2020ರಲ್ಲಿ ಈಕೆಯ ಜೊತೆಗೆ ಹಸೆಮಣೆ ಏರುತ್ತಾರಂತೆ ವರುಣ್ ಧವನ್?

ಸದ್ಯ ತಮ್ಮ 'ಸ್ಟ್ರೀಟ್ ಡ್ಯಾನ್ಸರ್ 3D' ಚಿತ್ರದ ಕಾರಣ ಭಾರೀ ಸುದ್ದಿಯಲ್ಲಿರುವ ಬಾಲಿವುಡ್ ನಟ ವರುಣ್ ಧವನ್, ಇತ್ತೀಚ್ತೆಗೆ ತಮ್ಮ ಖಾಸಗಿ ಜೀವನದ ಕುರಿತೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ.  

Written by - Nitin Tabib | Last Updated : Dec 21, 2019, 11:59 AM IST
2020ರಲ್ಲಿ ಈಕೆಯ ಜೊತೆಗೆ ಹಸೆಮಣೆ ಏರುತ್ತಾರಂತೆ ವರುಣ್ ಧವನ್? title=

ನವದೆಹಲಿ:ಖ್ಯಾತ ಬಾಲಿವುಡ್ ನಟ ವರುಣ್ ಧವನ್ ತಮ್ಮ ಮುಂಬರುವ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3D' ಚಿತ್ರದ ಭಾರೀ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ರೆಮೋ ಡಿಸೋಜಾ ನಿರ್ದೇಶನದ ಈ ಚಿತ್ರದಲ್ಲಿ ವರುಣ್ ಧವನ್ ಜೊತೆ ಶೃದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಂಡುಬರಲಿದ್ದಾರೆ. ಸದ್ಯ ಈ ಚಿತ್ರದ ಬಿಡುಗಡೆಯ ಕಾರಣ ಸುದ್ದಿಯಲ್ಲಿರುವ ವರುಣ್ ಧವನ್, ಇನ್ನೊಂದೆಡೆ ತಮ್ಮ ಖಾಸಗಿ ಜೀವನದ ಕಾರಣವೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಸೃಷ್ಟಿಸುತ್ತಿದ್ದಾರೆ. ಹೌದು, ಮಾಧ್ಯಮಗಳ ವರದಿಗಳ ಪ್ರಕಾರ 2020ರಲ್ಲಿ ವರುಣ್ ಧವನ್ ತಮ್ಮ ದೀರ್ಘಕಾಲದ ಗರ್ಲ್ ಫ್ರೆಂಡ್ ನತಾಷಾ ದಲಾಲ್ ಜೊತೆ ಹಸೆಮಣೆ ಏರುವ ಸಾಧ್ಯತೆಯನ್ನು ವರ್ತಿಸಲಾಗಿದೆ.

ವರದಿಗಳ ಪ್ರಕಾರ ಮುಂದಿನ ವರ್ಷದ ಏಪ್ರಿಲ್ ಅಥವಾ ಮಾರ್ಚ್ ನಲ್ಲಿ ವರುಣ್ ಧವನ್ ಮತ್ತು ನತಾಷಾ ದಲಾಲ್ ವೈವಾಹಿಕ ಬಂಧನಕ್ಕೆ ಒಳಗಾಗಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ವರುಣ್ ಇಂತಹ ಯಾವುದೇ ಸಾಧ್ಯತೆಗಳನ್ನು ಅಲ್ಲಗಳೆದಿದ್ದು, ಆದಾಗ್ಯೂ ಕೂಡ 2020 ರಲ್ಲಿ ವರುಣ್ ತಮ್ಮ ದೀರ್ಘಕಾಲದ ಗೆಳತಿ ನತಾಷಾ ದಲಾಲ್ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹಲ್-ಚಲ್ ಸೃಷ್ಟಿಸುತ್ತಲೇ ಇದೇ. ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ ಮುಂದಿನ ವರ್ಷದ ಆರಂಭದಲ್ಲಿ ವರುಣ್ ಅವರ 'ಸ್ಟ್ರೀಟ್ ಡ್ಯಾನ್ಸರ್ 3D' ಬಿಡುಗಡೆಯಾಗುತ್ತಿದ್ದು, ನಂತರ ಅವರು 'ಕೂಲಿ ನಂಬರ್ 1' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವರುಣ್ ಅವರ 'ಸ್ಟ್ರೀಟ್ ಡ್ಯಾನ್ಸರ್ 3D' ಮುಂದಿನ ವರ್ಷ ಜನವರಿ 24ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. 'ABCD 2' ಬಿಡುಗಡೆಯ ನಂತರ ವರುಣ್ ಹಾಗೂ ಶೃದ್ಧಾ ಕಪೂರ್ ಒಟ್ಟಿಗೆ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ವರುಣ್-ಶೃದ್ಧಾ ಅವರ ಆನ್ ಸ್ಕ್ರೀನ್ ಕೆಮೆಸ್ಟ್ರಿಗೆ ಈಗಾಗಲೇ ಅಭಿಮಾನಿಗಳು ಸೈ ಎಂದಿದ್ದಾರೆ. ಇನ್ನೊಂದೆಡೆ ಈ ಚಿತ್ರದಲ್ಲಿ ಖ್ಯಾತ ಕೊರಿಯೋಗ್ರಾಫರ್ ಪ್ರಭುದೇವಾ ಕೂಡ ಒಂದು ಮಹತ್ವದ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Trending News