8 ತಿಂಗಳ ಹೆಣ್ಣು ಹಸುಳೆಯನ್ನೇ ಅತ್ಯಾಚಾರ ಮಾಡಿ ಕೊಲೆಗೈದ ಯುವಕ

    

Updated: Apr 21, 2018 , 04:53 PM IST
8 ತಿಂಗಳ ಹೆಣ್ಣು ಹಸುಳೆಯನ್ನೇ ಅತ್ಯಾಚಾರ ಮಾಡಿ ಕೊಲೆಗೈದ ಯುವಕ

ಇಂದೋರ್: 8 ತಿಂಗಳ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ ನಂತರ ಕೊಲೆಗೈದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರಿನ ರಾಜವಾಡಾ ಕೋಟೆಯಲ್ಲಿ ನಡೆದಿದೆ.

ಈ ಕೃತ್ಯ ಗೈದಿರುವ ವ್ಯಕ್ತಿಯು ಆ ಮಗುವಿನ ಕುಟುಂಬಕ್ಕೆ ಪರಿಸಿತನೆಂದು ಹೇಳಲಾಗಿದೆ. ಮಗುವಿನ ತಂದೆ ತಾಯಿಗಳು ಬಲೂನ್ ಮಾರಾಟಗಾರರಾಗಿದ್ದು ನಗರದ ರಾಜವಾಡಾ ಕೋಟೆಯ ಬೀದಿಯಲ್ಲಿ ಮಲಗಿದ್ದಾಗ 21 ವರ್ಷದ ಯುವಕನು ಆ ಮಗುವನ್ನು ತೆಗೆದುಕೊಂಡು ಅತ್ಯಾಚಾರವೆಸಗಿ ನಂತರ ಹತ್ಯೆ ಗೈದಿದ್ದಾನೆ ಎಂದು ಹೇಳಲಾಗಿದೆ. ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯವು ನಗರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಿನ 4.45 ರ ವೇಳೆಗೆ ಆ ವ್ಯಕ್ತಿಯು ಪೋಷಕರ ಹತ್ತಿರ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಈ ಅಮಾನವೀಯ ಕೃತ್ಯವೆಸಗಿದ್ದಾನೆ.ಆರೋಪಿಯನ್ನು  ನವೀನ ಗಾದ್ಕೆ ಎಂದು ಹೇಳಲಾಗಿದ್ದು  ಪೊಲೀಸರು ಇವನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.