2023ರ ಪ್ಲಾನ್‌ ಬುಕ್‌ ರಿಲೀಸ್‌ ಮಾಡಿದ ಸಚಿನ್‌ ಪುತ್ರಿ : ಅದರ ಬೆಲೆ ಎಷ್ಟು ಗೊತ್ತಾ..!

ಕ್ರಿಕೆಟ್‌ ದೇವರು ಸಚಿನ್‌ ತೆಂಡಲ್ಕೂರ್‌ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಅಪ್ಪನಂತೆ ಮಗಳು ಸಹ ಫುಲ್‌ ಫೇಮಸ್‌. ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಾರಾ ಇದೀಗ ಹೊಸ ಪ್ಲಾನ್‌ ಬುಕ್‌ ಒಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದಾರೆ.

Written by - Krishna N K | Last Updated : Dec 20, 2022, 03:27 PM IST
  • ಸಚಿನ್‌ ತೆಂಡಲ್ಕೂರ್‌ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಸಾರಾ.
  • ಸಾರಾ ಇದೀಗ ಹೊಸ ಪ್ಲಾನ್‌ ಬುಕ್‌ ಒಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದಾರೆ.
2023ರ ಪ್ಲಾನ್‌ ಬುಕ್‌ ರಿಲೀಸ್‌ ಮಾಡಿದ ಸಚಿನ್‌ ಪುತ್ರಿ : ಅದರ ಬೆಲೆ ಎಷ್ಟು ಗೊತ್ತಾ..! title=

Sara Tendulkar : ಕ್ರಿಕೆಟ್‌ ದೇವರು ಸಚಿನ್‌ ತೆಂಡಲ್ಕೂರ್‌ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಅಪ್ಪನಂತೆ ಮಗಳು ಸಹ ಫುಲ್‌ ಫೇಮಸ್‌. ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಾರಾ ಇದೀಗ ಹೊಸ ಪ್ಲಾನ್‌ ಬುಕ್‌ ಒಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದಾರೆ.

ಹೌದು.. ಸ್ಟಾರ್‌ ಮಕ್ಕಳು ಏನೇ ಮಾಡಿದ್ರು ಅದು ದೊಡ್ಡ ಸುದ್ದಿನೇ ಆಗುತ್ತೆ. ಇದೀಗ ಸಾರಾ ಹೊಸ ಸಾಹಸಕ್ಕೆ ಕೈ ಹಾಕಿದ್ದಾಳೆ. ಅವರು ತಮ್ಮದೆ ಹೆಸರಿನ 2023 ಪ್ಲಾನರ್‌ ಬುಕ್‌ನ್ನು ರಿಲೀಸ್‌ ಮಾಡಿದ್ದಾರೆ. ಈ ಕುರಿತು ತಮ್ಮ ಅಭಿಮಾನಿಗಳಿಗೆ ತಿಳಿಸುವ ಸಣ್ಣ ವೀಡಿಯೊವನ್ನು ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ.

ಇದನ್ನೂ ಓದಿ: ಡಿ.23 ಕ್ಕೆ ಬಹುನಿರೀಕ್ಷಿತ ಸೋನು ಸೂದ್‌ ಕನ್ನಡ ಸಿನಿಮಾ ʼಶ್ರೀಮಂತʼ ರಿಲೀಸ್‌..!

ವಿಡಿಯೋ ಪ್ರಾರಂಭದಲ್ಲಿ ಕಸ್ಟಮೈಸ್ ಮಾಡಿದ ಸಾರಾ ಪ್ಲಾನರ್ ಬುಕ್‌ ನೋಡಿದ ಮಂದಿಗೆ ಅದರ ಬೆಲೆ ಶಾಕ್‌ ನೀಡಿದೆ. ಆ ಬುಕ್‌ನ ಬೆಲೆ ರೂ. 2, 500 ಮಾತ್ರ. ಇನ್ನು ಸಾರಾ ವಿಡಿಯೋಗೆ ಕಾಮೆಂಟ್‌ ಮಾಡಿರುವ ನೆಟ್ಟಿಗರು ಇಂತಹ ಬುಕ್‌ನ್ನು ನೀವು ಸ್ಟೇಷನರಿಗಳಲ್ಲಿ ಕೇವಲ 150ಕ್ಕೆ ಪಡೆಯಬಹುದು ಎಂದಿದ್ದಾರೆ. ಅಲ್ಲದೆ, ಇನ್ನು ಕೆಲವರು 250 ಇಂತಹ ಬುಕ್‌ ಸಿಗುತ್ತವೆ ಅಂತ ಹಾಸ್ಯ ಮಾಡಿದ್ದಾರೆ. ಅಲ್ಲದೆ, ಕೆಲವರು ಬುಕ್‌ ಖರೀದಿ ಮಾಡುವುದಾಗಿ ತಿಳಿಸಿದ್ದಾರೆ.

ಸಾರಾ ತೆಂಡೂಲ್ಕರ್ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಆಕೆ ಮಾಡೆಲ್ ಕೂಡ ಹೌದು. ಸಾರಾಗೆ ಬಾಲಿವುಡ್ ಡೈರೆಕ್ಟರ್, ನಿರ್ಮಾಪಕರಿಂದ ಸಾಕಷ್ಟು ಆಫರ್‌ಗಳಿವೆ. ಆದ್ರೆ ಅವರು ಸಮಯ ಬಂದಾಗ ನೋಡೋಣ ಅಂತ ಸುಮ್ಮನಾಗಿದ್ದಾರೆ. ಅಲ್ಲದೆ, ಸಾರಾ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ನೆಟ್ಟಿಗರು ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News