ತು ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ಆದರೆ, ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ ಉತ್ತರ...   

Written by - Savita M B | Last Updated : Dec 16, 2023, 09:58 AM IST
  • ಅತೀ ಹೆಚ್ಚು ಸಂಪತ್ತು ಗಳಿಸಿರುವ ಹೀರೋಯಿನ್‌ಗಳಲ್ಲಿ ನಮಗೆ ನೆನಪಿಗೆ ಬರುವ ಮೊದಲ ಹೆಸರು
  • ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ?
  • ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆಯ ನಟಿ ಯಾರು ಗೊತ್ತಾ?
ಮೊದಲ ಸಿನಿಮಾ ಸೇರಿ 19 ಫ್ಲಾಪ್‌ ಕೊಟ್ಟಿದ್ರೂ ದೇಶದ ಶ್ರೀಮಂತ ನಾಯಕಿ ಈಕೆ title=

India's Richest Actress: ಅತೀ ಹೆಚ್ಚು ಸಂಪತ್ತು ಗಳಿಸಿರುವ ಹೀರೋಯಿನ್‌ಗಳಲ್ಲಿ ನಮಗೆ ನೆನಪಿಗೆ ಬರುವ ಮೊದಲ ಹೆಸರು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ದೀಪಿಕಾ ಪಡುಕೋಣೆ. ದೀಪಿಕಾ ಒಂದು ಚಿತ್ರಕ್ಕೆ 25 ರಿಂದ 30 ಕೋಟಿ ರೂ... ಆದರೆ ಅವರ ಹೆಚ್ಚಿನ ಗಳಿಕೆಯು ಜಾಹೀರಾತುಗಳಿಂದ ಬರುತ್ತಿದ್ದು.. ಪ್ರಸ್ತುತ ಅವರು ಏಷ್ಯನ್ ಪೇಂಟ್ಸ್, ಲಾಯ್ಡ್, ಜಾಗ್ವಾರ್, ಜಿಯೋ, ಲೋರಿಯಲ್, ತನಿಷ್ಕ್ ಮತ್ತು ಕೋಕಾ-ಕೋಲಾದಂತಹ ದೊಡ್ಡ ಕಂಪನಿಗಳಿಗೆ ಜಾಹೀರಾತುಗಳನ್ನು ನೀಡುತ್ತಿದ್ದಾರೆ.. ದೀಪಿಕಾ ಅವರ ನಿವ್ವಳ ಮೌಲ್ಯ ಸುಮಾರು 500 ಕೋಟಿ ರೂಪಾಯಿಗಳಾಗಿದ್ದು, ಬಾಲಿವುಡ್‌ನ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇನ್ನು ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್‌ನ ಎರಡನೇ ಶ್ರೀಮಂತ ನಟಿ. ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ಗಳಿಸುವ ಜೊತೆಗೆ, ಪ್ರಿಯಾಂಕಾ Beauty product ಕಂಪನಿ, ಬಟ್ಟೆ ಕಂಪನಿ, ನ್ಯೂಯಾರ್ಕ್‌ನಲ್ಲಿ ರೆಸ್ಟೋರೆಂಟ್ ನಿರ್ಮಾಣ ಕಂಪನಿಯನ್ನು ಸಹ ಹೊಂದಿದ್ದಾರೆ. ಹಲವು ಸ್ಟಾರ್ಟಪ್ ಗಳಲ್ಲೂ ಹೂಡಿಕೆ ಮಾಡಿದ್ದಾರೆ. ಸದ್ಯಕ್ಕೆ ಪ್ರಿಯಾಂಕಾ ಅವರ ಒಟ್ಟು ಆಸ್ತಿ 600 ಕೋಟಿ ರೂ.

ಇದನ್ನೂ ಓದಿ-ಸಿಲ್ಕ್ ಸ್ಮಿತಾ ಮೈಯನ್ನು ಸಿಗರೇಟ್ ನಿಂದ ಸುಡುತ್ತಿದ್ದ ಖ್ಯಾತ ನಟ ಯಾರು?

ಚಿತ್ರವೊಂದಕ್ಕೆ 9 ರಿಂದ 10 ಕೋಟಿ ಚಾರ್ಜ್ ಮಾಡುವ ಆಲಿಯಾ ಭಟ್ ನಿವ್ವಳ ಮೌಲ್ಯದ ಪ್ರಕಾರ ಬಾಲಿವುಡ್‌ನ ಮೂರನೇ ಶ್ರೀಮಂತ ನಟಿ. ಅವರು ಬಟ್ಟೆ ಬ್ರಾಂಡ್‌ನಿಂದ ಒಂದು ವರ್ಷದಲ್ಲಿ 150 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಾರೆ.. ಇದಲ್ಲದೇ ಎಟರ್ನಲ್ ಸನ್ ಶೈನ್ ಹೆಸರಿನ ಪ್ರೊಡಕ್ಷನ್ ಹೌಸ್ ಕೂಡ ಇದೆ. ಆಲಿಯಾ ಡ್ಯುರೊಫ್ಲೆಕ್ಸ್, ಅವಾರ್, ಕ್ಯಾಡ್ಬರಿ, ಕ್ವಾಲಿಟಿ ವಾಲ್ಸ್, ಕಾರ್ನೆಟ್ಟೊ ಮತ್ತು ಫ್ರೂಟಿಯಂತಹ ಕಂಪನಿಗಳಿಗೆ ಜಾಹೀರಾತುಗಳನ್ನು ಸಹ ಮಾಡುತ್ತಾರೆ. ಅವರ ನಿವ್ವಳ ಮೌಲ್ಯ ಸುಮಾರು 550 ಕೋಟಿ ರೂ.

ಗಳಿಕೆಯಲ್ಲಿ ಕರೀನಾ ಕಪೂರ್ ಖಾನ್ ಐದನೇ ಸ್ಥಾನದಲ್ಲಿದ್ದಾರೆ. ಕರೀನಾ ಚಿತ್ರವೊಂದಕ್ಕೆ 10 ಕೋಟಿ ಹಾಗೂ ಜಾಹೀರಾತಿಗೆ 6 ಕೋಟಿ ಚಾರ್ಜ್ ಮಾಡುತ್ತಾರೆ. ಸ್ಟೇಜ್ ಶೋಗಳು ಮತ್ತು ರೇಡಿಯೋ ಕಾರ್ಯಕ್ರಮಗಳಿಂದಲೂ ಇವರು ಗಳಿಸುತ್ತಾರೆ.. ಕರೀನಾ ಅವರ ಒಟ್ಟು ಆಸ್ತಿ 485 ಕೋಟಿ ರೂ.

ಗಳಿಕೆಯಲ್ಲಿ ಆರನೇ ಸ್ಥಾನದಲ್ಲಿರುವ ಕತ್ರಿನಾ ಕೈಫ್ ಚಿತ್ರವೊಂದಕ್ಕೆ ಸುಮಾರು 7-8 ಕೋಟಿ ರೂ. ಮತ್ತು ಜಾಹೀರಾತಿಗಾಗಿ ಸುಮಾರು 7 ಕೋಟಿ ರೂ. ಚಾರ್ಜ್‌ ಮಾಡುತ್ತಾರೆ.. Beauty product Brandನಿಂದ ಸುಮಾರು 100 ಕೋಟಿ ವಹಿವಾಟು ನಡೆಸುತ್ತಾರೆ.. ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 264 ಕೋಟಿ ರೂ.

ಗಳಿಕೆಯ ವಿಷಯದಲ್ಲಿ ನಾವು ಟಾಪ್ 10 ಪಟ್ಟಿಯ ಬಗ್ಗೆ ನೋಡುವುದಾದರೇ, ಅನುಷ್ಕಾ ಶರ್ಮಾ 7 ನೇ ಸ್ಥಾನದಲ್ಲಿದ್ದಾರೆ, ಅವರ ಒಟ್ಟು ಸಂಪತ್ತು 255 ಕೋಟಿ ರೂ.

ಇದರ ನಂತರ ಮಾಧುರಿ ದೀಕ್ಷಿತ್ ಒಟ್ಟು ಸಂಪತ್ತು ಸುಮಾರು 250 ಕೋಟಿ ರೂ. ಈ ಪಟ್ಟಿಯಲ್ಲಿ ಕಾಜೋಲ್ 235 ಕೋಟಿ ಮೌಲ್ಯದ ಆಸ್ತಿಯೊಂದಿಗೆ 9 ನೇ ಸ್ಥಾನದಲ್ಲಿದ್ದರೆ, ರಾಣಿ ಮುಖರ್ಜಿ ಅವರ ಹೆಸರು 10 ನೇ ಸ್ಥಾನದಲ್ಲಿದೆ. ಅವರು ಸುಮಾರು 206 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಇದನ್ನೂ ಓದಿ-“ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆಯ ನಟಿಯ ಬಗ್ಗೆ ಹೇಳುವುದಾದರೆ, ಅದರಲ್ಲಿ ಒಬ್ಬ ನಟಿಯ ಹೆಸರು ಬರುತ್ತದೆ, ಅವರೇ ಐಶ್ವರ್ಯಾ ರೈ ಬಚ್ಚನ್ ಇನ್ನೂ ನಿವ್ವಳ ಮೌಲ್ಯದ ವಿಷಯದಲ್ಲಿ ಇಡೀ ಬಾಲಿವುಡ್ ಅನ್ನು ಆಳುವ ನಟಿ. ಸಿನಿಮಾಗಳಿಗೆ 10 ಕೋಟಿ ಮತ್ತು ಜಾಹೀರಾತಿಗೆ 7 ರಿಂದ 8 ಕೋಟಿ ಚಾರ್ಜ್ ಮಾಡುವ ಐಶ್ವರ್ಯಾ ರೈ ಬಚ್ಚನ್ ಅವರ ಆಸ್ತಿ ಸುಮಾರು 800 ಕೋಟಿ ರೂಪಾಯಿ.

ನಟಿಯ ಮೊದಲ ಚಿತ್ರ ಇರುವರ್ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ.. ಇದರ ನಂತರ ಅವರು ಔರ್ ಪ್ಯಾರ್ ಹೋ ಗಯಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಆದರೆ ಅಲ್ಲಿಯೂ ಇವರ ಮೊದಲ ಚಿತ್ರ  ವಿಫಲವಾಯಿತು. ಇದರ ನಂತರ, ಅವರು ಕುಚ್ ನಾ ಕಹೋ, ರಾವನ್ ಮತ್ತು ದಿಲ್ ಕಾ ರಿಶ್ತಾ ಮುಂತಾದ ಚಿತ್ರಗಳು ಸೇರಿದಂತೆ 19 ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News