ಡಯಾಬಿಟಿಸ್ ರೋಗಿಗಳು ಬೆಲ್ಲ ತಿನ್ನಬಹುದೇ? ನಿಯಂತ್ರಣದಲ್ಲಿ ಇರುವುದೇ ಬ್ಲಡ್ ಶುಗರ್ ?

ಮಧುಮೇಹ ಇದ್ದಾಗ ಸಕ್ಕರೆ ಬದಲು ಬೆಲ್ಲ ಸೇವಿಸಬಹುದು ಎನ್ನುವ ಅಭಿಪ್ರಾಯ ಬಹುತೇಕರದ್ದು.  ಇದ್ಸರ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.   

Written by - Ranjitha R K | Last Updated : Sep 11, 2023, 09:26 AM IST
  • ಬೆಲ್ಲವು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ.
  • ಮಧುಮೇಹವಿದ್ದಾಗ ಬೆಲ್ಲ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ
  • ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ
ಡಯಾಬಿಟಿಸ್ ರೋಗಿಗಳು ಬೆಲ್ಲ ತಿನ್ನಬಹುದೇ?  ನಿಯಂತ್ರಣದಲ್ಲಿ ಇರುವುದೇ  ಬ್ಲಡ್ ಶುಗರ್ ?  title=

ಬೆಂಗಳೂರು : ಮಧುಮೇಹ ಎನ್ನುವುದು ಸಣ್ಣ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಮಧುಮೇಹದ ಸಮಸ್ಯೆ ಇದ್ದವರು ತಮ್ಮ ಊಟ ತಿಂಡಿಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ, ಪ್ರಾಣಕ್ಕೆ ಕುತ್ತು ತರಬಹುದು. ಇನ್ನು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಮಧುಮೇಹ ರೋಗಿಗಳು ಸಕ್ಕೆರೆ ಸೇವಿಸಬಾರದು ಎಂದು ಹೇಳಲಾಗುತ್ತದೆ. ಅದು ನೂರಕ್ಕೆ ನೂರರಷ್ಟು ನಿಜ. ಸಕ್ಕರೆ ಕಾಯಿಲೆ ಇರುವವರು ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿಯೂ ಸಕ್ಕರೆ ಸೇವಿಸುವಂತಿಲ್ಲ. ಆದರೆ ಸಕ್ಕರೆ ಬದಲು ಬೆಲ್ಲ  ಸೇವಿಸಬಹುದು ಎನ್ನುವ ಅಭಿಪ್ರಾಯ ಬಹುತೇಕರದ್ದು.  ಈ ವಾದ ಎಷ್ಟು ಸರಿ ಎನ್ನುವುದು ಪ್ರಶ್ನೆ? ನೀವು ಕೂಡಾ ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸುತ್ತೀರಾ? ಹಾಗಿದ್ದರೆ ಸಕಕ್ರೆ ಬದಲು ಬೆಳ್ಳ ಸೇವಿಸಬಹುದೇ ಎನ್ನುವ ಸತ್ಯವನ್ನು ಖಂಡಿತವಾಗಿಯೂ ಅರಿತುಕೊಳ್ಳಬೇಕು. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ.  

ಇದನ್ನೂ ಓದಿ : ಡೈಬಿಟಿಸ್ ನಿಂದ ಹಿಡಿದು ಯಕೃತ್ತಿನವರೆಗೆ ಎಲ್ಲದರ ಕಾಳಜಿವಹಿಸುತ್ತೆ ಈ ಕ್ರಾನ್ ಬೆರ್ರಿ, ಇಲ್ಲಿವೆ ಅದರ ಅದ್ಭುತ ಲಾಭಗಳು!

ಬೆಲ್ಲವು ಹಾನಿಕಾರಕವಾಗಬಹುದು :
ಆಯುರ್ವೇದದ ಪ್ರಕಾರ (ayurveda) ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಾರದು. ಶ್ವಾಸಕೋಶದ ಸೋಂಕು, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಸಮಸ್ಯೆಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿಯಾಗಲಿದೆ. ಆದರೆ , ಮಧುಮೇಹದ ಸಮಸ್ಯೆಯಲ್ಲಿ ಬೆಲ್ಲವನ್ನು ತಿನ್ನುವುದು ಸಮಂಜಸವಲ್ಲ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ. ಆದರೆ ಇದು ಮಧುಮೇಹ ರೋಗಿಗಳಿಗೆ ಸೂಕ್ತವಲ್ಲ. ಮಧುಮೇಹಿಗಳು ಸಕ್ಕರೆ ಬದಲು ಬೆಲ್ಲ ಸೇವಿಸುತ್ತಿದ್ದರೆ ಅದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.

ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ :
ಬೆಲ್ಲದಲ್ಲಿ ಶೇಕಡಾ 65 ರಿಂದ 85 ರಷ್ಟು ಸುಕ್ರೋಸ್ ಇರುತ್ತದೆ. ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಮಾತ್ರ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಸೇವನೆಯು ಮಧುಮೇಹ ರೋಗಿಗಳಿಗೂ ಅಪಾಯಕಾರಿಯಾಗಿರುತ್ತದೆ.  

ಇದನ್ನೂ ಓದಿ : ಮುಚ್ಚಿಹೋದ ರಕ್ತನಾಳಗಳನ್ನು ಪುನಃ ತೆರೆಯುತ್ತೇ ಈ ಆಯುರ್ವೇದ ಎಲೆ, ಇಂದೇ ಟ್ರೈ ಮಾಡಿ ನೋಡಿ!

ಬೆಲ್ಲದ ಬದಲಿಗೆ ಜೇನುತುಪ್ಪ : 
ಹಾಗಿದ್ದರೆ ಮಧುಮೇಹ ಇರುವ ರೋಗಿಗಳು ಸಿಹಿಯಿಂದ ಸಂಪೂರ್ಣ ದೂರ ಉಳಿಯಬೇಕೇ ? ಇದಕ್ಕೆ ಪರಿಹಾರವೇ ಇಲ್ಲವೇ? ಎನ್ನುವ ಪ್ರಶ್ನೆ ಏಳುತ್ತದೆ. ಮಧುಮೇಹ ಒಮ್ಮೆ ಬಾಧಿಸಿದೆ ಎಂದಾದ ಮೇಲೆ ಅದು ಜೀವನ ಪರ್ಯಂತ ಅನುಭವಿಸಲೆಬೇಕಾದ ಶಿಕ್ಷೆ ಎನ್ನುವುದು ಸುಳಲ್ಲ. ಆದರೆ ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಸಕ್ಕರೆ, ಬೆಲ್ಲವನ್ನು ತಿನ್ನದೆ ಸಾವಯವ ಜೇನುತುಪ್ಪವನ್ನು ಸೇವಿಸಬಹುದು. ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸಬಹುದು ಎಂಬ ಭಾವನೆ ಮಧುಮೇಹ ರೋಗಿಗಳಲ್ಲಿ ಇದೆ. ಆದರೆ ಇದು  ತಪ್ಪು ತಿಳುವಳಿಕೆ. ನಿಮಗೆ ಮಧುಮೇಹವಿಲ್ಲದಿದ್ದರೆ, ಸಕ್ಕರೆ ಬದಲು ಬೆಲ್ಲ ತಿನ್ನಬಹುದು. ಆದರೆ ಮಧುಮೇಹವಿದ್ದರೆ ಮಾತ್ರ ಸಕ್ಕರೆಯಂತೆ ಬೆಲ್ಲದಿಂದಲೂ ದೂರವಿರಿ. 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News