ಈ ಸಿಹಿ ಪದಾರ್ಥವನ್ನು ಸೇವಿಸುವುದರಿಂದ ಚಮತ್ಕಾರಿ ವೇಗದಲ್ಲಿ ಕಡಿಮೆಯಾಗುವುದು ತೂಕ.!

Honey For Weight Loss:ಬಿಳಿ ಸಕ್ಕರೆಯ ಬದಲು ನೈಸರ್ಗಿಕ ಸಕ್ಕರೆ ಇರುವಂತಹ ಪದಾರ್ಥಗಳನ್ನು ಸೇವಿಸಿದರೆ ಸುಲಭವಾಗಿ  ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.

Written by - Ranjitha R K | Last Updated : Nov 21, 2022, 10:49 AM IST
  • ಸಿಹಿ ಪದಾರ್ಥಗಳನ್ನು ಸೇವಿಸಿದರೆ ದೇಹ ತೂಕ ಹೆಚ್ಚಾಗುತ್ತದೆ
  • ಸಿಹಿ ತಿನಿಸುಗಳು ಫಿಟ್‌ನೆಸ್‌ನ ಶತ್ರು ಎಂದು ಕೂಡಾ ಹೇಳಲಾಗುತ್ತದೆ.
  • ತೂಕವನ್ನು ಕಳೆದುಕೊಳ್ಳಲು ಜೇನುತುಪ್ಪ ಸೇವಿಸಿ
ಈ ಸಿಹಿ ಪದಾರ್ಥವನ್ನು ಸೇವಿಸುವುದರಿಂದ ಚಮತ್ಕಾರಿ ವೇಗದಲ್ಲಿ ಕಡಿಮೆಯಾಗುವುದು ತೂಕ.! title=
Honey For Weight Loss

Honey For Weight Loss : ಸಿಹಿ ಪದಾರ್ಥಗಳನ್ನು ಸೇವಿಸಿದರೆ ದೇಹ ತೂಕ ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಸಿಹಿ ತಿನಿಸುಗಳು ಫಿಟ್‌ನೆಸ್‌ನ ಶತ್ರು ಎಂದು ಕೂಡಾ ಹೇಳಲಾಗುತ್ತದೆ. ದೇಹದಲ್ಲಿ ಸಕ್ಕರೆಯು ಹೆಚ್ಚು ಸಂಗ್ರಹಗೊಂಡರೆ, ಅದು ಕೊಬ್ಬಾಗಿ  ಪರಿವರ್ತನೆಯಾಗುತ್ತದೆ. ಈ ಮೂಲಕ ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ದೇಹಕ್ಕೆ ಸಕ್ಕರೆಯ ಅಗತ್ಯವಿಲ್ಲದಿದ್ದರೂ, ಇದರಿಂದ ನಮಗೆ ಶಕ್ತಿ ಸಿಗುತ್ತದೆ. ದೌರ್ಬಲ್ಯ ಮತ್ತು ತಲೆ ಸುತ್ತುವ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಬಿಳಿ ಸಕ್ಕರೆಯ ಬದಲು ನೈಸರ್ಗಿಕ ಸಕ್ಕರೆ ಇರುವಂತಹ ಪದಾರ್ಥಗಳನ್ನು ಸೇವಿಸಿದರೆ ಸುಲಭವಾಗಿ  ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.

ತೂಕವನ್ನು ಕಳೆದುಕೊಳ್ಳಲು ಜೇನುತುಪ್ಪ  ಸೇವಿಸಿ : 
ತೂಕವನ್ನು ಕಳೆದುಕೊಳ್ಳಲು ಜೇನುತುಪ್ಪವನ್ನು ಸೇವಿಸಬಹುದು. ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ಏಕೆಂದರೆ ಇದು ಬೊಜ್ಜು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಇದು ಒಳ್ಳೆಯದು. 

ಇದನ್ನೂ ಓದಿ : Leaf For Weight Loss: ಈ ಗಿಡದ ಎಲೆಗಳನ್ನು ಅಗೆದು ವೇಗವಾಗಿ ತೂಕ ಕಳೆದುಕೊಳ್ಳಿ

ಜೇನುತುಪ್ಪದಲ್ಲಿ  ಅಡಗಿವೆ ಪೋಷಕಾಂಶಗಳು  :
ಜೇನುತುಪ್ಪದಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡು ಬರುತ್ತವೆ. ಇದು ವಿಟಮಿನ್ ಬಿ -6, ವಿಟಮಿನ್ ಸಿ, ಅಮೈನೋ ಆಮ್ಲಗಳು, ಕಾರ್ಬೋಹೈಡ್ರೇಟ್‌ಗಳು, ರೈಬೋಫ್ಲಾವಿನ್ ಮತ್ತು ನಿಯಾಸಿನ್‌ಗಳಲ್ಲಿ ಸಮೃದ್ಧವಾಗಿದೆ. ಜೊತೆಗೆ ಇದರಲ್ಲಿ ಕ್ಯಾಲೋರಿಗಳು ಮತ್ತು ಸಕ್ಕರೆ ಬಹಳ ಕಡಿಮೆ ಪ್ರಮಾಣದಲ್ಲಿ ಇರುತ್ತವೆ.  ಇದು ನಾಲಿಗೆಗೂ ರುಚಿಕರವಾಗಿರುತ್ತದೆ.  ಇದರೊಂದಿಗೆ ದೇಹ ತೂಕ ಕಳೆದುಕೊಳ್ಳಲು ಪರಿಣಾಮಕಾರಿಯಾಗಿದೆ. 

ಜೇನುತುಪ್ಪದಿಂದ ತೂಕ ಕಳೆದುಕೊಳ್ಳುವುದು ಹೇಗೆ ಸಾಧ್ಯ ? :
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಪ್ರಕಾರ, ನಿಯಮಿತವಾಗಿ ಜೇನು ತುಪ್ಪ ಸೇವಿಸಿದರೆ ದೇಹವು ಸಾಕಷ್ಟು ಶಕ್ತಿಯನ್ನು ಪಡೆಯುತ್ತದೆ. ಇದು ಫ್ಯಾಟ್ ಬರ್ನರ್ ನಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದಾದ ನಂತರ ತೂಕವು ಕ್ರಮೇಣ ಕಡಿಮೆಯಾಗುತ್ತದೆ. ಇದರೊಂದಿಗೆ,  ಜೇನುತುಪ್ಪ ಚಯಾಪಚಯವನ್ನು ಹೆಚ್ಚಿಸುತ್ತದೆ.  ಇದರಿಂದಾಗಿ ಕೊಬ್ಬು ಕರಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ : Blocked Nose: ಕಟ್ಟಿದ ಮೂಗಿಗೆ ಈ ಮನೆಮದ್ದುಗಳು ತ್ವರಿತ ಪರಿಹಾರ ನೀಡುತ್ತವೆ!

ಜೇನುತುಪ್ಪವನ್ನು ಹೇಗೆ ಸೇವಿಸುವುದು? :
ವೇಗವಾಗಿ ತೂಕವನ್ನು ಕಳೆದುಕೊಳ್ಳಬೇಕಾದರೆ ಬೆಳಿಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಇನ್ನೂ ಉತ್ತಮ ಪರಿಣಾಮ ಬೇಕಾದರೆ ಅದರಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಗ್ರೀನ್ ಟೀಯನ್ನು ಕೂಡಾ ಜೇನುತುಪ್ಪ ಬೆರೆಸಿ ಕುಡಿಯಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News