ಕನ್ನಡಕ್ಕೆ ಬಂದ ತಮಿಳಿನ ಖ್ಯಾತ ಕಾಮಿಡಿ ಸ್ಟಾರ್ ಯೋಗಿ ಬಾಬುಗೆ ಕಿಚ್ಚ ಸುದೀಪ್ ಸಾಥ್!

Yogi Babu Movie: ತಮಿಳಿನ ಖ್ಯಾತ ಕಾಮಿಡಿ ನಟ ಯೋಗಿ ಬಾಬು ಮತ್ತೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದ ಯೋಗಿ ಬಾಬು ಎರಡನೇ ಬಾರಿ ಹೀರೋ ಆಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಯೋಗಿ ಬಾಬು ನಟನೆಯ 'ಬೋಟ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Written by - Savita M B | Last Updated : Dec 17, 2023, 12:13 PM IST
  • 'ಬೋಟ್' ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ.
  • ವಿಶೇಷ ಎಂದರೆ ಕನ್ನಡದಲ್ಲೂ ಸಿನಿಮಾ ತೆರೆಗೆ ಬರುತ್ತಿದ್ದು ಈ ಮೂಲಕ ಯೋಗಿ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿದ್ದಾರೆ.
  • ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಯೋಗಿ ಬಾಬು ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.
ಕನ್ನಡಕ್ಕೆ ಬಂದ ತಮಿಳಿನ ಖ್ಯಾತ ಕಾಮಿಡಿ ಸ್ಟಾರ್ ಯೋಗಿ ಬಾಬುಗೆ ಕಿಚ್ಚ ಸುದೀಪ್ ಸಾಥ್! title=

Boat: 'ಬೋಟ್' ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಕನ್ನಡದಲ್ಲೂ ಸಿನಿಮಾ ತೆರೆಗೆ ಬರುತ್ತಿದ್ದು ಈ ಮೂಲಕ ಯೋಗಿ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿದ್ದಾರೆ. ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಯೋಗಿ ಬಾಬು ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.

'ಬೋಟ್' ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿನಯ ಚಕ್ರವರ್ತಿ ಯೋಗಿ ಬಾಬು ಅಂಡ್ ಟೀಮ್ ಗೆ ಶುಭ ಹಾರೈಸಿದ್ದಾರೆ. ಬೋಟ್, ಚಿಂಬು ದೇವನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ಚಿಂಬು ದೇವನ್ ದಳಪತಿ ವಿಜಯ್ ನಟನೆಯ 'ಪುಲಿ' ಸಿನಿ‌ಮಾ ಸೇರಿದಂತೆ ಇನ್ನು ಕೆಲವು ಸೂಪರ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಯೋಗಿ ಬಾಬು ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ-ನಟ ಕಿಚ್ಚ ಸುದೀಪ್ ತಂದೆ-ತಾಯಿ ಯಾರು ಗೊತ್ತಾ? ಕರುನಾಡ ಮಾಣಿಕ್ಯನ ಅಪ್ಪ ಸ್ಯಾಂಡಲ್ವುಡ್’ನಲ್ಲಿ ಸಖತ್ ಫೇಮಸ್

ವಿಶೇಷ ಎಂದರೆ ಸಂಪೂರ್ಣ ಸಿನಿಮಾ ಸಮುದ್ರದಲ್ಲಿಯೇ ಚಿತ್ರೀಕರಣಗೊಂಡಿದೆ. ಜಪಾನ್, ಚೆನ್ನೈ ಮೇಲೆ ಬಾಂಬ್ ದಾಳಿ ಮಾಡಿದಾಗ ಹತ್ತು ಜನರು ಚಿಕ್ಕ ಬೋಟ್ ಏರಿ ಪರಾರಿಯಾಗುತ್ತಾರೆ. ಬೋಟ್ ನಲ್ಲಿ ಚಿಕ್ಕ ರಂಧ್ರವಾಗುತ್ತೆ. ಬಳಿಕ ಈ ಹತ್ತು ಜನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಸಮುದ್ರದಿಂದ ಹೇಗೆ ಭೂಮಿ ಸೇರುತ್ತಾರೆ ಎನ್ನುವುದೇ ಚಿತ್ರದ ತಿರುಳು.ಸದ್ಯ ರಿಲೀಸ್ ಆಗಿರುವ ಟೀಸರ್ ಗೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ನಿರೂಪಣೆ ಮಾಡಿರುವುದು ವಿಶೇಷ.

ಯೋಗಿ ಬಾಬು ಹಾಗೂ ಗೌರಿ ಜಿ ಕಿಶನ್ ಸೇರಿದಂತೆ ದೊಡ್ಡ ತಾರಬಳಗವೇ ಬೋಟ್ ಚಿತ್ರದಲ್ಲಿದೆ. ಘಿಬ್ರಾನ್ ಸಂಗೀತ ಸಂಯೋಜಿಸಿರುವ ಬೋಟ್ ಚಿತ್ರಕ್ಕೆ ಮಾದೇಶ್ ಮಾಣಿಕ್ಕಂ ಅವರ ಛಾಯಾಗ್ರಹಣವಿದೆ. ದಿನೇಶ್ ಅವರ ಸಂಕಲನ ಮತ್ತು ಟಿ ಸಂತಾನಂ ಅವರ ಕಲಾ ನಿರ್ದೇಶನವಿದೆ. ಈ ಚಿತ್ರವನ್ನು ಮಾಲಿ ಮತ್ತು ಮಾನ್ವಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ಪ್ರಭಾ ಪ್ರೇಮಕುಮಾರ್ ಅವರು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಎಲ್ಲವೂ ಅಂದುಕಂಡಂತೆ ಆದರೆ 'ಬೋಟ್'  ಸಿನಿಮಾ ಫೆಬ್ರವರಿಯಲ್ಲಿ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ-ವಿನಯ್, ನಮ್ರತಾ ಅಲ್ಲ… ಇವರಾಗ್ತಾರೆ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಎಂದ ಸ್ನೇಹಿತ್ ಗೌಡ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News