Kalki 2898 AD: ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್: ಕಲ್ಕಿ ಚಿತ್ರದ ಹೊಸ ಅಪ್‌ಡೇಟ್‌ ರಿವೀಲ್!

Kalki 2898 AD Update: ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಕಲ್ಕಿ 2898 AD ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಕಾರಣಾಂತರಗಳಿಂದ ಚಿತ್ರದ ಡೇಟ್‌ ಮುಂದೂಡಲಾಗಿದ್ದು, ಇದೀಗ ಈ ಚಿತ್ರದ ಅಪ್‌ಡೇಟ್‌ ಸಿಕ್ಕಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 11, 2024, 05:01 PM IST
  • ಮೊದಲು ಪ್ರಭಾಸ್ ನಟನೆಯ ಕಲ್ಕಿ 2898 AD ಅನ್ನು ಮೇ 30, 2024 ರಿಲೀಸ್ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಈ ಸಿನಿಮಾದ ದಿನಾಂಕವನ್ನು ಮುಂದೂಡಲಾಗಿದೆ.
  • ಕಲ್ಕಿ 2898 AD ಚಿತ್ರವನ್ನು ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲೂ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇದು ಭಾರತದ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ.
  • ನಟ ಪ್ರಭಾಸ್ ಕಲ್ಕಿ 2898 AD ಜೊತೆಗೆ, ಡೈರೆಕ್ಟರ್ ಮಾರುತಿ ಹಾಸ್ಯ-ಭಯಾನಕ ಚಿತ್ರ ದಿ ರಾಜಾ ಸಾಬ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.
Kalki 2898 AD: ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್: ಕಲ್ಕಿ ಚಿತ್ರದ ಹೊಸ ಅಪ್‌ಡೇಟ್‌ ರಿವೀಲ್! title=

Kalki 2898 AD Release Date: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಕಲ್ಕಿ ಸಿನಿಮಾದ ಹೊಸ ಅಪ್‌ಡೇಟ್‌ ಹೊರ ಬಂದಿದೆ. ಅಂತೂ ಇಂತೂ ಕಲ್ಕಿ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾ ಇದೇ ಜೂನ್ 20ರಂದು ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ. ಚುನಾವಣೆಯ ನಂತರ ಈ ಚಿತ್ರ ಬಿಡುಗಡೆಯಾಗಲಿದೆ.

ಮುಂಬರುವ ಲೋಕಸಭಾ ಚುನಾವಣೆಯ ಕಾರಣದಿಂದ ಈ ಸಿನಿಮಾದ ತೆರೆಕಾಣಲಿದೆ. ಆದರೆ ಚಿತ್ರತಂಡ ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡಿಲ್ಲ. ಮೊದಲು ಪ್ರಭಾಸ್ ನಟನೆಯ ಕಲ್ಕಿ 2898 AD ಅನ್ನು ಮೇ 30, 2024 ರಿಲೀಸ್ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಈ ಸಿನಿಮಾದ ದಿನಾಂಕವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ʼಬಡೇ ಮಿಯಾ ಚೋಟೆ ಮಿಯಾʼ ರಿಲೀಸ್‌..! ಹೇಗಿದೆ ಗೊತ್ತಾ ಅಕ್ಷಯ್‌, ಟೈಗರ್‌ ಮೊದಲ ಸಿನಿಮಾ..?

ಕಲ್ಕಿ 2898 AD ಚಿತ್ರವನ್ನು ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲೂ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇದು ಭಾರತದ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ಅಂತಹ ಅನೇಕ ಕಲಾವಿದರು ನಟಿಸಿದ್ದಾರೆ.

ನಟ ಪ್ರಭಾಸ್ ಕಲ್ಕಿ 2898 AD ಜೊತೆಗೆ, ಡೈರೆಕ್ಟರ್ ಮಾರುತಿ ಹಾಸ್ಯ-ಭಯಾನಕ ಚಿತ್ರ ದಿ ರಾಜಾ ಸಾಬ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು VFX ನ ವ್ಯಾಪಕ ಬಳಕೆಯನ್ನು ಹೊಂದಿದೆ ಎನ್ನಾಲಾಗುತ್ತಿದೆ. ಇನ್ನೂ ಈ ನಟ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್‌ ಸಿನಿಮಾದಲ್ಲಿ ಪ್ರಾಮಾಣಿಕ ಮತ್ತು ಕೋಪಗೊಂಡ ಯುವ ಪೋಲೀಸ್ ಪಾತ್ರದಲ್ಲಿ ಕೂಡ ನಟಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News