Pushpa 2: ಈ ದಿನದಂದು ಭಾರತ, ರಷ್ಯಾದಲ್ಲಿ ಪುಷ್ಪ 2 ರಿಲೀಸ್‌!

Pushpa 2 Rlease Date : 'ಪುಷ್ಪ: ದಿ ರೈಸ್' ಬಳಿಕ ಜನರು ಪುಷ್ಟ 2 ಬಿಡುಗಡೆಗೆ ಕಾದು ಕುಳಿತಿದ್ದರು. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪುಷ್ಪ 2 ಕೂಡ ಒಂದು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಎರಡನೇ ಭಾಗ ರಿಲೀಸ್‌ಗೆ ಸಿದ್ಧವಾಗಿದೆ. 

Written by - Chetana Devarmani | Last Updated : Dec 4, 2022, 03:11 PM IST
  • ಪುಷ್ಟ 2 ಬಿಡುಗಡೆಗೆ ಕಾದು ಕುಳಿತ ಜನರು
  • ಬಹು ನಿರೀಕ್ಷಿತ ಚಿತ್ರಗಳಲ್ಲಿ ಪುಷ್ಪ 2 ಕೂಡ ಒಂದು
  • ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2
Pushpa 2: ಈ ದಿನದಂದು ಭಾರತ, ರಷ್ಯಾದಲ್ಲಿ ಪುಷ್ಪ 2 ರಿಲೀಸ್‌! title=
ಪುಷ್ಟ 2

Pushpa 2 Rlease Date : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಇದೀಗ ಪುಷ್ಪ 2 ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪುಷ್ಪ 2 ಕೂಡ ಒಂದು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ತಮ್ಮ ಅಭಿನಯದಿಂದ ನೋಡುಗರ ಮನಸೆಳೆದಿದ್ದರು. ಪುಷ್ಪಾ: ದಿ ರೈಸ್ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತ್ತು. ಇದರ ಮುಂದಿನ ಭಾಗವೇ ಪುಷ್ಪ 2. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ನಿಜವಾಗಿಯೂ ಜನರ ಹೃದಯ ಮತ್ತು ಮನಸ್ಸನ್ನು ಸೆಳೆದಿದೆ. ಇವರಿಬ್ಬರನ್ನು ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಇದನ್ನೂ ಓದಿ : "ವಿಷಕಾರಿ ಪುರುಷತ್ವ ಪ್ರದರ್ಶನ" : 'ಕಾಂತಾರ'ದ ಬಗ್ಗೆ ಹಿಂದಿ ನಿರ್ಮಾಪಕ ಅಪಸ್ವರ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪುಷ್ಪ 2 ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಪುಷ್ಪ 2 (ಪುಷ್ಪಾ ದಿ ರೂಲ್) ಭಾರತ ಮತ್ತು ರಷ್ಯಾದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಪುಷ್ಪ: ದಿ ರೂಲ್‌ನಲ್ಲಿ ಅಲ್ಲು ಅರ್ಜುನ್ ಪಾತ್ರ ಮತ್ತು ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದ ನಡುವೆ ಸಾಕಷ್ಟು ಮುಖಾಮುಖಿಯಾಗಲಿದೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. 

ಪುಷ್ಪಾ: ದಿ ರೈಸ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಹಾಡುಗಳಿಂದ, ನಟನೆ, ನಿರ್ದೇಶನದವರೆಗೆ ಎಲ್ಲವೂ ಸಿನಿ ಪ್ರೇಕ್ಷಕರ ಮನಗೆದ್ದಿತ್ತು. ಪುಷ್ಪ 2 ಭಾರತ ಮತ್ತು ರಷ್ಯಾದಲ್ಲಿ ಒಂದೇ ದಿನ ಬಿಡುಗಡೆಯಾಗಲಿದೆ. ಪುಷ್ಪ 2 ಭಾರತ ಮತ್ತು ರಷ್ಯಾದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ನಿರ್ಮಾಪಕ ವೈ ರವಿಶಂಕರ್ ಖಚಿತಪಡಿಸಿದ್ದಾರೆ. ಮುಂದಿನ ವರ್ಷ ಪುಷ್ಪಾ 2 ಸಿನಿಮಾ ಎಲ್ಲೆಡೆ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : ʼಬಿಂದಾಸ್‌ʼ ಬೆಡಗಿಯ ಮದುವೆ ಸಂಭ್ರಮ : ನಾಳೆ ರಾಜಸ್ಥಾನ ಕೋಟೆಯಲ್ಲಿ ಹಸ್ಸಿಕಾ ಮದುವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News