ಸ್ವಂತ ಉದ್ಯಮ ಆರಂಭಿಸಬೇಕೆ? Modi ಸರ್ಕಾರದ ಈ ಸ್ಪರ್ಧೆಯಲ್ಲಿ ಭಾಗವಹಿಸಿ, 25 ಲಕ್ಷ ರೂ. ಫಂಡ್ ಪಡೆಯಿರಿ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು 'ಚುನೌತಿ' - ನೆಕ್ಸ್ಟ್ ಜನರೇಷನ್ ಸ್ಟಾರ್ಟ್ ಅಪ್ ಚಾಲೆಂಜ್ ಸ್ಪರ್ಧೆಯನ್ನು ಆರಂಭಿಸಿದ್ದಾರೆ. ಕೆಲವು ಆಯ್ದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 300 ಸ್ಟಾರ್ಟ್ಅಪ್‌ಗಳನ್ನು ಗುರುತಿಸುವುದು ಮತ್ತು ಅವರಿಗೆ 25 ಲಕ್ಷ ರೂ.ವರೆಗೆ ಆರಂಭಿಕ ಹಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

Last Updated : Aug 29, 2020, 06:39 PM IST
ಸ್ವಂತ ಉದ್ಯಮ ಆರಂಭಿಸಬೇಕೆ? Modi ಸರ್ಕಾರದ ಈ ಸ್ಪರ್ಧೆಯಲ್ಲಿ ಭಾಗವಹಿಸಿ, 25 ಲಕ್ಷ ರೂ. ಫಂಡ್ ಪಡೆಯಿರಿ title=

ನವದೆಹಲಿ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ಅವರು 'ಚುನೌತಿ' - ನೆಕ್ಸ್ಟ್ ಜನರೇಷನ್ ಸ್ಟಾರ್ಟ್ ಅಪ್ ಚಾಲೆಂಜ್ ಸ್ಪರ್ಧೆಯನ್ನು ಆರಂಭಿಸಿದ್ದಾರೆ. ಕೆಲವು ಆಯ್ದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 300 ಸ್ಟಾರ್ಟ್ಅಪ್‌ಗಳನ್ನು ಗುರುತಿಸುವುದು ಮತ್ತು ಅವರಿಗೆ 25 ಲಕ್ಷ ರೂ.ವರೆಗೆ ಆರಂಭಿಕ ಹಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ಟಾರ್ಟ್ ಅಪ್ ಗಳು STPI ವೆಬ್ಸೈಟ್ ಗಳಿಗೆ ಭೇಟಿ ನೀಡಿ ಅಥವಾ https://innovate.stpinext.in/ ಲಿಂಕ್ ಮೇಲೆ ಕ್ಲಿಕ್ಕಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಮೂರು ವರ್ಷಗಳ ಅವಧಿಗಾಗಿ ಬಜೆಟ್ ಅನ್ನು ಮೀಸಲಿರಿಸಲಾಗಿದೆ
ಈ ಸ್ಪರ್ಧೆಯ ಉದ್ದೇಶವು ದೇಶದ ಸಣ್ಣ ನಗರಗಳ ಮೇಲೆ ವಿಶೇಷ ಗಮನಹರಿಸಿ, ಅಲ್ಲಿನ ಸ್ಟಾರ್ಟ್ಅಪ್ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳಿಗೆ ಮತ್ತಷ್ಟು ಉತ್ತೇಜನ ನೀಡುವುದಾಗಿದೆ. 'ಚುನೌತಿ' - ನೆಕ್ಸ್ಟ್ ಜನರೇಷನ್ ಸ್ಟಾರ್ಟ್ಅಪ್ ಚಾಲೆಂಜ್ ಸ್ಪರ್ಧೆಯಡಿ, ಈ ಕಾರ್ಯಕ್ರಮಕ್ಕಾಗಿ ಸರ್ಕಾರ ಮೂರು ವರ್ಷಗಳ ಅವಧಿಗಾಗಿ 95.03 ಕೋಟಿ ರೂ. ಬಜೆಟ್ ಮೀಸಲಿರಿಸಿದೆ. ಈ ಹಣದಿಂದ, ಆಯ್ದ ವಲಯದಲ್ಲಿ ಕೆಲಸ ಮಾಡುವ ಸುಮಾರು 300 ಸ್ಟಾರ್ಟ್ಅಪ್‌ಗಳನ್ನು ಗುರುತಿಸಬೇಕಾಗಿದೆ ಮತ್ತು ಅವುಗಳಿಗೆ 25 ಲಕ್ಷ ರೂ.ಗಳ ಆರಂಭಿಕ ನಿಧಿ ಒದಗಿಸುವುದಾಗಿದೆ.

ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸ್ಟಾರ್ಟ್ ಅಪ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ
ಜನಸಾಮಾನ್ಯರಿಗಾಗಿ ಎಡ್ಯುಟೆಕ್, ಅಗ್ರಿ ಟೆಕ್ ಹಾಗೂ ಫಿನ್ ಟೆಕ್ ಸೊಲುಶನ್ಸ್ ನೀಡುವ ಸ್ಟಾರ್ಟ್ ಆಪ್ ಗಳು
ಸಪ್ಲೈ ಚೈನ್,ಲಾಜಿಸ್ಟಿಕ್ಸ್ ಹಾಗೂ ಟ್ರಾನ್ಸ್ಪೋರ್ಟ್ ಮ್ಯಾನೇಜ್ಮೆಂಟ್
ಬೇಸಿಕ್ ಇನ್ಫ್ರಾಸ್ಟ್ರಕ್ಚರ್ ಹಾಗೂ ರಿಮೋಟ್ ಒಬ್ಸರ್ವೆಶನ್
ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆ, ಪರಿಹಾರ, ತಡೆಗಟ್ಟುವಿಕೆ ಮತ್ತು ಮನೋವೈದ್ಯಕೀಯ ಆರೈಕೆ ಇತ್ಯಾದಿ ಕ್ಷೇತ್ರಗಳ ಸ್ಟಾರ್ಟ್ ಅಪ್ ಗಳು ಇದರಲ್ಲಿ ಶಾಮೀಲಾಗಿವೆ.

'ಚುನೌತಿ'  ಕಾರ್ಯಕ್ರಮದ ಮೂಲಕ ಆಯ್ಕೆಯಾದ ಸ್ಟಾರ್ಟ್ಅಪ್‌ಗೆ ದೇಶಾದ್ಯಂತ ಹರಡಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ಗಳ ಮೂಲಕ ಸರ್ಕಾರದಿಂದ ವಿವಿಧ ರೀತಿಯ ಸಹಾಯವನ್ನು ನೀಡಲಾಗುವುದು. ಅವರಿಗೆ ಇನ್ಕ್ಯೂಬೆಶನ್ ಫೆಸಿಲಿಟಿ, ಮಾರ್ಗದರ್ಶನ, ಭದ್ರತಾ ಪರೀಕ್ಷಾ ಸೌಲಭ್ಯಗಳು, ಸಾಹಸೋದ್ಯಮ ಬಂಡವಾಳಶಾಹಿ ಧನಸಹಾಯ, ಉದ್ಯಮದ ಒಳಗೊಳ್ಳುವಿಕೆ ಮತ್ತು ಕಾನೂನು ಸಲಹೆ, ಮಾನವ ಸಂಪನ್ಮೂಲ, ಐಪಿಆರ್ ಮತ್ತು ಪೇಟೆಂಟ್‌ಗಳಲ್ಲಿ ಸಹಾಯ ಮಾಡಲಾಗುವುದು. 25 ಲಕ್ಷ ರೂ.ಗಳ ಬೀಜ ನಿಧಿಯನ್ನು ಸಹ ನೀಡಲಾಗುವುದು, ದೊಡ್ಡ ಕ್ಲೌಡ್ ಸೇವೆಗಳನ್ನು ನೀಡುವ ಕಂಪನಿಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ಕ್ಲೌಡ್ ಕ್ರೆಡಿಟ್ ಸಹ ನೀಡಲಾಗುವುದು. ಪ್ರಿ-ಇನ್ಕ್ಯುಬೇಷನ್ ಪ್ರೋಗ್ರಾಂ ಅಡಿಯಲ್ಲಿ ಸ್ಟಾರ್ಟ್ ಅಪ್ ಗಳನ್ನು ಸಹ ಆಯ್ಕೆ ಮಾಡಬಹುದು. ಇದರ ಅಡಿಯಲ್ಲಿ, ಆರು ತಿಂಗಳವರೆಗೆ ವ್ಯವಹಾರ ಯೋಜನೆ ಮತ್ತು ಪರಿಹಾರವನ್ನು ಅಭಿವೃದ್ಧಿಪಡಿಸುವುದು ಸೂಕ್ತವಾಗಿದೆ. ಪ್ರತಿ ಇಂಟರ್ನ್‌ಗೆ (ಪ್ರಿ-ಇನ್ಕ್ಯುಬೇಷನ್ ಅಡಿಯಲ್ಲಿ) 6 ತಿಂಗಳವರೆಗೆ ಪ್ರತಿ ತಿಂಗಳು 10,000 ರೂ. ಧನ ಸಹಾಯ ನೀಡಲಾಗುವುದು.

Trending News