ಸ್ಟಾರ್ ಹೀರೋ ಜೊತೆ ಲವ್‌.. ಕೊರಿಯೋಗ್ರಾಫರ್ ಜೊತೆ ಡೇಟಿಂಗ್.. ಕೊನೆಗೆ ಡೈರೆಕ್ಟರ್‌ನನ್ನು ಮದುವೆಯಾಗಿ ತಾಯಿಯಾದ ನಟಿ..!

Nayanthara love stories : ಈ ಸೌತ್‌ ಸ್ಟಾರ್ ಹೀರೋಯಿನ್ ಮೂವರು ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿದ್ದರು.. ಚಿತ್ರರಂಗದಲ್ಲಿ ಪ್ರೀತಿ ಮತ್ತು ಬ್ರೇಕ್ಅಪ್ ಸಾಮಾನ್ಯ ಅಲ್ವಾ. ಎಷ್ಟು ಬೇಗ ಲವ್‌ ಮಾಡ್ತಾರೋ.. ಅಷ್ಟೇ ಬೇಗ ದೂರ ಹೊಗ್ತಾರೆ.. ಈ ಸ್ಟಾರ್ ನಟಿ ಒಬ್ಬರು ಒಂದೇ ಬಾರಿಗೆ ಮೂವರನ್ನು ಪ್ರೀತಿಸಿದ್ದರು.. ಕೊನೆಗೆ ಡೈರೆಕ್ಟರ್‌ ಜೊತೆ ಮದುವೆಯಾಗಿ ತಾಯಿಯಾಗಿದ್ದಾರೆ.. ಯಾರದು..? ಬನ್ನಿ ನೋಡೋಣ..

Written by - Krishna N K | Last Updated : Jul 10, 2024, 08:29 PM IST
    • ಈ ಹೀರೋಯಿನ್ ಮೂವರು ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿದ್ದರು
    • ಒಬ್ಬರು ಸ್ಟಾರ್ ಹೀರೋ, ಮತ್ತೊಬ್ಬರು ನೃತ್ಯ ನಿರ್ದೇಶಕರು,
    • ಕೊನೆಗೆ ಡೈರೆಕ್ಟರ್‌ ಜೊತೆ ಮದುವೆಯಾಗಿ ತಾಯಿಯಾಗಿದ್ದಾರೆ
ಸ್ಟಾರ್ ಹೀರೋ ಜೊತೆ ಲವ್‌.. ಕೊರಿಯೋಗ್ರಾಫರ್ ಜೊತೆ ಡೇಟಿಂಗ್.. ಕೊನೆಗೆ ಡೈರೆಕ್ಟರ್‌ನನ್ನು ಮದುವೆಯಾಗಿ ತಾಯಿಯಾದ ನಟಿ..! title=
actress Nayanthara

Nayanthara Vignesh Shivan love : ಸಿನಿಮಾ ಇಂಡಸ್ಟ್ರಿಯಲ್ಲಿ ಲವ್ ಮತ್ತು ಬ್ರೇಕ್ ಅಪ್ ಸಾಮಾನ್ಯವಾಗಿಬಿಟ್ಟಿದೆ. ಎಷ್ಟು ಬೇಗ ಲವ್‌, ಡೇಟಿಂಗ್‌ ಮಾಡ್ತಾರೋ.. ಅಷ್ಟೇ ಬೇಗ ಡಿವೋಸ್‌, ಬ್ರೇಕ್‌ ಅಪ್‌ ಮಾಡಿಕೊಳ್ಳುತ್ತಿದ್ದಾರೆ.. ಪ್ರತಿಯೊಂದು ಇಂಡಸ್ಟ್ರಿಯಲ್ಲಿಯೂ ಇಂತಹ ವಿಷಯಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಇತ್ತೀಚಿಗಂತು ಇಂತಹ ಸುದ್ದಿಗಳು ಹೆಚ್ಚಾಗಿವೆ..

ಸೌತ್‌ ಸ್ಟಾರ್ ಹೀರೋಯಿನ್ ಒಬ್ಬರು ಏಕಕಾಲಕ್ಕೆ ಮೂವರನ್ನು ಪ್ರೀತಿಸಿದ್ದರು. ಅವರಲ್ಲಿ ಒಬ್ಬರು ಸ್ಟಾರ್ ಹೀರೋ, ಮತ್ತೊಬ್ಬರು ನೃತ್ಯ ನಿರ್ದೇಶಕರು, ಮತ್ತೊಬ್ಬ ನಿರ್ದೇಶಕ. ಮೂವರನ್ನು ಪ್ರೀತಿಸಿದ ಚೆಲುವೆ... ಕೊನೆಗೆ ನಿರ್ದೇಶಕನನ್ನೇ ಮದುವೆಯಾಗಿ ಇದೀಗ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಇದನ್ನೂ ಓದಿ:ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...

ಅವರು ಬೇರೆ ಯಾರೂ ಅಲ್ಲ, ಲೇಡಿ ಸೂಪರ್ ಸ್ಟಾರ್ ನಯನತಾರಾ. ವಯಸ್ಸು ನಲವತ್ತು ಸಮೀಪಿಸುತ್ತಿದ್ದರೂ ಅದೇ ಗ್ಲಾಮರ್ ಅದೇ ಸ್ಟೈಲ್‌, ಸ್ಮೈಲ್‌ ಹೊಂದಿರುವ ನಾಯಕಿ, ಹೊಸ ಸುಂದರಿಯರ ಸೌಂದರ್ಯಕ್ಕೂ ಸವಾಲ್‌ ಹಾಕುತ್ತ ಇಂದಿಗೂ ತಮ್ಮ ಕ್ರೇಜ್‌ ಕಾಪಾಡಿಕೊಂಡು ಬಂದಿದ್ದಾರೆ. 

ಅದಕ್ಕಿಂತ ಮುಖ್ಯವಾಗಿ ಬಾಲಿವುಡ್ ನಾಯಕಿಯರಿಗೆ ಪೈಪೋಟಿ ನೀಡುತ್ತಿರುವ ಈಕೆ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿರುವ ನಟಿಯರಲ್ಲಿ ಒಬ್ಬರು. ಸುಮಾರು ಎರಡು ದಶಕಗಳ ಕಾಲ ಸಿನಿರಂಗದಲ್ಲಿ ಪ್ರಾಬಲ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ನಯನತಾರ.

ಇದನ್ನೂ ಓದಿ:ಮಕ್ಕಳನ್ನು ಮಾಡಿಕೊಳ್ಳುವ ವಿಚಾರ, ಪವಿತ್ರ - ನರೇಶ್ ಸಂಚಲನದ ನಿರ್ಧಾರ..! ಫ್ಯಾನ್ಸ್‌ ಶಾಕ್‌

ನಯನತಾರಾ ರಿಯಲ್ ಲೈಫ್ ರೀಲ್ ಲೈಫ್ ನಷ್ಟು ಸಕ್ಸಸ್ ಆಗಿಲ್ಲ. ಈ ಹಿಂದೆ ಸ್ಟಾರ್ ಹೀರೋ ಸಿಂಬು ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆಗ ತಮಿಳುನಾಡಿನಲ್ಲಿ ಈ ಜೋಡಿಯ ಹೆಸರು ಜನಪ್ರಿಯವಾಗಿತ್ತು. ಆದರೆ ಕಾರಣಾಂತರ ದಿಂದ ಬೇರ್ಪಟ್ಟರು. ಆ ಸಮಯದಲ್ಲಿ ನಯನತಾರಾ ಸ್ಟಾರ್ ಕೊರಿಯೋಗ್ರಾಫರ್ ಪ್ರಭುದೇವ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲಕಾಲ ಸಂಚಲನ ಮೂಡಿಸಿತ್ತು. ಮೇಲಾಗಿ ಈ ಇಬ್ಬರು ಮದುವೆಯಾಗಲು ರೆಡಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಆದರೆ ಪ್ರಭುದೇವ ಪತ್ನಿ ವಿಚ್ಛೇದನ ನೀಡಿಲ್ಲ.

ಇದರ ಸತ್ಯಾಸತ್ಯತೆ ಇಂದಿಗೂ ಯಾರಿಗೂ ತಿಳಿದಿಲ್ಲ. ಪ್ರಭುದೇವ ಮತ್ತು ನಯನತಾರ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಸಧ್ಯ ನಟಿ ಕಾಲಿವುಡ್ ಸ್ಟಾರ್ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ, ಈ ಜೊಡಿ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News