ನವದೆಹಲಿ:ದೇಶಾದ್ಯಂತ ಸಾಮಾನ್ಯ ರೈಲು ಸೇವೆ ಆರಂಭಗೊಳ್ಳಲು ಇನ್ನಷ್ಟು ಕಾಯಬೇಕಾಗಲಿದೆ. ಏಕೆಂದರೆ ರೇಲ್ವೆ ಇಲ್ಲಾಖೆ ಜೂನ್ 30, 2020ರವರೆಗೆ ಕಾಯ್ದಿರಿಸಲಾಗಿರುವ ಎಲ್ಲಾ ಟಿಕೆಟ್ ಗಳನ್ನು ರದ್ದುಗೊಳಿಸಿದೆ. ಅಷ್ಟೇ ಅಲ್ಲ ಕಾಯ್ದಿರಿಸಿದ ಎಲ್ಲಾ ಟಿಕೆಟ್ ಗಳ ಮರುಪಾವತಿ ಕೂಡ ಮಾಡಲಾಗಿದೆ. ಆದರೆ, ಈ ಮೊದಲು ಘೋಷಿಸಲಾಗಿರುವಂತೆ ವಿಶೇಷ ಹಾಗೂ ಶ್ರಮಿಕ್ ರೈಲುಗಳು ಎಂದಿನಂತೆ ತನ್ನ ಕಾರ್ಯ ಮುಂದುವರೆಸಲಿವೆ.
ಇದಕ್ಕೂ ಮೊದಲು ಭಾರತೀಯ ರೈಲು ಇಲಾಖೆ ಮೇ 17ರವರೆಗಿನ ಎಲ್ಲ ರೈಲುಗಳ ಟಿಕೆಟ್ ಗಳನ್ನು ರದ್ದುಗೊಳಿಸಿತ್ತು. ಇದೀಗ ಜೂನ್ 30ರವರೆಗಿನ ಎಲ್ಲಾ ರೀತಿಯ ಸಾಮಾನ್ಯ ರೈಲು ಸೇವೆಗಳ ಟಿಕೆಟ್ ಅನ್ನು ರದ್ದುಗೊಳಿಸಿದೆ. ಸದ್ಯ ದೇಶಾದ್ಯಂತ ಘೋಷಿಸಲಾಗಿರುವ ಮೂರನೇ ಹಂತದ ಲಾಕ್ ಡೌನ್ ಮೇ 17 ಕ್ಕೆ ಕೊನೆಗೊಳ್ಳಲಿದೆ. ಮೇ 12 ರಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ 4ನೇ ಹಂತದ ಲಾಕ್ ಡೌನ್ ಕುರಿತು ಸಂಕೇತಗಳನ್ನು ನೀಡಿದ್ದು, ಮೇ 18 ರಿಂದ ನಾಲ್ಕನೇ ಹಂತದ ಲಾಕ್ ಡೌನ್ ಆರಂಭವಾಗುವ ಎಲ್ಲ ಸಾಧ್ಯತೆಗಳನ್ನು ವರ್ತಿಸಲಾಗುತ್ತಿದೆ.18 ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.
ಇದುವರೆಗೆ ರೈಲು ಇಲಾಖೆ ತನ್ನ ಗ್ರಾಹಕರಿಗೆ 1490 ಕೋಟಿ ರೂ.ಹಣ ಮರುಪಾವತಿಸಿದೆ
ಈ ಕುರಿತು ವರದಿ ಪ್ರಕಟಿಸಿರುವ ಸುದ್ದಿಸಂಸ್ಥೆ PTI, ಇದುವರೆಗೆ ಲಾಕ್ ಡೌನ್ ಮುಂಚಿತವಾಗಿ ಕಾಯ್ದಿರಿಸಲಾಗಿರುವ ಸುಮಾರು 94 ಲಕ್ಷ ಟಿಕೆಟ್ ಗಳನ್ನು ರೈಲು ಇಲಾಖೆ ರದ್ದುಪದಿಸಿದ್ದು, ಗ್ರಾಹಕರಿಗೆ 1490 ಕೋಟಿ ರೂ.ಗಳನ್ನು ಮರುಪಾವತಿಸಿದೆ ಎಂದು ಹೇಳಿದೆ. ಇದರಲ್ಲಿ ಲಾಕ್ ಡೌನ್ ನ ಮೊದಲನೇ ಹಂತ ಅಂದರೆ ಮಾರ್ಚ್ 22 -ಏಪ್ರಿಲ್ 18 ರ ಮಧ್ಯೆ 83೦ ಕೋಟಿ ರೂ. ಮರುಪಾವತಿಸಲಾಗಿದೆ. ಮಾರ್ಚ್ 25ರಂದು ಆರಂಭಗೊಂಡ ಲಾಕ್ ಡೌನ್ ಗೂ ಮೂರು ದಿನ ಮುಂಚಿತವಾಗಿ ಅಂದರೆ ಮಾರ್ಚ್ 22 ರಂದು ಭಾರತೀಯ ರೈಲು ಇಲಾಖೆ ತನ್ನ ಎಲ್ಲಾ ರೀತಿಯ ಸಾಮಾನ್ಯ ಯಾತ್ರಿ ರೈಲು ಹಾಗೂ ಇತರೆ ಅನಾವಶ್ಯಕ ರಳುಗಳ ಸೇವೆಯನ್ನು ರದ್ದುಗೊಳಿಸಿತ್ತು. ಮೇ 17ರವರೆಗೆ ಲಾಕ್ ಡೌನ್ ವಿಸ್ತರಣೆಯಾದ ಬಳಿಕ ಇದುವರೆಗೆ ಭಾರತೀಯ ರೈಲು ಇಲಾಖೆ ಸಾಮಾನ್ಯ ರೈಲು ಸೇವೆಗಳಿಗೆ ಟಿಕೆಟ್ ಬುಕಿಂಗ್ ಕೈಗೊಂಡಿಲ್ಲ.
ಎಲ್ಲಾ ವಿಶೇಷ ಹಾಗೂ ಶ್ರಮಿಕ್ (ಕಾರ್ಮಿಕ) ರೈಲು ಸೇವೆ ಜಾರಿಯಲ್ಲಿರಲಿದೆ
ಕರೋನಾ ವೈರಸ್ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಸಾಮಾನ್ಯ ರೈಲು ಸೇವೆಗಳನ್ನು ನಿಲ್ಲಿಸಿದೆ. ಆದರೆ, ಎಲ್ಲಾ ವಿಶೇಷ ಮತ್ತು ಕಾರ್ಮಿಕ ವಿಶೇಷ ರೈಲುಗಳ ಸೇವೆ ಎಂದಿನಂತೆ ಮುಂದುವರೆಯಲಿದೆ. ಕಾರ್ಮಿಕ ವಿಶೇಷ ರೈಲು ಸೇವೆ ಮೇ 1 ರಿಂದ ಪ್ರಾರಂಭವಾಗಿದ್ದರೆ, ವಿಶೇಷ ರೈಲುಗಳು ಮೇ 12 ರಿಂದ ತನ್ನ ಓಡಾಟ ಪ್ರಾರಂಭಿಸಿವೆ.