Vikram Thangalaan : ನಟ ವಿಕ್ರಮ್‌ ಬರ್ತ್‌ಡೇ.. ಪ್ಯಾನ್ಸ್‌ಗೆ ʼತಂಗಲಾನ್‌ʼ ಮೇಕಿಂಗ್‌ ಗಿಫ್ಟ್‌ ನೀಡಿದ ಚಿತ್ರತಂಡ

Vikram Thangalaan making video : ಕಾಲಿವುಡ್‌ ನಟ ಚಿಯಾನ್ ವಿಕ್ರಮ್ ಅವರಿಗೆ ಇಂದು 57 ನೇ ಹುಟ್ಟುಹಬ್ಬದ ಸಂಭ್ರಮ. ವಿಕ್ರಮ್‌ ಬರ್ತ್‌ಡೇ ನಿಮಿತ್ತ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ತಂಗಲಾನ್‌'ನ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. 

Written by - Krishna N K | Last Updated : Apr 17, 2023, 04:52 PM IST
  • ಇಂದು ನಟ ಚಿಯಾನ್‌ ವಿಕ್ರಮ್‌ ಅವರು ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
  • ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ತಂಗಲಾನ್‌'ನ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.
  • ಮೇಕಿಂಗ್‌ ವಿಡಿಯೋ ನೋಡಿದ್ರೆ, ವಿಕ್ರಮ್‌ ಎಷ್ಟು ಶ್ರಮವಹಿಸಿದ್ದಾರೆ ಎನ್ನುವುದು ತಿಳಿಯುತ್ತದೆ.
Vikram Thangalaan : ನಟ ವಿಕ್ರಮ್‌ ಬರ್ತ್‌ಡೇ.. ಪ್ಯಾನ್ಸ್‌ಗೆ ʼತಂಗಲಾನ್‌ʼ ಮೇಕಿಂಗ್‌ ಗಿಫ್ಟ್‌ ನೀಡಿದ ಚಿತ್ರತಂಡ title=

Vikram Thangalaan : ತಮಿಳು ನಟ ಚಿಯಾನ್ ವಿಕ್ರಮ್ ಅವರು ಇಂದು ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಕ್ರಮ್‌ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂಬರುವ ಚಿತ್ರ 'ತಂಗಲಾನ್‌' ಚಿತ್ರದ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದ ಮೇಕಿಂಗ್‌ ದೃಶ್ಯಗಳನ್ನು ನೋಡಿದ್ರೆ, ಈ ಸಿನಿಮಾ ವಿಕ್ರಮ್‌ ಎಷ್ಟು ಶ್ರಮವಹಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಅಲ್ಲದೆ, ಚಿತ್ರದ ಮೇಲೆ ಕುತೂಹಲ ಹೆಚ್ಚಿಸುತ್ತದೆ.

ನಿರ್ದೇಶಕ ಪಾ ರಂಜಿತ್ ಮತ್ತು ವಿಕ್ರಮ್‌ ನಿರ್ದೇಶನ ಮೊದಲ ಸಿನಿಮಾ ʼತಂಗಲಾನ್‌ʼ. ರಂಜಿತ್ ಸಿನಿಮಾದ ಹೊಸ ಪೋಸ್ಟರ್ ಮತ್ತು ವೀಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ʼನನ್ನ ತಂಗಲಾನ್‌, ಚಿಯಾನ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ತಂಗಲಾನ್‌ನ ಭವ್ಯವಾದ ಮೇಕಿಂಗ್ ದೃಶ್ಯ ವೀಡಿಯೊವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆʼ ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Nita Ambani: 5 ಲಕ್ಷದ ಹ್ಯಾಂಡ್‌ಬ್ಯಾಗ್‌, 100 ಕೋಟಿಯ ನೆಕ್ಲೇಸ್, ಕೋಟ್ಯಂತರ ಮೌಲ್ಯದ ಕಾರು.. ಇದು ನೀತಾ ಅಂಬಾನಿಯ ಐಷಾರಾಮಿ ಜೀವನ

ಮೇಕಿಂಗ್‌ ವೀಡಿಯೊದಲ್ಲಿ ವಿಕ್ರಮ್ ಪಾತ್ರದ ಒಂದು ನೋಟವನ್ನು ನೀಡುತ್ತದೆ. ಅಲ್ಲದೆ, ಅವರು ಪಾತ್ರಕ್ಕೆ ಹೇಗೆ ಸಿದ್ಧರಾದರು ಎನ್ನುವುದನ್ನ ತೋರಿಸಲಾಗಿದೆ. ವಿಕ್ರಮ್ ಈ ಸಿನಿಮಾದ ಪಾತ್ರಕ್ಕೆ ಹೇಗೆ ತಮ್ಮ ದೇಹವನ್ನು ರೂಪಾಂತರ ಮಾಡಿದ್ದಾರೆ ಎನ್ನುವುದು ತಂಗಲಾನ್‌ ಮೆಕಿಂಗ್‌ ವಿಡಿಯೋ ನೋಡಿದ್ರೆ ಅರ್ಥವಾಗುತ್ತದೆ. 

'ತಂಗಾಲನ್‌' ಚಿತ್ರದಲ್ಲಿ ಪಾರ್ವತಿ ತಿರುವೋತ್ ಮತ್ತು ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸಿದ್ದಾರೆ. ಲಾರಾ ಕ್ರಾಫ್ಟ್: ಟಾಂಬ್ ರೈಡರ್ ಖ್ಯಾತಿಯ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ನಿರ್ಧರಿಸಿದ್ದಾರೆ. ಪಶುಪತಿ, ಹರಿ ಕೃಷ್ಣನ್ ಅನ್ಬುದುರೈ, ಪ್ರೀತಿ ಕರಣ್ ಮತ್ತು ಮುತ್ತುಕುಮಾರ್ ಸೇರಿದಂತೆ ಮತ್ತಿತರು ಸಿನಿಮಾದಲ್ಲಿದ್ದಾರೆ. ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಹಿನ್ನೆಲೆಯ ತಂಗಲನ್ ತಮಿಳು, ಹಿಂದಿ, ತೆಲುಗು, ಮಲಯಾಳಂ, ಒಡಿಯಾ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : Dhoomam Movie : ಹೊಂಬಾಳೆ ನಿರ್ಮಾಣದ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ ರಿಲೀಸ್‌..!

ಈ ಆಕ್ಷನ್ ಎಂಟರ್ಟೈನರ್ ಚಿತ್ರವನ್ನು ಸ್ಟುಡಿಯೋ ಗ್ರೀನ್ - ಕೆ.ಇ. ಜ್ಞಾನವೇಲ್ ರಾಜ ಪಾ.ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಭಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ಚಿತ್ರೀಕರಣದ ಅಂತಿಮ ಹಂತದಲ್ಲಿದೆ. ವಿಕ್ರಮ್ ಪ್ರಸ್ತುತ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆದಿತಾ ಕರಿಕಾಳನ್ (10 ನೇ ಶತಮಾನದಲ್ಲಿ ಚೋಳ ಚಕ್ರವರ್ತಿ) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News