ಮಳೆಗಾಲದಲ್ಲಿ ಈ ಆಹಾರಗಳನ್ನು ತಿಂದರೆ ಅನಾರೋಗ್ಯ ಖಚಿತ!

ಮಳೆಗಾಲದಲ್ಲಿ ಯಾವ ಆಹಾರ ಪದಾರ್ಥಗಲಿಂದ ದೂರವಿದ್ದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನಿಸಿ!

Last Updated : Jul 14, 2018, 05:49 PM IST
ಮಳೆಗಾಲದಲ್ಲಿ ಈ ಆಹಾರಗಳನ್ನು ತಿಂದರೆ ಅನಾರೋಗ್ಯ ಖಚಿತ! title=

ನವದೆಹಲಿ: ದೇಶಾದ್ಯಂತ ಎಲ್ಲೆಡೆ ಸಾಕಷ್ಟು ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹ ಪರಿಸ್ಥತಿ ಭೀತಿ ಎದುರಾಗಿದೆ. ಒಂದೆಡೆ ಮಳೆ ಹನಿಗಳು ಕಾದ ಭೂಮಿಗೆ, ಮರಗಳಿಗೆ, ಮನಗಳಿಗೆ ತಂಪೆರೆಯುವುದು ನಿಜ. ಆದರೆ, ಅದೇ ಮಳೆಯಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಕೆಲವೊಂದು ಆಹಾರ ಪದಾರ್ಥಗಳ ಸೇವನೆಯೂ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಿದ್ದರೆ, ಮಳೆಗಾಲದಲ್ಲಿ ಯಾವ ಆಹಾರ ಪದಾರ್ಥಗಲಿಂದ ದೂರವಿದ್ದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನಿಸಿ!

ಮಳೆಗಾಲದಲ್ಲಿ ಮಾನವ ದೇಹದಲ್ಲಿ ಜೀರ್ಣಾಂಗವು ತುಂಬಾ ದುರ್ಬಲವಾಗಿರುತ್ತದೆ. ಜೀರ್ಣಾಂಗ ದುರ್ಬಲವಾಗಿದ್ದರೆ, ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಆಲೂಗಡ್ಡೆ, ಬೆಂಡೆಕಾಯಿ, ಹೂಕೋಸು ಸೇವನೆಯಿಂದ ದೂರವಿದ್ದರೆ ಒಳ್ಳೆಯದು.

ಮಳೆಗಾಲದಲ್ಲಿ ಹೆಚ್ಚಾಗಿ ಪಾಲಕ್ ಪಕೋಡ ಮತ್ತು ಪಾಲಾಕ್ ಸೊಪ್ಪಿನ ಕರಿದ ತಿನಿಸುಗಳನ್ನು ಹೆಚ್ಚಾಗಿ ತಯಾರಿಸುತ್ತಾರೆ. ಅಲ್ಲದೆ, ಮಳೆಗಾಲದಲ್ಲಿ ಕೋಸು ಕೂಡ ಬಹಳ ಅಗ್ಗವಾಗಿ ಸಿಗುತ್ತದೆ. ಆದರೆ, ಮಳೆಗಾಲದಲ್ಲಿ ಎಲೆಗಳುಳ್ಳ ತರಕಾರಿ ಮತ್ತು ಸೊಪ್ಪುಗಳಲ್ಲಿ ಕೀಟಾಣುಗಳು ಹೆಚ್ಚಾಗಿರುತ್ತವೆ. ಅದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. 

ಮಳೆಗಾಲದಲ್ಲಿ ಅಣಬೆಗಳು ಹೆಚ್ಚು ಪ್ರಸಿದ್ಧಿ. ಈ ಋತುವಿನಲ್ಲಿ ಅಣಬೆ ಅಗ್ಗವಾಗಿಯೂ ಸಿಗುತ್ತದೆ. ಹಾಗಾಗಿ ಜನರು ಅಣಬೆಯಿಂದ ಕೇವಲ ಪಲ್ಯವಷ್ಟೇ ಅಲ್ಲ, ಇತರ ಭಕ್ಷ್ಯಗಳನ್ನೂ ತಯಾರಿಸುತ್ತಾರೆ. ಆದರೆ ಅಣಬೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲಿ. ಇದರಿಂದ ಸೋಂಕು ತಗುಲುವ ಸಂಭವ ಹೆಚ್ಚಾಗಿರುತ್ತದೆ. 

ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೇಸಿಗೆಯಲ್ಲಿ ಸಲಾಡ್ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಆದರೆ ಮಳೆಗಾಲದಲ್ಲಿ ಸೌತೆಕಾಯಿಗೆ ಹುಳುಗಳು ಹತ್ತುವ ಸಾಧ್ಯತೆ ಹೆಚ್ಚು. ಹಾಗಾಗಿ ಸೋಂಕು ತಗುಲಿ ಶೀತ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಳೆಗಾಲದಲ್ಲಿ ಕೇವಲ ಮನೆಯಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಬಳಸದೇ ಇರುವುದಷ್ಟೇ ಅಲ್ಲ, ರಸ್ತೆ ಬದಿಯ ಕರಿದ ತಿಂಡಿಗಳು, ಜಂಕ್ ಫುಡ್'ಗಳನ್ನು ತಿನ್ನುವುದರಿಂದಲೂ ದೂರವಿದ್ದರೆ ಒಳಿತು.

Trending News