Jal Jeevan Mission - ಮಹಾತ್ಮ ಗಾಂಧೀಜಿಯವರ (Mahatma Gandhi Jayanti 2021) ಜಯಂತಿಯ ಅಂಗವಾಗಿ ಗುಜರಾತ್ ನಲ್ಲಿ ಜಲ ಜೀವನ ಮಿಷನ್ ನ ಫಲಾನುಭವಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪರಮಪೂಜ್ಯ ಬಾಪು (Mahatma Gandhi) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜೀ (Lal Bahadur Shastri), ಈ ಇಬ್ಬರು ಮಹಾನ್ ವ್ಯಕ್ತಿಗಳ ಹೃದಯದಲ್ಲಿ ಭಾರತದ ಹಳ್ಳಿಗಳೇ ನೆಲೆಸಿದ್ದವು ಎಂದು ಹೇಳಿದ್ದಾರೆ. ಈ ದಿನದಂದು ದೇಶಾದ್ಯಂತದ ಲಕ್ಷಾಂತರ ಗ್ರಾಮಗಳ ಜನರೊಂದಿಗೆ 'ಗ್ರಾಮ ಸಭೆಗಳ' ರೂಪದಲ್ಲಿ ಜಲ ಜೀವನ ಸಂವಾದವನ್ನು ನಡೆಸುತ್ತಿರುವುದು ನನಗೆ ಅತೀವ ಸಂತೋಷ ನೀಡುತ್ತಿದೆ. ಜಲ ಜೀವನ ಮಿಷನ್ (Jal Jeevan Mission) ನ ಉದ್ದೇಶ ದೇಶಾದ್ಯಂತ ಇರುವ ಜನರಿಗೆ ನೀರನ್ನು ತಲುಪಿಸುವುದು ಮಾತ್ರವಾಗಿರದೇ ಇದು ವಿಕೇಂದ್ರಿಕರಣದ ಒಂದು ಉತ್ತಮ ಚಳುವಳಿ ಇದಾಗಿದೆ ಎಂದು ಹೇಳಿದ್ದಾರೆ.. ಇದು ಗ್ರಾಮಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರು ನಡೆಸುವ ಒಂದು ಪ್ರಮುಖ ಚಳುವಳಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಾಮೂಹಿಕ ಚಳುವಳಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಈ ಆಂದೋಲನದ ಪ್ರಮುಖ ಆಧಾರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
I am happy that on this day, people from lakhs of villages across the country are conducting Jal Jeevan Samvad through 'Gram Sabhas'. Jal Jeevan Mission is not only to make water accessible to the people. It's also a big movement of decentralization: PM Narendra Modi pic.twitter.com/TObHwBHs07
— ANI (@ANI) October 2, 2021
'ಗ್ರಾಮ ಸ್ವರಾಜ್ಯ'ದ ನಿಜವಾದ ಅರ್ಥ ಆತ್ಮಬಲ ತುಂಬುವುದರಿಂದ ಪರಿಪೂರ್ಣವಾಗುತ್ತದೆ ಎಂದು ಗಾಂಧಿಜಿ ಹೇಳುತ್ತಿದ್ದರು. ಹೀಗಾಗಿ 'ಗ್ರಾಮ ಸ್ವರಾಜ್ಯದ' ಅವರ ಈ ಚಿಂತನೆ ಸಿದ್ಧಿಯತ್ತ ಮುಂದುವರೆಯಬೇಕು ಎಂಬುದು ನನ್ನ ನಿರಂತರ ಪ್ರಯತ್ನವಾಗಿದೆ. ಯಾಕೆ ಈ ಜನರಿಗೆ ದಿನನಿತ್ಯ ನೀರಿಗಾಗಿ ನದಿಗಳಿಗೆ ಮತ್ತು ಕೆರೆಗಳಿಗೆ ಈ ಜನರಿಗೆ ಯಾಕೆ ತೆರಳವೆಕಾಗುತ್ತದೆ ಮತ್ತು ಏಕೆ ನೀರು ಈ ಜನರ ಬಳಿ ತಲುಪುವುದಿಲ್ಲ ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ದೀರ್ಘಕಾಲದವರೆಗೆ ಈ ಕುರಿತು ನೀತಿ ನಿಯಮಗಳನ್ನು ರೂಪಿಸಬೇಕಾಗಿತ್ತು ಅವರು ಈ ಪ್ರಶ್ನೆಗಳನ್ನು ತಮ್ಮಷ್ಟಕ್ಕೆ ತಾವೇ ಕೇಳಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
This is a village-driven and women-driven movement. Its main base is mass movement & public participation. On the Jal Jeevan Mission app, every detail regarding this movement will be available in one place: PM Narendra Modi pic.twitter.com/dH5zHaMwbF
— ANI (@ANI) October 2, 2021
ಇದನ್ನೂ ಓದಿ-ಕೇಂದ್ರ ನೌಕರರಿಗೆ ಸೆಪ್ಟೆಂಬರ್ ಸಂಬಳದಲ್ಲಿ ಸಿಗಲಿದೆಯಾ Double Bonanza? ಇಲ್ಲಿದೆ ಬಿಗ್ ಅಪ್‌ಡೇಟ್
ನಾವು ಅಂತಹ ಅನೇಕ ಚಲನಚಿತ್ರಗಳನ್ನು ನೋಡಿದ್ದೇವೆ, ಕಥೆಗಳನ್ನು ಓದಿದ್ದೇವೆ, ಕವಿತೆಗಳನ್ನು ಓದಿದ್ದೇವೆ, ಅದರಲ್ಲಿ ಹಳ್ಳಿಯ ಮಹಿಳೆಯರು ಮತ್ತು ಮಕ್ಕಳು ಹೇಗೆ ಮೈಲಿ ದೂರದಲ್ಲಿ ನೀರು ತರಲು ಹೋಗುತ್ತಿದ್ದಾರೆ ಎಂಬುದನ್ನು ವಿವರವಾಗಿ ತೋರಿಸಲಾಗುತ್ತದೆ. ಕೆಲವು ಜನರ ಮನಸ್ಸಿನಲ್ಲಿ, ಹಳ್ಳಿಯ ಹೆಸರನ್ನು ತೆಗೆದುಕೊಂಡ ತಕ್ಷಣ ಈ ಚಿತ್ರವು ಹೊರಹೊಮ್ಮುತ್ತದೆ. ನಾನು ಗುಜರಾತ್‌ನಂತಹ ರಾಜ್ಯದಿಂದ ಬಂದಿದ್ದೇನೆ, ಅಲ್ಲಿ ನಾನು ಹೆಚ್ಚಿನ ಬರ ಪರಿಸ್ಥಿತಿಗಳನ್ನು ನೋಡಿದ್ದೇನೆ. ಪ್ರತಿ ಹನಿ ನೀರಿಗೂ ಎಷ್ಟು ಮಹತ್ವವಿದೆ ಎನ್ನುವುದನ್ನು ನಾನು ನೋಡಿದ್ದೇನೆ. ಅದಕ್ಕಾಗಿಯೇ ಗುಜರಾತ್ ಮುಖ್ಯಮಂತ್ರಿಯಾಗುವುದು, ಜನರಿಗೆ ನೀರು ತಲುಪುವುದು ಮತ್ತು ನೀರಿನ ಸಂರಕ್ಷಣೆ ನನ್ನ ಆದ್ಯತೆಯಾಗಿತ್ತು. ಇಂದು, ದೇಶದ 80 ಜಿಲ್ಲೆಗಳ 1.25 ಲಕ್ಷ ಹಳ್ಳಿಗಳಲ್ಲಿ ಪ್ರತಿ ಮನೆಗೂ ನೀರು ತಲುಪುತ್ತಿದೆ. ಅಂದರೆ, ಕಳೆದ 7 ದಶಕಗಳಲ್ಲಿ ಮಾಡಿದ ಕೆಲಸ, ಇಂದಿನ ಭಾರತವು ಕೇವಲ 2 ವರ್ಷಗಳಲ್ಲಿ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Almost 2 lakh villages have started waste management system & 40,000 gram panchayats decided to ban single-use plastic. The sale of Khadi and handicrafts have increased manifold. Today, the country is moving forward under Aatmanirbhar program: PM Modi pic.twitter.com/wDlkqvO9sH
— ANI (@ANI) October 2, 2021
ಇದನ್ನೂ ಓದಿ-ನವರಾತ್ರಿಯಿಂದ ಹಿಡಿದು ಕಾರವಾಚೌತ್ ವರೆಗೆ, ಅಕ್ಟೋಬರ್ ತಿಂಗಳ ಯಾವ ತಿಥಿಯಂದು ಯಾವ ವೃತ-ಹಬ್ಬ?
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 2019 ರವರೆಗೆ ನಮ್ಮ ದೇಶದಲ್ಲಿ ಕೇವಲ 3 ಕೋಟಿ ಮನೆಗಳಿಗೆ ಮಾತ್ರ ಕೊಳಾಯಿ ನೀರು ತಲುಪುತ್ತಿತ್ತು. 2019 ರಲ್ಲಿ ಜಲ ಜೀವನ ಮಿಷನ್ ಆರಂಭವಾದಾಗಿನಿಂದ, 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ನೀರಿನ ಸಮೃದ್ಧಿಯಲ್ಲಿ ವಾಸಿಸುವ ದೇಶದ ಪ್ರತಿಯೊಬ್ಬ ಪ್ರಜೆಗೂ ನಾನು ಹೇಳುತ್ತೇನೆ, ನೀರನ್ನು ಉಳಿಸಲು ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು. ಮತ್ತು ಇದಕ್ಕಾಗಿ ಜನರು ತಮ್ಮ ಅಭ್ಯಾಸಗಳನ್ನು ಸಹ ಬದಲಾಯಿಸಿಕೊಳ್ಳಬೇಕು. ಕಳೆದ ಕೆಲ ವರ್ಷಗಳಲ್ಲಿ, ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ. ಮನೆ ಮತ್ತು ಶಾಲೆಯಲ್ಲಿನ ಶೌಚಾಲಯಗಳು, ಅಗ್ಗದ ಸ್ಯಾನಿಟರಿ ಪ್ಯಾಡ್‌ಗಳು, ಗರ್ಭಾವಸ್ಥೆಯಲ್ಲಿ ಪೋಷಣೆಗಾಗಿ ಸಾವಿರಾರು ರೂಪಾಯಿಗಳು ಮತ್ತು ಲಸಿಕೆ ಅಭಿಯಾನಗಳು, ತಾಯಿಯ ಶಕ್ತಿಯನ್ನು ಬಲಪಡಿಸಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
PM Narendra Modi virtually launches the Rashtriya Jal Jeevan Kosh & Jal Jeevan Mission mobile application. pic.twitter.com/tEPLOS9lRt
— ANI (@ANI) October 2, 2021
ಇದನ್ನೂ ಓದಿ-ಈಗ ಈ ಗ್ರಾಹಕರಿಗೆ ಹೊಸ SIM ಖರೀದಿಸಲು ಸಾಧ್ಯವಿಲ್ಲ : ಸರ್ಕಾರದಿಂದ ಹೊಸ ನಿಯಮ ಜಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.