ಡಿಸೆಂಬರ್ 30ಕ್ಕೆ ಬರ್ತಿದೆ ಪದವಿ ಪೂರ್ವ ಎಕ್ಸಾಂ!

Padavi Poorva Teaser: ಕಾಲೇಜು ನಾವ್ ಮಾಡಿಕೊಂಡ ಲವ್ವು, ಡವ್ವು ಅವಾಂತರಗಳನ್ನ, ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹೇಳೋ ಕಥೆಯೇ ಪದವಿ ಪೂರ್ವ. ಅದರ ಟೀಸರ್ ನಲ್ಲೇ ಒಂದು ಮಜಾ ಇದೆ.

Written by - YASHODHA POOJARI | Edited by - Yashaswini V | Last Updated : Dec 7, 2022, 09:08 AM IST
  • ನಿಮ್ಮ ಪಿಯು ದಿನಗಳನ್ನ ನೆನಪಿಸೋ ಪದವಿ ಪೂರ್ವ ಸಿನಿಮಾದ ಟೀಸರ್ ರಿಲೀಸ್ ಅಗಿದೆ.
  • ಭಟ್ರು ಬೆಲ್ ಹೊಡೆದು ಹೇಳೋಕೆ ಹೊರಟಿರೋ ಪೀಪಿ ನವೀನ ಹಾಗೂ ನಿತ್ಯಾ ಲವ್ ಸ್ಟೋರಿ ಈ ಕಾಲದಲ್ಲ 90ರ ದಶಕದ್ದು.
  • ಕಾಲೇಜು ನಾವ್ ಮಾಡಿಕೊಂಡ ಲವ್ವು, ಡವ್ವು ಅವಾಂತರಗಳನ್ನ, ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹೇಳೋ ಕಥೆಯೇ ಪದವಿ ಪೂರ್ವ.
ಡಿಸೆಂಬರ್ 30ಕ್ಕೆ ಬರ್ತಿದೆ ಪದವಿ ಪೂರ್ವ ಎಕ್ಸಾಂ! title=
Padavi Poorva Teaser

Padavi Poorva Teaser: ಪದವಿ ಪೂರ್ವ ಟೀಸರ್ ರಿಲೀಸ್ ಆಗಿದ್ದು ನಮ್ಮ ಕಾಲೇಜು ದಿನಗಳನ್ನ ನೆನಪು ಮಾಡುತ್ತಿದೆ. ಡಿ.30 ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಪದವಿ ಪೂರ್ವ ನೆನಪುಗಳ ಜೊತೆ ಟೀಸರ್ ರಿಲೀಸ್ ಮಾಡಿದ ನವರಸನಾಯಕ ಜಗ್ಗೇಶ್ ಒಂದಷ್ಟು ಇಂಟ್ರಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಜಗ್ಗೇಶ್  ತಮ್ಮ ಟೀನೇಜ್ ದಿನಗಳನ್ನು ನೆನಸಿಕೊಂಡು ರಿಲೀಸ್ ಮಾಡಿದ ಪದವಿ ಪೂರ್ವ ಟೀಸರ್  ಇದೀಗ ಸಖತ್ ಸೌಂಡ್ ಮಾಡುತ್ತಿದೆ.

ಭಟ್ಟರ ಆಶೀರ್ವಾದ, ಜಗ್ಗೇಶ್ ಪಂಚ್ ಜೊತೆ ಬಂತು ಪದವಿ ಪೂರ್ವ ಟೀಸರ್ ನೋಡಿ ಸಿನಿಮಾ ನೋಡಲು ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. ಟೀಸರ್ ಬಂತು.. ಡಿ.30ರಿಂದಲೇ ಪದವಿ ಪೂರ್ವ ಪರೀಕ್ಷೆ ಶುರು ಕೂಡ ಆಗುತ್ತೆ. ಭಟ್ಟರು ಕಾಸು ಹಾಕಿರೋ ಪದವಿ ಪೂರ್ವದಲ್ಲಿ ಏನಿದೆ ನೋಡಿ..

ಇದನ್ನೂ ಓದಿ- Dhruva Sarja : ಅಭಿಮಾನಿಯ ಮನೆಗೆ ಬಂದ ಧ್ರುವ ಸರ್ಜಾ.. ಸರಳತೆಗೆ ಮಾರು ಹೋದ ಫ್ಯಾನ್ಸ್‌

ನಿತ್ಯ' ನೆನಪಾಗೋ 'ನವೀನ' ಪಿಯು ಲವ್ ಸ್ಟೋರಿ!
ನಿಮ್ಮ ಪಿಯು ದಿನಗಳನ್ನ ನೆನಪಿಸೋ ಪದವಿ ಪೂರ್ವ ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಭಟ್ರು ಬೆಲ್ ಹೊಡೆದು ಹೇಳೋಕೆ ಹೊರಟಿರೋ ಪೀಪಿ ನವೀನ ಹಾಗೂ ನಿತ್ಯಾ ಲವ್ ಸ್ಟೋರಿ ಈ ಕಾಲದಲ್ಲ 90ರ ದಶಕದ್ದು. ಕಾಲೇಜು ನಾವ್ ಮಾಡಿಕೊಂಡ ಲವ್ವು, ಡವ್ವು ಅವಾಂತರಗಳನ್ನ, ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹೇಳೋ ಕಥೆಯೇ ಪದವಿ ಪೂರ್ವ. ಅದರ ಟೀಸರ್ ನಲ್ಲೇ ಒಂದು ಮಜಾ ಇದೆ. ಆ ಮಜಾ ಟೀಸರ್ ಈಗ ಲಹರಿ ಮ್ಯೂಸಿಕ್ ನ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಡಿಜಿಟಲ್ ದುನಿಯಾದಿಂದ ವಾಪಸ್ ಅನಲಾಗ್ ಕಾಲಕ್ಕೆ ಕರ್ಕೊಂಡು ಹೋಗ್ತಿರೋ ಸಿನಿಮಾ ಇದೇ ಡಿಸೆಂಬರ್ 30ಕ್ಕೆ ತೆರೆಗೆ ಬರ್ತಾ ಇದೆ.

ಇದನ್ನೂ ಓದಿ- Janhvi Kapoor: ಗುಂಡಿನ ಮತ್ತಲ್ಲಿದ್ರಾ ಜಾನ್ವಿ? ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ!

ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರೋ ಸಿನಿಮಾಗೆ  ಹರಿಪ್ರಸಾದ್ ಜಯಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಜೊತೆಗೆ ದೊಡ್ಡ ಯಂಗೇಜ್ ಹುಡುಗರ ಗ್ಯಾಂಗ್ ತುಂಬಿರೋ ಸ್ಟಾರ್ ಕಾಸ್ಟ್ ಸಿನಿಮಾಕ್ಕಿದೆ. ಇವರ ಜೊತೆಗೆ ಅದಿತಿ ಪ್ರಭುದೇವಾ, ದಿವ್ಯಾ ಉರುಡುಗ, ನಯನ ವಿಶೇಷ ಪಾತ್ರ ಹಾಗೂ ರಂಗಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಪೋಷಕ ನಟರ, ಕಾಮಿಡಿ ಕಿಲಾಡಿಗಳ ಮೇಳವೂ ಇದೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಾಳೆಯಿಂದಲೇ ಚಿತ್ರತಂಡ ಸಿನಿಮಾ ಪ್ರಚಾರದ ಸಲುವಾಗಿ ರಾಜ್ಯದ ಮೂಲೆ ಮೂಲೆಯ ಕಾಲೇಜುಗಳಿಗೆ ತೆರಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News