Benefits Of Drumstick : ಈ ಪೋಷಕ ತತ್ವಗಳಿಗಾಗಿ ವಾರದಲ್ಲೊಮ್ಮೆಯಾದರೂ ಸೇವಿಸಿ ನುಗ್ಗೆಕಾಯಿ

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ನುಗ್ಗೆಕಾಯಿಯಲ್ಲಿ ವಿಟಮಿನ್ ಗಳು, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. 

Written by - Ranjitha R K | Last Updated : Sep 8, 2021, 07:07 PM IST
  • ನುಗ್ಗೆಕಾಯಿಯನ್ನು ಪ್ರತಿ ಮನೆಯಲ್ಲಿಯೂ ಬಳಸಲಾಗುತ್ತದೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನುಗ್ಗೆಕಾಯಿ ಉತ್ತಮ ಆಯ್ಕೆ
  • ಹೃದಯಾಘಾತದ ಅಪಾಯವನ್ನೂ ಕಡಿಮೆ ಮಾಡುತ್ತದೆ ನುಗ್ಗೆಕಾಯಿ
Benefits Of Drumstick : ಈ ಪೋಷಕ ತತ್ವಗಳಿಗಾಗಿ  ವಾರದಲ್ಲೊಮ್ಮೆಯಾದರೂ ಸೇವಿಸಿ ನುಗ್ಗೆಕಾಯಿ   title=
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನುಗ್ಗೆಕಾಯಿ ಉತ್ತಮ ಆಯ್ಕೆ (file photo)

ನವದೆಹಲಿ : Benefits Of Drumstick: ನುಗ್ಗೆಕಾಯಿಯನ್ನು ಪ್ರತಿ ಮನೆಯಲ್ಲಿಯೂ ಬಳಸಲಾಗುತ್ತದೆ. ನುಗ್ಗೆಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಹೆಚ್ಚಾಗಿ ಸಾಂಬಾರ್ ನಲ್ಲಿ ಬಳಸಲಾಗುತ್ತದೆ.  ಕರೋನಾ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ನುಗ್ಗೆಕಾಯಿ ಉತ್ತಮ ಆಯ್ಕೆಯಾಗಿತ್ತು. 

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ನುಗ್ಗೆಕಾಯಿಯಲ್ಲಿ ವಿಟಮಿನ್ ಗಳು, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ನುಗ್ಗೆಕಾಯಿ (Drumstick) ನಮ್ಮ ದೇಹವನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ಮೂಳೆಗಲು ಸದೃಢಗೊಳುತ್ತವೆ. ಅಲ್ಲದೆ,   ಯಕೃತ್ತಿನ ಕಾರ್ಯವನ್ನು ಕೂಡಾ ಇದು ಸುಧಾರಿಸುತ್ತದೆ.

ಇದನ್ನೂ ಓದಿ : ಈ ಸಮಸ್ಯೆಯಿದ್ದವರು ಪ್ರತಿ ದಿನ ರಾಗಿಯನ್ನು ಈ ರೀತಿ ಸೇವಿಸಿ

ನುಗ್ಗೆಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು :
ವಿಟಮಿನ್ ಸಿ, ಎ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ನುಗ್ಗೆಕಾಯಿಯಲ್ಲಿ (Benefits of moringa) ಅಗತ್ಯವಿರುವ ಎಲ್ಲಾ ಪೋಷಕಾಂಶಗಳು  ಕಂಡುಬರುತ್ತವೆ. ಸಂಶೋಧನೆಯ ಪ್ರಕಾರ, ನುಗ್ಗೆಕಾಯಿಯಲ್ಲಿ ಕಿತ್ತಳೆಗಿಂತ (Orange) ಏಳು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಕ್ಯಾರೆಟ್ ಗಿಂತ 10 ಪಟ್ಟು ಹೆಚ್ಚು ವಿಟಮಿನ್ ಎ ಸಿಗುತ್ತದೆಯಂತೆ. ಈ ಎಲ್ಲಾ ಅಂಶಗಳು, ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾಗಿದೆ. 

ಇನ್ನು, ನುಗ್ಗೆಕಾಯಿಯಲ್ಲಿ, ಕಬ್ಬಿಣದ ಅಂಶ ಕೂಡಾ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ರಕ್ತಹೀನತೆಯನ್ನು (Iron deficiency) ನಿವಾರಿಸಲು ಇದನ್ನು ಬಳಸುವಂತೆ ಸೂಚಿಸಲಾಗುತ್ತದೆ. ನುಗ್ಗೆಕಾಯಿಯಲ್ಲಿ, ಬಹಳಷ್ಟು ಪ್ರೋಟೀನ್, ಅಮೈನೋ ಆಮ್ಲಗಳು, ಫೈಬರ್, ವಿಟಮಿನ್ ಬಿ, ಸಿ ಮತ್ತು ಇ ಕಂಡುಬರುತ್ತವೆ.

ಇದನ್ನೂ ಓದಿ : Clove For Skin: ಲವಂಗವನ್ನು ಈ ರೀತಿ ಬಳಸಿ ಮುಖದ ಸುಕ್ಕಿನ ಸಮಸ್ಯೆ ನಿವಾರಿಸಿ

ನುಗ್ಗೆಕಾಯಿಯ ಪ್ರಯೋಜನಗಳು :
-ನುಗ್ಗೆಕಾಯಿಯಲ್ಲಿ ಫೈಟೊಕೆಮಿಕಲ್‌ಗಳು ಕಂಡು ಬರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood sugar level) ನಿಯಂತ್ರಿಸಲು ಸಹಕಾರಿಯಾಗಿದೆ.  
-ಟ್ರಿಪ್ಟೊಫಾನ್  (Tryptophan) ಎಂಬ ಒಂದು ವಿಧದ ಪ್ರೋಟೀನ್ ಕೂಡಾ ನುಗ್ಗೆಕಾಯಿಯಲ್ಲಿರುತ್ತದೆ. ಇದು ಮೆದುಳಿನಲ್ಲಿರುವ ಮೆಮೊರಿ ಅಂಗಾಂಶಗಳನ್ನು ಸಕ್ರಿಯಗೊಳಿಸುತ್ತದೆ. ಇದು ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಸ್ಮರಣ ಶಕ್ತಿಯನ್ನು  ಬಲಪಡಿಸುತ್ತದೆ.
- ಇನ್ನು ನುಗ್ಗೆ ಸೊಪ್ಪು, ಹೊಟ್ಟೆಯಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸುತ್ತದೆ. ಇದಲ್ಲದೇ, ಮಲಬದ್ಧತೆ (Constipation), ಹೊಟ್ಟೆ ಉಬ್ಬುವುದು, ಗ್ಯಾಸ್, ಜಠರದುರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆಯನ್ನು ನಿವಾರಿಸುತ್ತದೆ. 
- ಮೂಳೆ ಆರೋಗ್ಯಕ್ಕೆ (Bone health) ನುಗ್ಗೆಕಾಯಿ ಸೇವನ ಬಹಳ ಮುಖ್ಯ. ನುಗ್ಗೆ ಸೊಪ್ಪಿನಲ್ಲಿ ಆ್ಯಂಟಿ ಇಂಫ್ಲಮೆಟರಿ ಗುಣಗಳಿರುವುದರಿಂದ  ಅವು ಸಂಧಿವಾತವನ್ನು ತಡೆಯಲು ಮತ್ತು ಆಸ್ಟಿಯೊಪೊರೋಸಿಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇದರಿಂದ ಮೂಳೆಗಳು ಸದೃಢವಾಗುತ್ತವೆ.  
- ನುಗ್ಗೆ ಸೊಪ್ಪು (Moringa leaves), ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತವೆ. ಇದು ಹೃದಯ ರಕ್ತನಾಳಗಳನ್ನು ಸರಿಯಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೃದಯ ರಕ್ತನಾಳಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ,  ಹೃದಯಾಘಾತದ (Heart attack)ಅಪಾಯ ಇರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News