Viral Video: ಕೋತಿ ಬಾಲಕನ ಮಧ್ಯೆ ಭಾರಿ ಗುದ್ದಾಟ, ಗೆದ್ದಿದ್ದು ಯಾರು?

Trending Video: ಕೋತಿ ಮತ್ತು ಮಗುವಿನ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರೂ ತೀವ್ರವಾಗಿ ಜಗಳವಾಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ಜನ ಜೋರಾಗಿ ನಗುತ್ತಿದ್ದಾರೆ.  

Written by - Nitin Tabib | Last Updated : Dec 6, 2022, 10:47 PM IST
  • ಕೋತಿ ಹಾಗೂ ಮಕ್ಕಳ ತುಂಟ ಸ್ವಭಾವದ ಕುರಿತು ನಮಗೆಲ್ಲರಿಗೂ ತಿಳಿದೇ ಇದೆ.
  • ಇಬ್ಬರೂ ಸಾಕಷ್ಟು ಕಿಡಿಗೇಡಿ ಕೆಲಸಗಳನ್ನು ಮಾಡುತ್ತಾರೆ ಮತ್ತು ಜನರನ್ನು ರಂಜಿಸುತ್ತಾರೆ.
Viral Video: ಕೋತಿ ಬಾಲಕನ ಮಧ್ಯೆ ಭಾರಿ ಗುದ್ದಾಟ, ಗೆದ್ದಿದ್ದು ಯಾರು? title=
Monkey-Child Fight Video

Viral Video: ಸಾಮಾಜಿಕ ಮಾಧ್ಯಮದಲ್ಲಿ ಹಲವು ಸ್ವಾರಸ್ಯಕರ ಸಂಗತಿಗಳು ದಿನನಿತ್ಯ ಹರಿದಾಡುತ್ತಲೇ ಇರುತ್ತವೆ. ಅವುಗಳನ್ನು ನೋಡಿದ ಬಳಕೆದಾರರು ವ್ಯಾಪಕ ಚರ್ಚೆಯನ್ನೇ ನಡೆಸುತ್ತಾರೆ. ಈ ಸಂಗತಿಗಳಲ್ಲಿ ಕೆಲವೊಂದು ತಮಾಷೆಯ ಸಂಗತಿಗಳಿದ್ದರೆ,  ಕೆಲವೊಂದು ವಿಷಯಗಳು ಭಾರಿ ಆಶ್ಚರ್ಯವನ್ನೇ ಹುಟ್ಟುಹಾಕುತ್ತವೆ. ಕೆಲವು ವಿಡಿಯೋಗಳನ್ನು ನೋಡಿ ನಾವು ನಮ್ಮ ಕಣ್ಣುಗಳ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುತ್ತೇವೆ. ಇಂತಹುದೇ ಒಂದು ತಮಾಷೆಯ ವೀಡಿಯೊ ಮುನ್ನೆಲೆಗೆ ಬಂದಿದೆ, ಇದನ್ನು ನೋಡಿ ನೀವೂ ಕೂಡ ನಿಮ್ಮ ನಗು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಈ ವಿಡಿಯೋದಲ್ಲಿ ಓರ್ವ ಪುಟ್ಟ ಬಾಲಕ ಮತ್ತು ಕೋತಿಯ ನಡುವೆ ಭಾರಿ ಗುದ್ದಾಟವೆ ನಡೆದಿದೆ.

ಇದನ್ನೂ  ಓದಿ-Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ

ಕೋತಿ ಹಾಗೂ ಮಕ್ಕಳ ತುಂಟ ಸ್ವಭಾವದ ಕುರಿತು ನಮಗೆಲ್ಲರಿಗೂ ತಿಳಿದೇ ಇದೆ. ಇಬ್ಬರೂ ಸಾಕಷ್ಟು ಕಿಡಿಗೇಡಿ ಕೆಲಸಗಳನ್ನು ಮಾಡುತ್ತಾರೆ ಮತ್ತು ಜನರನ್ನು ರಂಜಿಸುತ್ತಾರೆ. ಈ ವೈರಲ್ ವೀಡಿಯೋದಲ್ಲಿ ನೀವು ಅದೇ ರೀತಿಯ ದೃಶ್ಯವನ್ನು ನೋಡಬಹುದು. ಪೊದೆಗಳಲ್ಲಿ ಮಗು ಮತ್ತು ಕೋತಿಯ ನಡುವೆ ಜಗಳ ನಡೆಯುತ್ತಿರುವುದನ್ನು ನೀವು ವೀಡಿಯೊದಲ್ಲಿ ಕಾಣಬಹುದು. ಇಬ್ಬರೂ ತುಂಬಾ ಪಿತ್ತ ನೆತ್ತಿಗೆರಿರುವರಂತೆ ತೋರುತ್ತಿದ್ದಾರೆ ಮತ್ತು ಒಬ್ಬರ ಮೇಲೊಬ್ಬರು ದಾಳಿ ಮಾಡುತ್ತಿದ್ದಾರೆ. ಕೋಟಿ ಕೂಡ ಮಗುವಿಗೆ ಹೊಡೆಯುತ್ತಿದ್ದು, ಮಗು ಕೂಡ ಕೋತಿಗೆ ಕಪಾಳಮೋಕ್ಷ ಮಾಡುತ್ತಿದೆ. ಇಬ್ಬರೂ ನಿಲ್ಲುವ ಮಾತೆ ಎತ್ತುತ್ತಿಲ್ಲ. ಸುಮ್ಮನೆ ಪರಸ್ಪರರನ್ನು ಕೆಣಕುತ್ತಿದ್ದಾರೆ. ವಿಡಿಯೋ ನೋಡಿ..

ಇದನ್ನೂ ಓದಿ-Viral Video: ಮಾರುಕಟ್ಟೆಯಲ್ಲಿ ನಾಯಿ ತರಕಾರಿ ಖರೀದಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

ವಿಡಿಯೋ ನೋಡಿ ನೀವೂ ಕೂಡ ದಂಗಾಗಿರಬಹುದು ಮತ್ತು ಇಬ್ಬರ ಕುಚೇಷ್ಟೆ ನೋಡಿ ಜೋರಾಗಿ ನಗುತ್ತಿರಬೇಕು. ಈ ತಮಾಷೆಯ ವೀಡಿಯೊವನ್ನು '1m_viral_reels' ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಆದರೆ, ಸಾವಿರಾರು ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಇನ್ನೊಂದೆಡೆ, ವಿಡಿಯೋ ಕುರಿತು ಚರ್ಚೆ ನಡೆಸುತ್ತಿರುವ ನೆಟ್ಟಿಗರು ವಿಡಿಯೊಗೆ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ ಎಂದು ಕೆಲವರು ಹೇಳಿದರೆ. ಉಳಿದವರು ಇಬ್ಬರು ಕೂಡಿ ಭಾರಿ ಸೀನ್ ಕ್ರಿಯೇಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇಷ್ಟಕ್ಕೂ ಈ ಇಬ್ಬರ ನಡುವೆ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿದೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅದೇನೇ ಇರಲಿ ಈ ಇಬ್ಬರ ತುಂಟಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದಂತೂ ನಿಜ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News