ನಾಳೆ ಸಂವಿಧಾನ ದಿನ... ನೇರಪ್ರಸಾರಕ್ಕೆ ಚಾಲನೆ ನೀಡಲಿರುವ ರಾಷ್ಟ್ರಪತಿ ಕೋವಿಂದ್

ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಅವರು ಶುಕ್ರವಾರ (ನಾಳೆ) ಬೆಳಗ್ಗೆ 11.00 ಗಂಟೆಗೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಿಂದ ಸಂವಿಧಾನ ದಿನದ (Constitution Day) ನೇರಪ್ರಸಾರಕ್ಕೆ ಚಾಲನೆ ನೀಡಲಿದ್ದಾರೆ.

Written by - Zee Kannada News Desk | Last Updated : Nov 25, 2021, 10:43 PM IST
  • ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಅವರು ಶುಕ್ರವಾರ (ನಾಳೆ) ಬೆಳಗ್ಗೆ 11.00 ಗಂಟೆಗೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಿಂದ ಸಂವಿಧಾನ ದಿನದ (Constitution Day) ನೇರಪ್ರಸಾರಕ್ಕೆ ಚಾಲನೆ ನೀಡಲಿದ್ದಾರೆ.
ನಾಳೆ ಸಂವಿಧಾನ ದಿನ... ನೇರಪ್ರಸಾರಕ್ಕೆ ಚಾಲನೆ ನೀಡಲಿರುವ ರಾಷ್ಟ್ರಪತಿ ಕೋವಿಂದ್  title=
file photo

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಅವರು ಶುಕ್ರವಾರ (ನಾಳೆ) ಬೆಳಗ್ಗೆ 11.00 ಗಂಟೆಗೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಿಂದ ಸಂವಿಧಾನ ದಿನದ (Constitution Day) ನೇರಪ್ರಸಾರಕ್ಕೆ ಚಾಲನೆ ನೀಡಲಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ, ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೇಂದ್ರವು ನವೆಂಬರ್ 26 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನ ದಿನವನ್ನು ಆಚರಿಸಲಿದೆ.

ಇದನ್ನೂ ಓದಿ : ದೇಶದಲ್ಲಿ ಗಗನಕ್ಕೇರುತ್ತಿದೆ ತರಕಾರಿ ಬೆಲೆ : ಆದ್ರೆ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಟೊಮೇಟೊ-ಈರುಳ್ಳಿ!

ಆಜಾದಿ ಕಾ ಅಮೃತ್ ಮಹೋತ್ಸವವು 75 ವರ್ಷಗಳ ಪ್ರಗತಿಪರ ಭಾರತ ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಕೇಂದ್ರ ಸರ್ಕಾರ ರೂಪಿಸಿರುವ ಉಪಕ್ರಮವಾಗಿದೆ. ಈ ಮಹೋತ್ಸವದ ಅಂಗವಾಗಿ ಭಾರತವು ನಾಳೆ ಸಂವಿಧಾನ ದಿನವನ್ನು ಅತ್ಯಂತ ಉತ್ಸಾಹದಿಂದ ಮತ್ತು ಸಂಭ್ರಮದಿಂದ ಆಚರಿಸುತ್ತಿದೆ ಎಂದು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನ ಉಭಯ ಸದನಗಳ ಸ್ಪೀಕರ್‌ಗಳು, ಸಚಿವರು, ಸಂಸದರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ : ಪ್ರಮುಖ ಪ್ರತಿಪಕ್ಷದ ಪಾತ್ರ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲ- ಮಾಜಿ ಸಿಎಂ ಮುಕುಲ್ ಸಂಗ್ಮಾ

ರಾಷ್ಟ್ರಪತಿಯವರ ಭಾಷಣದ ನಂತರ, ಇಡೀ ರಾಷ್ಟ್ರವನ್ನು ಅವರೊಂದಿಗೆ ಲೈವ್ ಆಗಿ ಸಂವಿಧಾನದ ಪೀಠಿಕೆಯನ್ನು (Preamble to the Constitution) ಓದಲು ಆಹ್ವಾನಿಸಲಾಗಿದೆ. ಅವರು 'ಸಾಂವಿಧಾನಿಕ ಪ್ರಜಾಪ್ರಭುತ್ವದ ಆನ್‌ಲೈನ್ ರಸಪ್ರಶ್ನೆ' ಸ್ಪರ್ಧೆಯನ್ನು (Online Quiz on Constitutional Democracy) ಉದ್ಘಾಟಿಸಲಿದ್ದಾರೆ. ಸಂವಿಧಾನದ ಪೀಠಿಕೆಯನ್ನು 23 ಭಾಷೆಗಳಲ್ಲಿ (22 ಅಧಿಕೃತ ಮತ್ತು ಇಂಗ್ಲಿಷ್) ಓದುವ ಪೋರ್ಟಲ್ ಇಂದು ಮಧ್ಯರಾತ್ರಿಯಲ್ಲಿ ಲೈವ್ ಆಗಲಿದೆ.

1949 ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಈ ಐತಿಹಾಸಿಕ ದಿನದ ಮಹತ್ವಕ್ಕೆ ಸೂಕ್ತ ಮಾನ್ಯತೆ ನೀಡುವ ನಿಟ್ಟಿನಲ್ಲಿ 2015 ರಿಂದ ಸಂವಿಧಾನ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News