ಈ ಬೆಡಗಿಯೇ ನೋಡಿ 'ದಿ ಮೋಸ್ಟ್ ಸೆಕ್ಸಿಯಸ್ಟ್ ವೆಜಿಟೇರಿಯನ್'

ಶಾಕಾಹಾರಿ ಆಗಿರುವುದು ನನ್ನ ಪಾಲಿಗೆ ಜೀವನ ಜೀವಿಸುವ ಶೈಲಿ ಎಂದು ಹೇಳುವ ಮಾನುಷಿ, ನನ್ನ ತಂದೆ-ತಾಯಿ ಕೂಡ ಶಾಕಾಹಾರಿಯಾಗಿದ್ದಾರೆ ಎನ್ನುತ್ತಾಳೆ. ಆಹಾರಶೈಲಿಯ ಈ ವಿಕಲ್ಪದ ಆಯ್ಕೆಯ ಬಳಿಕ ನನ್ನ ಜೀವನದಲ್ಲಿ ಯಾವುದೇ ಸಂಗತಿಯ ಕೊರತೆ ಇದೇ ಎಂದು ನನಗೆ ಅನಿಸುವುದಿಲ್ಲ. 

Written by - Nitin Tabib | Last Updated : Dec 24, 2019, 05:12 PM IST
ಈ ಬೆಡಗಿಯೇ ನೋಡಿ 'ದಿ ಮೋಸ್ಟ್ ಸೆಕ್ಸಿಯಸ್ಟ್ ವೆಜಿಟೇರಿಯನ್'  title=

ನವದೆಹಲಿ: ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟ ಅಕ್ಷಯ ಕುಮಾರ್ ಅವರ ಮುಂಬರುವ ಚಿತ್ರ 'ಪೃಥ್ವಿರಾಜ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮಾನುಷಿ ಸಂಯೋಗಿತಾ ಅವರ ಭೂಮಿಕೆಯಲ್ಲಿ ಕಂಡುಬರುತ್ತಿದ್ದಾರೆ. ತಮ್ಮ ಫಿಟ್ನೆಸ್ ಹಾಗೂ ಲುಕ್ಸ್ ನಿಂದಲೂ ಕೂಡ ಮಾನುಷಿ ಚರ್ಚೆಯಲ್ಲಿರುತ್ತಾರೆ. ಪ್ರಾಣಿಗಳ ಕುರಿತು ಕಾರ್ಯನಿರ್ವಹಿಸುವ ಸಂಸ್ಥೆ 'PETA' ಮಾನುಷಿ ಅವರನ್ನು 'ಮೋಸ್ಟ್ ಸೆಕ್ಸಿಯಸ್ಟ್ ವೆಜಿಟೇರಿಯನ್' ಬಿರುದು ನೀಡಿ ಗೌರವಿಸಿದೆ. ಎರಡು ವರ್ಷಗಳ ಹಿಂದೆಯ ಮಿಸ್ ವರ್ಲ್ಡ್ ಪಟ್ಟ ಅಲಂಕರಿಸಿರುವ ಮಾನುಷಿ ಮೊದಲಿನಿಂದಲೂ ಶಾಕಾಹಾರಿಯಾಗಿದ್ದಾರೆ.

ಶಾಕಾಹಾರಿಯಾಗಿರುವುದು ನನ್ನ ಪಾಲಿಗೆ ನನ್ನ ಜೀವನ ಜೀವಿಸುವ ಪದ್ಧತಿಯಾಗಿದೆ ಎನ್ನುವ ಮಾನುಷಿ, ನನ್ನ ತಂದೆ-ತಾಯಿ ಕೂಡ ಶಾಕಾಹಾರಿಯಾಗಿದ್ದಾರೆ ಎನ್ನುತ್ತಾರೆ . ನಾನು ಮೊದಲಿನಿಂದಲೂ ಶಾಕಾಹಾರಿಯಾಗಿದ್ದು, ನನಗೆ ನನ್ನ ಆಹಾರದಲ್ಲಿ ಯಾವುದೇ ರೀತಿಯ ಬದಲಾವಣೆ ತರಬೇಕು ಎಂಬುದು ಮೊದಲಿನಿಂದಲೂ ಅನಿಸಿಲ್ಲ ಎನ್ನುತ್ತಾರೆ.

ಶಾಕಾಹಾರಿಯಾಗಿರುವುದರ ಅನೇಕ ಲಾಭಗಳಿವೆ ಎನ್ನುತ್ತಾರೆ ಮಾನುಷಿ. ಇದರಿಂದ ನೀವು ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಬಹುದು. ಅಷ್ಟೇ ಅಲ್ಲ ಶಾಕಾಹಾರಿ ಭೋಜನ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಕೊಲೆಸ್ಟ್ರಾಲ್ ಹಾಗೂ ಬ್ಲಡ್ ಪ್ರೆಶರ್ ನಿಂದ ಕೂಡ ಇದು ಮುಕ್ತಿ ನೀಡುತ್ತದೆ. ನಾನೋರ್ವ ಶಾಂತಿಪ್ರೀಯ ವ್ಯಕ್ತಿ ಎನ್ನುವ ಮಾನುಷಿ, ಶಾಕಾಹಾರಿ ಪ್ರಾಣಿಯಾಗಿರುವುದು ನನಗೆ ಖುಷಿ ನೀಡುತ್ತದೆ ಎನ್ನುತ್ತಾರೆ.

ಯಶ್ ರಾಜ್ ಚಿತ್ರದಿಂದ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಮಾನುಷಿ ಅವರನ್ನು ಹೊರತುಪಡಿಸಿ 'ಪೃಥ್ವಿರಾಜ್' ಚಿತ್ರದಲ್ಲಿ ಅಕ್ಷಯ ಕುಮಾರ್ ಹಾಗೂ ರಾಣಿ ಮುಖರ್ಜಿ ಕೂಡ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರದ ಚಿತ್ರೀಕರಣ ಆರಂಭವಾಗುವುದಕ್ಕಿಂತಲೂ ಮೊದಲು ಚಿತ್ರದ ಸೆಟ್ ಮೇಲೆ ಹೋಮ-ಹವನ ಕೂಡ ನಡೆಸಲಾಗಿದ್ದು, ಅದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿತ್ತು. ಈ ಚಿತ್ರದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರದ ಕುರಿತು ಸಂದರ್ಶನವೊಂದರಲ್ಲಿ ಸಂತಸ ವ್ಯಕ್ತ ಪಡಿಸಿದ್ದ ಮನುಷಿ, ತಾವು ಮಿಸ್ ವರ್ಲ್ಡ್ ಕಿರೀಟ ಧರಿಸಿದ ದಿನವೇ 'ಪೃಥ್ವಿರಾಜ್' ಚಿತ್ರಕ್ಕಾಗಿ ಮೊದಲ ಶಾಟ್ ನೀಡಿರುವುದಾಗಿ ಹೇಳಿದ್ದರು ಮತ್ತು ನವೆಂಬರ್ 18 ನನ್ನ ಪಾಲಿಗೆ ವಿಶೇಷ ದಿನವಾಗಿದೆ ಎಂದು ಮಾನುಷಿ ಹೇಳುತ್ತಾರೆ.

Trending News