ನವದೆಹಲಿ: ಉದ್ಯಮಿ ಲಲಿತ್ ಮೋದಿ ಸುದೀರ್ಘ ಸಮಯದ ನಂತರ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆಗೆ ಯಾರ ಹೆಸರು ತಳುಕು ಹಾಕಿಕೊಂಡರೂ ಅದು ದೊಡ್ಡ ಸುದ್ದಿಯಾಗುತ್ತದೆ. ಸುಶ್ಮಿತಾ ಜೊತೆಗೆ ತಾವು ಡೇಟಿಂಗ್ ಮಾಡುತ್ತಿರುವಾಗಿ ಯಾವಾಗ ಲಲಿತ್ ಮೋದಿ ಹೇಳಿದರೋ ಅಂದಿನಿಂದ ಈ ಜೋಡಿಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.
ಲಲಿತ್ ಮತ್ತು ಸುಶ್ಮಿತಾ ಬಗ್ಗೆ ಅನೇಕರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಇವರಿಗೆ ಇದೆಲ್ಲಾ ಬೇಕಿತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಆದರೆ ಈ ಜೋಡಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಲೈಫ್ ಎಂಜಾಯ್ ಮಾಡುತ್ತಿದೆ. ಯಾರು ಏನೇ ಹೇಳಲಿ ಡೋಂಟ್ ಕೇರ್ ಅಂತಿದೆ ಈ ಜೋಡಿ. ಈ ಬಗ್ಗೆ ಸುಶ್ಮಿತಾ ಮೌನವಾಗಿದ್ದು, ತಮ್ಮ ಸಂಬಂಧದ ಬಗ್ಗೆ ಇದುವರೆಗೂ ಒಂದು ಮಾತು ಸಹ ಆಡಿಲ್ಲ. ಈ ನಡುವೆ ಲಲಿತ್ ಮೋದಿ ಬಗ್ಗೆ ಜನ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ವಿಶೇಷವಾಗಿ ಅವರ ವ್ಯಾಪಾರ, ನಿವ್ವಳ ಮೌಲ್ಯ ಮತ್ತು ಐಷಾರಾಮಿ ಜೀವನಶೈಲಿಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: Vikrant Rona: ರಾ ರಾ ರಕ್ಕಮ್ಮ ಹುಕ್ ಸ್ಟೆಪ್ ಹಿಂದಿನ ಮಾಸ್ಟರ್ ಇವರೇ ನೋಡಿ..
14 ಕೋಣೆಗಳ ಭವ್ಯ ಬಂಗಲೆಯಲ್ಲಿ ಲಲಿತ್ ಮೋದಿ
ಲಲಿತ್ ಮೋದಿ ವರ್ಷಗಳ ಹಿಂದೆ ಭಾರತದಿಂದ ಎಸ್ಕೇಪ್ ಆಗಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ, ಅದೂ ಸಹ ಬಹಳ ಉತ್ಸಾಹದಿಂದ. ವಿಶ್ವದ ಈ ದುಬಾರಿ ನಗರದಲ್ಲಿ ಲಲಿತ್ ಮೋದಿಯವರ 5 ಅಂತಸ್ತಿನ ಮಹಲಿದ್ದು, ಇದರಲ್ಲಿ 14 ಐಷಾರಾಮಿ ಕೊಠಡಿಗಳಿವೆ. ವರದಿಗಳ ಪ್ರಕಾರ ಈ ಬಂಗಲೆಯಂತಹ ಮನೆಯಲ್ಲಿ 2 ಅತಿಥಿ ಕೊಠಡಿಗಳು, 4 ಸ್ವಾಗತ ಕೊಠಡಿಗಳು, 7 ಸ್ನಾನಗೃಹಗಳು, 2 ಅಡಿಗೆಮನೆಗಳು ಸೇರಿದಂತೆ 14 ಕೊಠಡಿಗಳಿವೆ. ಒಟ್ಟು 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಬಂಗಲೆಯಲ್ಲಿ ಲಲಿತ್ ಮೋದಿ ಅವರು ಕುಟುಂಬ ಸಮೇತ ವಾಸಿಸುತ್ತಿದ್ದಾರಂತೆ. ಲಲಿತ್ ಮೋದಿ ಈ ಮನೆ ತೆಗೆದುಕೊಳ್ಳುವ ಮೊದಲು ಈ ಮನೆಯ ಬಾಡಿಗೆಯೇ ತಿಂಗಳಿಗೆ 12 ಲಕ್ಷ ರೂ. ಇತ್ತಂತೆ.
ಐಷಾರಾಮಿ ಕಾರುಗಳ ಸಂಗ್ರಹ
ಲಲಿತ್ ಮೋದಿ ಬಳಿ 8 ಐಷಾರಾಮಿ ಕಾರುಗಳಿವೆ. ಇವುಗಳ ಬೆಲೆ ಕೇಳಿದ್ರೆ ನೀವು ಹೌಹಾರಿ ಹೋಗುತ್ತೀರಿ. ಫೆರಾರಿ, ಬಿಎಂಡಬ್ಲ್ಯು ಸೇರಿದಂತೆ ಹಲವಾರು ಐಷಾರಾಮಿ ಕಾರುಗಳಿಗೆ ಲಲಿತ್ ಮೋದಿ ಮಾಲಕರಾಗಿದ್ದಾರೆ. ಅವರ ಪ್ರತಿ ಕಾರು 3 ರಿಂದ 4 ಕೋಟಿ ರೂ. ಬೆಲೆ ಬಾಳುತ್ತವಂತೆ.
ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..?
ಲಲಿತ್ ಮೋದಿ ನಿವ್ವಳ ಮೌಲ್ಯ
ಲಲಿತ್ ಮೋದಿಯವರ ಸಾಮ್ರಾಜ್ಯ ಸುಮಾರು 12 ಸಾವಿರ ಕೋಟಿ ರೂ. ಹೊಂದಿದೆಯಂತೆ. ಮಾಧ್ಯಮಗಳ ವರದಿ ಪ್ರಕಾರ ವಿವಿಧ ರೀತಿಯ ವ್ಯವಹಾರ ನಡೆಸುತ್ತಿರುವ ಲಲಿತ್ ಮೋದಿ ಅವರ ಒಟ್ಟು ಆಸ್ತಿ 4.5 ಸಾವಿರ ಕೋಟಿಗೂ ಹೆಚ್ಚು ಇದೆಯಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.