ʼಟೈಟಲ್‌ ಇಲ್ಲದ ಪೋಸ್ಟರ್‌ ಕುತೂಹಲಕಾರಿʼ : ʼಕಾಂತಾರʼದ ದಂತಕಥೆ ಬಿಚ್ಚಿಟ್ಟ ಸಪ್ತಮಿ..!

ಕಾಂತಾರಕ್ಕೆ ನಾನು ಮಂಗಳೂರು ಕನ್ನಡ ಕಲಿತು ಡಬ್ಬಿಂಗ್‌ ಮಾಡಿದೆ. ಸಿನಿಮಾ ನೋಡಿದ ಎಲ್ಲರೂ ನನ್ನನ್ನು ಮನೆಯ ಮಗಳ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಕಾಂತಾರದ ಸಿಂಗಾರ ಸಿರಿ ನಟಿ ಸಪ್ತಮಿಗೌಡ ತಮ್ಮ ಅನುಭವಗಳನ್ನು ಜೀ ಕನ್ನಡ ನ್ಯೂಸ್‌ ಜೊತೆ ಹಂಚಿಕೊಂಡರು. 

Written by - Krishna N K | Last Updated : Oct 7, 2022, 04:42 PM IST
  • ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾ ಕಾಂತಾರ ಅದ್ಭುತ ಪ್ರದರ್ಶನ ಕಾಣುತ್ತಿದೆ
  • ಥಿಯೇಟರ್‌ಗಳ ಮುಂದೆ ಹೌಸ್‌ ಫುಲ್‌ ಬೋರ್ಡ್‌ ರಾರಾಜಿಸುತ್ತಿದೆ
  • ಕಾಂತಾರದ ಕುರಿತು ನಟಿ ಸಪ್ತಮಿಗೌಡ ಅವರು ಕುತೂಹಲ ಮಾಹಿತಿ ಬಿಚ್ಚಿಟ್ಟಿದ್ದಾರೆ
 ʼಟೈಟಲ್‌ ಇಲ್ಲದ ಪೋಸ್ಟರ್‌ ಕುತೂಹಲಕಾರಿʼ : ʼಕಾಂತಾರʼದ ದಂತಕಥೆ ಬಿಚ್ಚಿಟ್ಟ ಸಪ್ತಮಿ..! title=

ಬೆಂಗಳೂರು : ಕಾಂತಾರಕ್ಕೆ ನಾನು ಮಂಗಳೂರು ಕನ್ನಡ ಕಲಿತು ಡಬ್ಬಿಂಗ್‌ ಮಾಡಿದೆ. ಸಿನಿಮಾ ನೋಡಿದ ಎಲ್ಲರೂ ನನ್ನನ್ನು ಮನೆಯ ಮಗಳ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಕಾಂತಾರದ ಸಿಂಗಾರ ಸಿರಿ ನಟಿ ಸಪ್ತಮಿಗೌಡ ತಮ್ಮ ಅನುಭವಗಳನ್ನು ಜೀ ಕನ್ನಡ ನ್ಯೂಸ್‌ ಜೊತೆ ಹಂಚಿಕೊಂಡರು. 
 
ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾ ಕಾಂತಾರ ಅದ್ಭುತ ಪ್ರದರ್ಶನ ಕಾಣುತ್ತಿದೆ. ಥಿಯೇಟರ್‌ಗಳ ಮುಂದೆ ಹೌಸ್‌ ಫುಲ್‌ ಬೋರ್ಡ್‌ ರಾರಾಜಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ದಿನವಾದರೂ ಕಾಂತಾರ ಅಬ್ಬರ ಕೊಂಚವು ತಗ್ಗಿಲ್ಲ. ಚಿತ್ರತಂಡ ಸಿನಿಮಾ ಸಕ್ಸಸ್‌ ಖುಷಿಯಲ್ಲಿದೆ. ಇನ್ನು ಜೀ ಕನ್ನಡ ನ್ಯೂಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂತಾರದ ಕುರಿತು ಸಪ್ತಮಿ ಕುತೂಹಲ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:  ಟೀಂ ಇಂಡಿಯಾಗೆ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲು ಉತ್ತಮ ಅವಕಾಶ!

ಸಿನಿಮಾ ನೋಡಿದವರು ನನ್ನನ್ನು ಕರಾವಳಿ ಹುಡುಗಿ ಅಂತ ಅಂದುಕೊಂಡಿದ್ದರು. ಬೆಂಗಳೂರು ಹುಡುಗಿ ಅಂತ ಯಾರಿಗೂ ಗೊತ್ತಿರಲಿಲ್ಲ. ಮಂಗಳೂರು ಕನ್ನಡ ಕಲಿತು ಡಬ್ಬಿಂಗ್‌ ಮಾಡಿದೆ. ಯಾಕಂದ್ರೆ ಆಯಾ ಪ್ರಾಂತ್ಯದ ಭಾಷೆಯ ಶೈಲಿಗೆ ಪ್ರಾಮುಖ್ಯತೆ ಇರುತ್ತೆ. ಎಲ್ಲರೂ ನನಗೆ ಬೆಂಬಲ ಕೊಟ್ರು. ಸದ್ಯ ಎಲ್ಲರೂ ನನ್ನನ್ನು ತಮ್ಮ ಮನೆ ಮಗಳ ರೀತಿ ನೋಡ್ತಾ ಇದಾರೆ. ಇದು ಖುಷಿ ಕೊಡುತ್ತಿದೆ ಎಂದು ಸಪ್ತಮಿ ಅಭಿಮಾನಿಗಳ ಪ್ರಿತಿಯನ್ನು ನೆನೆದರು.  

ಕಾಂತಾರ ಟೈಟಲ್‌ ಹೇಗೆ ಬಂತು ಗೊತ್ತಾ..!

ಕಾಂತಾರ ಟೈಟಲ್‌ ಕರಿತು ಇಂಟ್ರಸ್ಟಿಂಗ್‌ ವಿಚಾರ ಹಂಚಿಕೊಂಡ ಸಪ್ತಮಿ, ರಿಷಬ್‌ ಶೆಟ್ಟಿ ಸರ್‌ ಆಫಿಸ್‌ಗೆ ಹೊದಾಗ ಸಿನಿಮಾ ಟೈಟಲ್‌ ಇನ್ನೂ ಫಿಕ್ಸ ಆಗಿದ್ದಿಲ್ಲ. ಜಸ್ಟ್‌ ಪ್ರಾಜೆಕ್ಟ್‌ ಆಚೆ ಬರ್ತಾಯಿದೆ ಅಂತ ಹೇಳಿದ್ರು. ಒಂದು ಪೊಸ್ಟರ್‌ ತೋರಿಸಿದ್ರು. ಆ ಪೊಸ್ಟರ್‌ ನೋಡಿ ನನಗೆ ಕುತೂಹಲವಾಯ್ತು. ಬಟ್‌ ಕಾಂತಾರ ಟೈಟಲ್‌ ಇರಲಿಲ್ಲ ʼನಿನ್ನೊಳಗಿನ ಕಿಚ್ಚು ನಿನ್ನನ್ನೆ ಸುಡದಿರಲಿʼ ಅಂತ ಟ್ಯಾಗ್‌ಲೈನ್‌ ಇತ್ತು. ಎಲ್ಲಾ ಸ್ಟೋರಿ ರೆಡಿ ಆದ್ಮೇಲೆ ರಾಜ್‌ ಬಿ ಶೆಟ್ಟಿ ಅವರು ಕಾಂತಾರ ಎನ್ನುವ ಟೈಟಲ್‌ ಸಜೆಸ್ಟ್‌ ಮಾಡಿದ್ರು. 

ಕಾಂತಾರ ಎಂಬುದು ಯಕ್ಷಗಾನದಲ್ಲಿ ಬಳಸುವಂತಹ ಒಂದು ಪದ, ಕಾಂತಾರ ಎಂದ್ರೆ ಕಾಡು, ವನ ಅಂತ ಅರ್ಥ. ಆದ್ರೂ ಈ ಟೈಟಲ್‌ ಜನರಿಗೆ ಅರ್ಥ ಆಗುತ್ತೋ ಇಲ್ವೋ ಅಂತ ಹಿಂದಕ್ಕೆ ಇಟ್ಟಿದ್ರು. ಆಮೇಲೆ ರಕ್ಷಿತ್‌ ಶೆಟ್ಟಿ ಅವರು ಇದೊಂದು ಎಪಿಕ್‌ ಸ್ಟೋರಿ ತರ ಇದೆ ಇದಕ್ಕೆ ದಂತಕಥೆ ಅಂತ ಹೆಸರಿಡಲು ಸಜೆಸ್ಟ್‌ ಮಾಡಿದ್ರು. ಹೀಗೆ ರಿಷಬ್ ಶೆಟ್ಟಿ ಅವರು ಕುಳಿತು ಯೋಚನೆ ಮಾಡ್ಬೇಕಾದ್ರೆ ʼಕಾಂತಾರ, ಒಂದು ದಂತಕತೆʼ ಅಂತ ಅವರ ತಲೆಗೆ ಐಡಿಯಾ ಬಂತು. ಹೀಗೆ ಸಿನಿಮಾ ಟೈಟಲ್‌ ಹುಟ್ಟಿಕೊಂಡಿತು ಅಂತ ಸಪ್ತಮಿಗೌಡ ಅವರು ಸಿನಿಮಾ ಟೈಟಲ್‌ ಹುಟ್ಟಿದ ಬಗ್ಗೆ ಹೇಳಿದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News