ದೆಹಲಿಯ ಕರೋಲ್ ಬಾಗ್ ಫ್ಯಾಕ್ಟರಿಯಲ್ಲಿ ಬೆಂಕಿ, ನಾಲ್ವರ ಸಜೀವ ದಹನ

ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

Last Updated : Nov 19, 2018, 05:22 PM IST
ದೆಹಲಿಯ ಕರೋಲ್ ಬಾಗ್ ಫ್ಯಾಕ್ಟರಿಯಲ್ಲಿ ಬೆಂಕಿ, ನಾಲ್ವರ ಸಜೀವ ದಹನ title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕರೋಲ್ ಭಾಗ್'ನಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಸೋಮವಾರ ಮಧ್ಯಾಹನ್ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 

ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವ ಕಾರ್ಮಿಕರನ್ನು ಬಗಾನ್ ಪ್ರಸಾದ್ (55), ಆರ್.ಎಂ.ನರೇಶ್ (40), ಆರತಿ (20) ಮತ್ತು ಆಶಾ (40) ಎಂದು ಗುರುತಿಸಲಾಗಿದೆ. 

ಮೂಲಗಳ ಪ್ರಕಾರ, ಪ್ಯಾಕ್ಟರಿಯಲ್ಲಿ ರಾಸಾಯನಿಕವೊಂದು ಚೆಲ್ಲಿದ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

Trending News